ಫೆ.19ರಂದು ಬೆಳಗ್ಗೆ ಬೆಂಗಳೂರಿನ ರೈಲು ನಿಲ್ದಾಣದಿಂದ ವಿಧಾನಸೌಧ ಡಾ. ಅಂಬೇಡ್ಕರ್ ಪ್ರತಿಮೆಯವರೆಗೆ ‘ವಿಧಾನ ಸೌಧ, ಹೈಕೋರ್ಟ್ ಚಲೋ ರಾಜ್ಯಮಟ್ಟದ ಬೃಹತ್ ಜಾಥಾ’: ರಾಯಚೂರಿನಲ್ಲಿ ಗಣರಾಜ್ಯೋತ್ಸವ ದಿನದಂದು ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ತೆರವು ಹಿನ್ನೆಲೆ ಜಾಥಾ: ಎಲ್ಲಾ ಹಂತದ ನ್ಯಾಯಾಲಯ ಸಭಾಂಗಣಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸಲು ಆದೇಶ ಹೊರಡಿಸುವಂತೆ ಆಗ್ರಹ

 

 

 

ಬೆಳ್ತಂಗಡಿ: ರಾಯಚೂರಿನಲ್ಲಿ ಗಣರಾಜ್ಯೋತ್ಸವ ದಿನದಂದೇ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಬಲವಂತವಾಗಿ ತೆರವುಗೊಳಿಸಿ ಅವಮಾನಿಸುವ ಮೂಲಕ ದೇಶದ ಕೋಟ್ಯಾಂತರ ಸಂವಿಧಾನ ಪ್ರೇಮಿಗಳ ಸ್ವಾಭಿಮಾನಕ್ಕೆ ಘಾಸಿಗೊಳಿಸಿದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ (ಪಾಟೀಲ) ಎಂಬಾತನ ಮೇಲೆ ಕಾನೂನಾತ್ಮಕ ಕ್ರಮಕೈಗೊಳ್ಳುವಂತೆ ಆಗ್ರಹಿಸಿ
ಎಲ್ಲಾ ಹಂತದ ನ್ಯಾಯಾಲಯ ಸಭಾಂಗಣಗಳಲ್ಲಿ ಬಾಬಾ ಸಾಹೇಬರ ಭಾವಚಿತ್ರ ಅಳವಡಿಸುವಂತೆ ಆದೇಶ ಹೊರಡಿಸುವಂತೆ ಆಗ್ರಹಿಸಿ
ನ್ಯಾಯಾಲಯದಲ್ಲಿ ಮೀಸಲಾತಿ/ಪ್ರಾತಿನಿಧ್ಯವನ್ನು ಒತ್ತಾಯಿಸಿ
ಹುಮ್ನಾಬಾದ್ ತಹಶಿಲ್ದಾರರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ
ಸಂವಿಧಾನ ಸಂರಕ್ಷಣಾ ಮಹಾಒಕ್ಕೂಟ – ಕರ್ನಾಟಕ ಇದರ ನೇತೃತ್ವದಲ್ಲಿ ಇದೇ
ಫೆ.19ರಂದು ಶನಿವಾರ ಬೆಳಗ್ಗೆ ಬೆಂಗಳೂರಿನ ರೈಲು ನಿಲ್ದಾಣದಿಂದ ವಿಧಾನಸೌಧದ ಬಾಬಾಸಾಹೇಬರ ಪ್ರತಿಮೆಯವರೆಗೆ
ವಿಧಾನ ಸೌಧ ಹೈಕೋರ್ಟ್ ಚಲೋ ರಾಜ್ಯಮಟ್ಟದ ಬೃಹತ್ ಜಾಥಾವನ್ನು ಆಯೋಜಿಸಲಾಗಿದೆ. ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಇದರ ತಾಲೂಕು ಪ್ರಧಾನ ಸಂಚಾಲಕ ನೇಮಿರಾಜ ಕಿಲ್ಲೂರು ಹೇಳಿದರು.ಅವರು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಜಧಾನಿ ಬೆಂಗಳೂರಿನಲ್ಲಿ ನಡೆದ ಮಹತ್ವದ ಐತಿಹಾಸಿಕ ಚಿಂತನಾ ಸಭೆಯಲ್ಲಿ ನಡೆದ ಚರ್ಚೆಯಂತೆ ರಾಜ್ಯದ ಹಿರಿಯ ಚಿಂತಕರ, ಸಾಮಾಜಿಕ ಹೋರಾಟಗಾರರ ಹಿರಿಯ ಮುಖಂಡರ ಮಾರ್ಗದರ್ಶನದಂತೆ ಕರ್ನಾಟಕದ
ಎಲ್ಲಾ ಸಂವಿಧಾನಪರ ಸಂಘ ಸಂಸ್ಥೆ , ಸೇನೆ- ವೇದಿಕೆ, ಸಮಿತಿ, ಸಂಘಟನೆ, ಒಕ್ಕೂಟಗಳೆಲ್ಲಾ ಒಂದೇ ಮಹಾ ಒಕ್ಕೂಟದಡಿ ಸೇರಿ ರಾಜಧಾನಿಯಲ್ಲಿ ನಡೆಯಲಿರುವ ಐತಿಹಾಸಿಕ ಸಮಾವೇಶದಲ್ಲಿ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳ ವಿವಿಧ ಸಂವಿಧಾನಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ಮಾನವಹಕ್ಕು ಸಂಘಟನೆಗಳು ಮುಂತಾದ ಸಂಘಟನೆಗಳು ಪೂರ್ಣಪ್ರಮಾಣದ ಬೆಂಬಲ ಘೋಷಿಸಿದ್ದು ಎಲ್ಲಾ ಸಂಘಟನೆಗಳೂ ಹೋರಾಟದಲ್ಲಿ ಭಾಗವಹಿಸಲಿವೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಳ್ತಂಗಡಿ ತಾಲೂಕು ಶಾಖೆಯ ನೇತೃತ್ವದಲ್ಲಿ ಸುಮಾರು 500 ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದೇವೆ.

ಪ್ರಕರಣದ ವಿರುದ್ಧ ಎಲ್ಲಾ ಜಿಲ್ಲೆ ತಾಲೂಕಿನ ಗ್ರಾಮ ಗ್ರಾಮಗಳಲ್ಲಿಯೂ ಪ್ರತಿಭಟನೆ ಹೋರಾಟ ಬಂದ್ ಗಳು ನಡೆದರೂ ವಿಧಾನಸೌಧದ ಮೂಲಕ ಆಡಳಿತ ನಡೆಸುತ್ತಿರುವ ರಾಜ್ಯ ಸರಕಾರವಾಗಲಿ ಹೈಕೋರ್ಟ್ ಆಗಲಿ ಈ ಗಂಭೀರ ಪ್ರಕರಣದ ಬಗ್ಗೆ ಮಾತಾಡದೆ ಮೌನವಾಗಿರುವ ನಡೆಯನ್ನು ವಿಧಾನಸೌಧ ಹೈಕೋರ್ಟ್ ಮುಂದೆಯೇ ಲಕ್ಷಾಂತರ ಜನಸೇರಿ ಖಂಡಿಸೋಣ ಸಂವಿಧಾನಾತ್ಮಕವಾಗಿ ನ್ಯಾಯ ಪಡೆಯೋಣ.
ದಯಮಾಡಿ ಈಗಿನಿಂದಲೇ ಸ್ವಯಂಪ್ರೇರಣೆಯಿಂದ ಲಕ್ಷೋಪಲಕ್ಷ ಸಂವಿಧಾನ ಪ್ರೇಮಿಗಳು ಆ ದಿನ ರಾಜಧಾನಿಗೆ ಹರಿದುಬರಲು ತಯಾರಿ ಮಾಡಿಕೊಳ್ಳಬೇಕಾಗಿದೆ.
ಸನ್ಮಾನಕ್ಕೆ ಆಸೆಪಡದೆ ಅಪಮಾನಕ್ಕೆ ಅಂಜದೆ ಬಿಸಿಲು ಮಳೆ ಬಿರುಗಾಳಿಗಳನ್ನು ಲೆಕ್ಕಿಸದೆ ಬಾಬಾಸಾಹೇಬರ ಚಳುವಳಿಯ ಭಾಗವಾದ ಈ ರಾಜ್ಯಮಟ್ಟದ ಸಮಾವೇಶವನ್ನು ಯಶಸ್ಸುಗೊಳಿಸಬೇಕಾಗಿದೆ.
ದೇಶದ ಸಂವಿಧಾನದ
ಚಿರ ಋಣಿಗಳಾಗಿರುವ ತಾಲೂಕಿನ ಎಲ್ಲಾ ಸಾಮಾಜಿಕ ಮತ್ತು ಸಂವಿಧಾನಪರ ಸಂಘಟನೆಗಳ ನಾಯಕರು, ಕಾರ್ಯಕರ್ತರು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿ ಮಾಧ್ಯಮಗಳ ಮೂಲಕ ಕರೆ ನೀಡುತ್ತಿದ್ದೇವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮುಖಂಡರುಗಳಾದ ಶೇಖರ್ ಕುಕ್ಕೇಡಿ, ಬಿ.ಕೆ ವಸಂತ, ಚಂದು ಎಲ್, ನಾಗರಾಜ ಲಾಯಿಲ, ಉಪಸ್ಥಿತರಿದ್ದರು.

error: Content is protected !!