ಆಕಸ್ಮಿಕವಾಗಿ ನೀರಿಗೆ ಜಾರಿ ಬಿದ್ದು ಯುವಕ ನಾಪತ್ತೆ: ಮುಂಡಾಜೆ ಸಮೀಪದ ನೇತ್ರಾವತಿ ನದಿಗೆ ಸ್ನಾನಕ್ಕೆ ತೆರಳಿದ್ದ ಸಂದರ್ಭ ನಡೆದ ಘಟನೆ:

 

 

 

 

ಬೆಳ್ತಂಗಡಿ: ಸ್ನಾನಕ್ಕೆಂದು ತೆರಳಿದ ಯುವಕನೊಬ್ಬ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಮುಂಡಾಜೆ ಬಳಿ ನಡೆದಿದೆ.
ಮುಂಡಾಜೆ ಸಮೀಪದ ಪರಮುಖ ಎಂಬಲ್ಲಿ ಪುತ್ತೂರಿನ ಕಬಕ ನಿವಾಸಿ ಸುಮಾರು ಇಪ್ಪತ್ತು ವರ್ಷ ಪ್ರಾಯದ ಯುವಕನೊಬ್ಬ ತನ್ನ ಅಜ್ಜಿ ಮನೆಗೆ ಬಂದಿದ್ದು ಸ್ನಾನಕ್ಕೆಂದು ಸಮೀಪದ ನೇತ್ರಾವತಿ ನದಿಗೆ ಸಹೋದರ ಸಂಬಂಧಿಯೊಂದಿಗೆ  ಇಮದು  ಫೆ 20   ಸಂಜೆ ಹೊತ್ತಿಗೆ ಸ್ನಾನಕ್ಕೆಂದು ತೆರಳಿದ್ದು, ಈ ಸಂದರ್ಭ ಕಾಲು ಜಾರಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳೀಯರು ಹುಡುಕಾಟ ನಡೆಸಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಅವರು ಕೂಡ ಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಾಗಿದೆ.

error: Content is protected !!