ಗುಣಮಟ್ಟದ ಶಿಕ್ಷಣವೇ ಗುರುದೇವ ವಿದ್ಯಾಸಂಸ್ಥೆಯ ಗುರಿ:ಅಧ್ಯಕ್ಷ ವಸಂತ ಬಂಗೇರ ಶ್ರೀ ಗುರುದೇವ ಕಾಲೇಜಿನಲ್ಲಿ ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮ

 

 

 

ಬೆಳ್ತಂಗಡಿ: ‘ಗುಣಮಟ್ಟದ ಶಿಕ್ಷಣವೇ ಶ್ರೀ ಗುರುದೇವ ವಿದ್ಯಾಸಂಸ್ಥೆಯ ಗುರಿಯಾಗಿದೆ. ಶಿಕ್ಷಣದ ಜೊತೆಗೆ ಕ್ರೀಡಾ ಮತ್ತು ಸಾಂಸ್ಕೃತಿಕವಾಗಿ ವಿದ್ಯಾರ್ಥಿಗಳನ್ನು ಸಾಧಕರಾಗಿ ಬೆಳೆಸುವ ಕಾರ್ಯ ಗುರುದೇವ ಸಂಸ್ಥೆಯಲ್ಲಿ ಆಗುತ್ತಿದೆ’ ಎಂದು ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.

ಅವರು ಸೋಮವಾರ ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಬೆಳ್ತಂಗಡಿ ಇದರ ಆಡಳಿತಕ್ಕೊಳಪಟ್ಟ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜು , ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು ಇದರ 2021-2022 ಶೈಕ್ಷಣಿಕ ಸಾಲಿನಲ್ಲಿ ಅರ್ಹ ವಿದ್ಯಾರ್ಥಿಗಳನ್ನು ಶೈಕ್ಷಣಿಕ ದತ್ತು ಸ್ವೀಕಾರ ಮಾಡಿದ ದಾನಿಗಳಿಗೆ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 

 

‘ಕಾಲೇಜು ನಡೆಸುವುದು ಸುಲಭದ ವಿಚಾರವಲ್ಲ. ವಿದ್ಯಾರ್ಥಿಗಳು, ಹೆತ್ತವರು ಮತ್ತು ದಾನಿಗಳ ಪೂರ್ಣ ಸಹಕಾರವಿದ್ದಾಗ ಮಾತ್ರ ಅದರ ಅಭಿವೃದ್ಧಿ ಸಾಧ್ಯವಾಗುವುದು. ಇಂದು ಕಾಲೇಜಿನಲ್ಲಿ ತಾಲ್ಲೂಕಿನ ಮಾತ್ರವಲ್ಲ ಹೊರ ತಾಲ್ಲೂಕಿನ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಸಾಧಿಸುತ್ತಿರುವುದು ಹೆಮ್ಮೆಯ ವಿಚಾರ’ ಎಂದರು.

ಶ್ರೀ ಗುರುದೇವ ಶಿಕ್ಷಣ ಸಂಸ್ಥೆಗಳ
ಉಪಾಧ್ಯಕ್ಷ ಪದ್ಮನಾಭ ಮಾಣಿಂಜ ಮಾತನಾಡಿ, ‘ ಸಮಾಜದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡುವ ಗುರಿಯೊಂದಿಗೆ ಹುಟ್ಟಿಕೊಂಡ ಈ ವಿದ್ಯಾಸಂಸ್ಥೆ ಇಂದು ಅದನ್ನು ಈಡೇರಿಸಿದೆ. ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳು ಮುಂದೆ ಈ ಸಂಸ್ಥೆಯ ದಾನಿಗಳಾಗುವ ಶಕ್ತಿವಂತರಾಗಿ ಬೆಳೆಯಬೇಕು’ ಎಂದರು.

 

 

ಅಳದಂಗಡಿ ಸುವರ್ಣ ಕ್ಲಿನಿಕ್ ನ ಡಾ.ಹರಿಪ್ರಸಾದ್ ಸುವರ್ಣ, ನಿವೃತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಸಮಾರಂಭದಲ್ಲಿ ಮಾತನಾಡಿದರು.
ವೇದಿಕೆಯಲ್ಲಿ ಸಂಸ್ಥೆಯ ಕೋಶಾಧಿಕಾರಿ ಗಂಗಾಧರ ಮಿತ್ತಮಾರ್ ಇದ್ದರು.
ಕರಾಟೆಯಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದ, ಪದವಿಯಲ್ಲಿ ಶೇ.100 ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು, ಹಾಗೂ ಎಲ್ಲಾ ಉಪನ್ಯಾಸಕರನ್ನು ಗೌರವಿಸಲಾಯಿತು.

ಪ.ಪೂ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ ಮತ್ತು ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಬಿ ತಮ್ಮ ವಿಭಾಗದ ಶೈಕ್ಷಣಿಕ ಸಾಧನಾ ವರದಿ ಮಂಡಿಸಿದರು.

ಉಪನ್ಯಾಸಕ ಶಮಿವುಲ್ಲಾ ಸ್ವಾಗತಿಸಿದರು. ಉಪನ್ಯಾಸಕರಾದ ಹರೀಶ್ ಪೂಜಾರಿ ಮತ್ತು ಪವಿತ್ರಾ ನಿರೂಪಿಸಿದರು. ಸನ್ಮಾನಿತರ ಪರಿಚಯವನ್ನು ಹೇಮಾವತಿ ಕೆ ನಿರ್ವಹಿಸಿದರು.
ಉಪನ್ಯಾಸಕ ರಾಕೇಶ್ ಕುಮಾರ್ ಧನ್ಯವಾದವಿತ್ತರು.

ಸನ್ಮಾನ

ವಿದ್ಯಾರ್ಥಿಗಳನ್ನು ಶೈಕ್ಷಣಿಕ ದತ್ತು ಸ್ವೀಕಾರ ಮಾಡಿದ ಪದ್ಮನಾಭ ಮಾಣಿಂಜ, ಚಿದಾನಂದ ಪುಜಾರಿ ಎಲ್ದಕ್ಕ, ಡಾ. ಹರಿಪ್ರಸಾದ್ ಸುವರ್ಣ, ವೀರಮ್ಮ ಮತ್ತು ಮಕ್ಕಳು ಡೊಂಕಬೆಟ್ಟು, ಕಿರಣ್ ಕುಮಾರ್ ಮಂಜಿಲ, ನಾರಾಯಣ ಸುವರ್ಣ, ಮನೋಹರ್ ಇಳಂತಿಲ, ಸಂಪತ್ ಮತ್ತು ಸನತ್ ಅಂಚನ್ ಕುಕ್ಕೇಡಿ, ಫೆಡ್ರಿಕ್ ಪಿಂಟೋ, ತೋಮಸ್ ಆರ್ ನೊರೋನ್ಹ ಅಂಡಿಂಜೆ, ಮೋಹನ್ ಕುಮಾರ್ ಕಲ್ಮಂಜ, ಶೇಖರ ಪೂಜಾರಿ ಕುಂಡದಬೆಟ್ಟು, ಶೇಖ್ ರಶೀದ್ ಬೆಳ್ತಂಗಡಿ, ಯುವವಾಹಿನಿ ಬೆಳ್ತಂಗಡಿ ಘಟಕ ಇವರನ್ನು ಅಭಿನಂದಿಸಲಾಯಿತು.

error: Content is protected !!