ಬೆಳ್ತಂಗಡಿ: ಹಿರಿಯ ವಕೀಲರಾದ ಶ್ರೀಧರ ಗೌಡ(63) ಅನಾರೋಗ್ಯದಿಂದ ಶನಿವಾರ ನಿಧನ ಹೊಂದಿದ್ದಾರೆ. ಕಳೆದ ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಅವರು ಇಂದು ನಿಧನಹೊಂದಿದ್ದಾರೆ.ಮೂಲತಃ ಕಡಿರುದ್ಯಾವರ ಗ್ರಾಮದ ಕಾನರ್ಪ ಕೌಡಂಗೆ ನಿವಾಸಿಯಾಗಿದ್ದ ಇವರು ಬೆಳ್ತಂಗಡಿ ಸಂಜಯನಗರ ಎಂಬಲ್ಲಿ ವಾಸವಿದ್ದರು. ಸುಮಾರು 36ವರ್ಷಗಳ ಕಾಲ ವೃತ್ತಿ ಸೇವೆ ಸಲ್ಲಿಸಿದ ಇವರು ಮೃತರು ಪತ್ನಿ ವಿದ್ಯಾ ಹಾಗೂ ಮಗಳಾದ ವೈಷ್ಣವಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಬೆಳ್ತಂಗಡಿ ವಕೀಲರ ಸಂಘ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ