ರಿಕ್ಷಾ, ಕಾರು ಡಿಕ್ಕಿ: ರಿಕ್ಷಾ ಚಾಲಕ, ವಿದ್ಯಾರ್ಥಿನಿ‌ ಸಹಿತ ಹಲವರಿಗೆ ಗಾಯ: ಲಾಯಿಲ ಗ್ರಾಮದ ಕಾಶಿಬೆಟ್ಟು ಬಳಿ ಘಟನೆ

 

 

 

ಬೆಳ್ತಂಗಡಿ: ಲಾಯಿಲ ಗ್ರಾಮದ ಕಾಶಿಬೆಟ್ಟು ಸಮೀಪದ ಖಾಸಗಿ ಕಾಲೇಜೊಂದರ ಬಳಿ ರಿಕ್ಷಾ ಕಾರು ಡಿಕ್ಕಿ ಸಂಭವಿಸಿ ವಿದ್ಯಾರ್ಥಿನಿ ಸೇರಿದಂತೆ ರಿಕ್ಷಾದಲ್ಲಿದ್ದ ಎಲ್ಲರಿಗೂ ಹಾಗೂ ಕಾರು ಚಾಲಕನಿಗೂ  ಗಾಯಗಳಾದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.ಬೆಳ್ತಂಗಡಿಯಿಂದ ಉಜಿರೆ ಕಡೆ ಹೋಗುತಿದ್ದ ಕಾರು ಉಜಿರೆಯಿಂದ ಬೆಳ್ತಂಗಡಿಗೆ   ಹೋಗುತಿದ್ದ  ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ರಿಕ್ಷಾದಲ್ಲಿದ್ದ ಎಲ್ಲರಿಗೂ ಗಾಯಗಳಾದ್ದು ರಿಕ್ಷಾ ಚಾಲಕ ಹಾಗೂ ವಿಧ್ಯಾರ್ಥಿನಿಯೋರ್ವಳಿಗೆ ಗಂಭೀರ ಗಾಯಗಳಾಗಿದೆ  ಎಂದು ತಿಳಿದು ಬಂದಿದೆ. ಎಲ್ಲರನ್ನೂ ತಕ್ಷಣ  ಉಜಿರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದು ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

error: Content is protected !!