ಅಭಿವೃದ್ಧಿ ಸಹಿಸಲಾಗದೆ ಆರೋಪ: ಸದ್ಯ ಓಡಾಟಕ್ಕೆ ರಸ್ತೆಯಾದರೂ ಇದೆ, ಹಿಂದೆ ಸುತ್ತಿ ಬಳಸಿ ಓಡಾಡಬೇಕಾದ ‌ಅನಿವಾರ್ಯತೆ ಇತ್ತು: ಕನ್ನಾಜೆ ನಿವಾಸಿಗಳಿಂದ ವಸಂತ ಬಂಗೇರ ಆರೋಪಗಳ‌ ಕುರಿತು ಸ್ಪಷ್ಟೀಕರಣ

 

 

 

ಬೆಳ್ತಂಗಡಿ:  ಹರೀಶ್ ಪೂಂಜ ಶಾಸಕರಾದ ನಂತರ ತಾಲೂಕಿನಲ್ಲಿ ಕಂಡು ಕೇಳರಿಯದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಇದನ್ನು ಸಹಿಸಲಾಗದ ಮಾಜಿ ಶಾಸಕ ವಸಂತ ಬಂಗೇರ ಅವರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಲಾಯಿಲ ಗ್ರಾಮದ ಕನ್ನಾಜೆ ನಿವಾಸಿಗಳು ಹೇಳಿದರು.
ಮಾಜಿ ಶಾಸಕ ವಸಂತ ಬಂಗೇರ ಅವರು ಲಾಯಿಲ ಕೋಟಿಕಟ್ಟೆ ಪ್ರಧಾನ ಮಂತ್ರಿ ಗ್ರಾಮ ಸಡಕ್  ರಸ್ತೆ ಬಗ್ಗೆ ಮಾಡುತ್ತಿರುವ ಸುಳ್ಳು ಆರೋಪಗಳ‌ ಕುರಿತು ಅವರು ಮಾಧ್ಯಮದ ಜೊತೆ ಮಾತನಾಡಿ ಸ್ಪಷ್ಟೀಕರಣ ನೀಡಿದರು.

 

 

ರಸ್ತೆ ಕಾಮಗಾರಿ ಕಳಪೆ ಗುಣ  ಮಟ್ಟದ್ದಾಗಿ ಅವೈಜ್ಞಾನಿಕವಾಗಿದೆ ಹಣ ದುರುಪಯೋಗವಾಗಿ ಹಾಗೂ ದೊಡ್ಡ ಅವ್ಯವಹಾರ ಆಗಿದೆ  ಪರ್ಸಂಟೇಜ್ ಮೂಲಕ ಕಾಮಗಾರಿ ನಡೆದಿದೆ ಎಂದು ಆರೋಪಿಸಿ  ಶಾಸಕ ಹರೀಶ್ ಪೂಂಜ  ವಿರುದ್ಧವೂ  ಸುಳ್ಳು ಆರೋಪ ಮಾಡಿದ್ದಾರೆ. ಅಭಿವೃದ್ಧಿಗೆ ಅಡ್ಡಿಪಡಿಸುವುದು ಸರಿಯಲ್ಲ. ಕಳೆದ 3 ವರುಷಗಳ ಹಿಂದೆ ನಮ್ಮ ಈ ರಸ್ತೆಯಲ್ಲಿ ನಡೆದು ಹೋಗಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು, ನಗರಕ್ಕೆ ಹೋಗಬೇಕಾದರೆ ಸುತ್ತಿ ಬಳಸಿ ಹೋಗುವಂತಹ ಕಷ್ಟದಾಯಕ ಪರಿಸ್ಥಿತಿಯಲ್ಲಿ ನಾವಿದ್ದೇವು. ಅದೆಷ್ಟೂ ಬಾರಿ ಮನವಿ ಮಾಡಿದರೂ ನಮ್ಮ ಮನವಿಗೆ ಮಾಜಿ ಶಾಸಕರು ಕಿವಿಕೊಡುವ ಗೋಜಿಗೆ ಹೋಗದೇ ದರ್ಪದಿಂದ ವರ್ತಿಸುತಿದ್ದರು . ಅದರೆ ಈಗ ಶಾಸಕ ಹರೀಶ್ ಪೂಂಜ, ನಮ್ಮ ಸಮಸ್ಯೆ ಬಗ್ಗೆ ಅರಿತು  ಅವರು  ಸಂಸದ ನಳೀನ್ ಕುಮಾರ್ ಕಟೀಲು  ಅವರಲ್ಲಿ ಈ ರಸ್ತೆಯ ಬಗ್ಗೆ    ಮಾಡಿದ ಮನವಿಯಂತೆ, ಅವರ ಮೂಲಕ ಈ ರಸ್ತೆ ಅಭಿವೃದ್ಧಿಯಾಗುತಿದ್ದು ನಮ್ಮ ಈ ಭಾಗದ ಜನರ ಹಲವು ವರುಷದ ಬೇಡಿಕೆ‌ ಈಡೇರುತ್ತಿದೆ ಅದರೆ ಇದನ್ನು ಸಹಿಸಲು ಆಗದೇ ಮಾಜಿ ಶಾಸಕ ವಸಂತ ಬಂಗೇರ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅದಲ್ಲದೇ ರಸ್ತೆಯ ಕಾಮಗಾರಿ ಸಂಪೂರ್ಣ ಅಗದಿದ್ದರೂ  ಕಳಪೆ ಕಾಮಗಾರಿ ಆಗಿದೆ ಎಂದು ಸುಳ್ಳು ಹೇಳುತಿದ್ದಾರೆ. ಈ ರೀತಿಯಲ್ಲಾದರೂ ಶಾಸಕರ ಅಭಿವೃದ್ಧಿಗೆ ಅಡ್ಡಿಪಡಿಸುವ ಚಿಂತೆಯಲ್ಲಿರುವ ಅವರು ತಾಲೂಕಿನ ಹಾಗೂ ನಮ್ಮ ಕನ್ನಾಜೆಯ ಹಿಂದಿನ  ಸ್ಥಿತಿಗತಿಗಳನ್ನು ಮೊದಲು ನೆನಪಿಸಿಕೊಳ್ಳಬೇಕು ಎಂದರು.

ಬಜಕ್ರೆಸಾಲು ಎಂಬಲ್ಲಿ ಹಿಂದೆ ಚಿಕ್ಕ ಕಿಂಡಿ ಅಣೆಕಟ್ಟು ಇದ್ದು ಅದರಲ್ಲಿ ಮಳೆಗಾಲ ಸಂದರ್ಭ ಆಚೀಚೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ನಾವೆಲ್ಲರೂ ಸೀಡ್ ಮೂಲಕ ಕಾಲುದಾರಿಯಲ್ಲಿ  ನಡೆದುಕೊಂಡು ಪೇಟೆಗೆ ಹೋಗುತಿದ್ದೇವು. ಈ ಸಮಸ್ಯೆಯ ಬಗ್ಗೆಯೂ ಶಾಸಕರಲ್ಲಿ ಮನವಿ ಮಾಡಿದಾಗ ಅದಕ್ಕೂ ಸ್ಪಂದಿಸಿ ಸೇತುವೆಯನ್ನೂ ಮಂಜೂರುಗೊಳಿಸಿ ನಮ್ಮ ಎಲ್ಲ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಅದ್ದರಿಂದ ಎಲ್ಲ ಅಭಿವೃದ್ಧಿ ಕಾರ್ಯಗಳು ಆಗುತ್ತಿರುವುದನ್ನು ಸಹಿಸಿಕೊಳ್ಳದ ಮಾಜಿ ಶಾಸಕರ ಈ ರೀತಿಯ ವರ್ತನೆ ನಮಗೆ ಬೇಸರ ಮೂಡಿಸಿದೆ.‌ ಅದ್ದರಿಂದ ಇನ್ನು ಮುಂದೆ ಈ ರೀತಿ   ಕೊಳಕು ರಾಜಕೀಯಕ್ಕಾಗಿ ಅಭಿವೃದ್ದಿ ವಿಚಾರಗಳ ಬಗ್ಗೆ ಅಪಸ್ವರ ಎತ್ತಿ ಅಡ್ಡಿ ಪಡಿಸಿದರೆ    ಪ್ರತಿಭಟನೆ ನಡೆಸಲಾದೀತು ಎಂದು ಎಚ್ಚರಿಕೆ ನೀಡಿದರು.

error: Content is protected !!