ವ್ಯಾಲೆಂಟೈನ್ಸ್ ಡೇ ವಿಕೃತಿಯನ್ನು ತ್ಯಜಿಸಿ: ಭಾರತೀಯ ಸಂಸ್ಕ್ರತಿ ಅಂಗೀಕರಿಸಿ ಪಾಶ್ಚಿಮಾತ್ಯ ‘ಡೇ’ ಸಂಸ್ಕೃತಿಯ ಹಿಂದೆ ಆರ್ಥಿಕ ಲೂಟಿಯ ಜೊತೆಗೆ ಮತಾಂತರದ ಸಂಚು !

 

 

 

 

ಬೆಂಗಳೂರು:‘ರೋಸ್ ಡೇ’, ‘ಫ್ರೆಂಡ್‌ಶಿಪ್ ಡೇ’, ‘ಚೊಕೊಲೇಟ್ ಡೇ’, ‘ವ್ಯಾಲೆಂಟೈನ್ಸ್ ಡೇ’ ಮುಂತಾದ ಪಾಶ್ಚಾತ್ಯ ದಿನಗಳನ್ನು ಆಚರಿಸುವಂತೆ ಮಾಡಿ ಫೆಬ್ರವರಿ 7 ರಿಂದ 14 ರ ವರೆಗೆ ಭಾರತೀಯ ಯುವಕರನ್ನು ಸುಲಿಗೆ ಮಾಡುವ ಅಂತಾರಾಷ್ಟ್ರೀಯ ಕಂಪನಿಗಳ ದೊಡ್ಡ ಸಂಚು ನಡೆಯುತ್ತಿದೆ. ಇದರಲ್ಲಿ ಹಲವು ವಿದೇಶಿ ಕಂಪನಿಗಳು ಶುಭಾಶಯ ಪತ್ರ, ಉಡುಗೊರೆ, ಚೊಕೊಲೇಟ್ ಇತ್ಯಾದಿ ತಯಾರಿಕೆಯಲ್ಲಿ ತೊಡಗಿದ್ದು, ಈ ಕಂಪನಿಗಳು ಯುವಕರಲ್ಲಿ ‘ಡೇ’ ಸಂಸ್ಕೃತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಮಾಡುತ್ತಿವೆ. ಪಾಶ್ಚಾತ್ಯ ‘ಡೇ’ಯ ಮಾಧ್ಯಮದಿಂದ 12 ರಿಂದ 20 ಬಿಲಿಯನ್ ಡಾಲರ್ಸ್ ವ್ಯವಹಾರ ನಡೆಯುತ್ತದೆ. ಈಗ ಇದು ಕೇವಲ ‘ಡೇ’ಗಳಿಗೆ ಸೀಮಿತವಾಗದೆ ಹಿಂದೂಗಳ ದೀಪಾವಳಿ ಮತ್ತಿತರ ಹಬ್ಬಗಳಿಗೆ ಭಾರತೀಯ ಸಾಂಪ್ರದಾಯಿಕ ಸಿಹಿತಿಂಡಿಗಳ ಬದಲು ಬಂಧುಮಿತ್ರರಿಗೆ ‘ಕ್ಯಾಡ್ಬರಿ’ ಉಡುಗೊರೆ ನೀಡಿ ಎಂಬಂತಹ ಜಾಹೀರಾತು ನೀಡಿ ಭಾರಿ ಹಣ ಲೂಟಿ ಮಾಡಲಾಗುತ್ತಿದೆ. ಆರ್ಥಿಕ ಲೂಟಿಯ ಜೊತೆಗೆ ಭಾರತೀಯರನ್ನು ಮತಾಂತರಿಸುವ ಷಡ್ಯಂತ್ರವೂ ನಡೆಯುತ್ತಿದೆ ಎಂದು ಬೆಂಗಳೂರಿನ ಉದ್ಯಮಿ ಶ್ರೀ. ಸ್ವದೇಶಿ ಪ್ರಶಾಂತ ಇವರು ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ವ್ಯಾಲೆಂಟೈನ್ಸ್ ಡೇ’ಯ ವಿಕೃತಿ ತ್ಯಜಿಸಿ; ಭಾರತೀಯ ಸಂಸ್ಕೃತಿ ಅಂಗೀಕರಿಸಿ!’ ಎಂಬ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಉತ್ತರಪ್ರದೇಶದ ‘ಸನಾತನ ಏಕತಾ ಮಿಶನ್’ನ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಅಶೋಕ ಪಾಠಕ್ ಅವರು ಹಿಂದೂ ಸಂಸ್ಕೃತಿಯು ಮನುಷ್ಯರನ್ನು ಮಾತ್ರವಲ್ಲ ಎಲ್ಲರನ್ನೂ ಪ್ರೀತಿಸಲು ಕಲಿಸುತ್ತದೆ; ಆದರೆ, ಅಧ್ಯಯನದ ಕೊರತೆಯಿಂದ ‘ಡೇ’ ಸಂಸ್ಕೃತಿಯನ್ನು ‘ಎಂಜಾಯ್’ ಮಾಡುವ ಹಿಂದೆ ಬಿದ್ದಿರುವ ಇಂದಿನ ಯುವವರ್ಗವು ಶಿಕ್ಷಣ ಮತ್ತು ಬ್ರಹ್ಮಚರ್ಯವನ್ನು ತೊರೆದು ಭ್ರಾಮಕ ಪ್ರೀತಿಯ ಹಿಂದೆ ಓಡುತ್ತಿದೆ. ಇದರಿಂದ ಅವರಲ್ಲಿ ದೈಹಿಕ ಮತ್ತು ಮಾನಸಿಕ ವಿಕೃತಿಗಳು ಸೃಷ್ಟಿಯಾಗಿ ಜೀವನವೇ ವ್ಯರ್ಥವಾಗುತ್ತಿದೆ. ಮುಖ್ಯವಾಗಿ ಮಿಶನರಿ ಶಾಲೆಗಳ ಮೂಲಕ ಹಿಂದೂ ಸಂಸ್ಕಾರಗಳನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತಿದೆ. ಈ ವೇಳೆ ಚಾಲೀಸಗಾಂವದಿಂದ ಭಾಜಪದ ತಾಲೂಕಾಧ್ಯಕ್ಷ ಶ್ರೀ. ಸುನೀಲ ನಿಕಮ್ ಅವರು ಮಾತನಾಡುತ್ತಾ, ‘ವ್ಯಾಲೆಂಟೈನ್ಸ್ ಡೇ’ ಇದು ವಿಕೃತಿಯಾಗಿದ್ದು, ಇದು ಯುವಕ-ಯುವತಿಯರ ಪ್ರಾಣಕ್ಕೆ ಅಪಾಯ ತಂದೊಡ್ಡಿದೆ. ಈ ಪಾಶ್ಚಿಮಾತ್ಯ ‘ಡೇ’ದಿಂದ ‘ಲವ್ ಜಿಹಾದ್’ಗೆ ಕುಮ್ಮಕ್ಕು ಸಿಗುತ್ತಿದ್ದು ಕೆಲವು ಮುಸ್ಲಿಂ ಸಂಘಟನೆಗಳು ಅದನ್ನು ಉದ್ದೇಶಪೂರ್ವಕವಾಗಿ ಹರಡುತ್ತಿವೆ. ಹಿಂದೂಗಳು ಈ ಬಗ್ಗೆ ಜಾಗೃತರಾಗಬೇಕು, ಎಂದರು.
ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಯುವ ಸಂಘಟಕರಾದ ಶ್ರೀ. ಹರ್ಷದ್ ಖಾನ್ವಿಲ್ಕರ್ ಅವರು ಮಾತನಾಡುತ್ತಾ, 1969 ರಲ್ಲಿ ರೋಮನ್ ಕ್ಯಾಥೋಲಿಕ್ ಚರ್ಚ್ ತಥಾಕಥಿತ ‘ಸಂತ ವ್ಯಾಲೆಂಟೈನ್’ರ ಅಸ್ತಿತ್ವದ ಬಗ್ಗೆ ಯಾವುದೇ ಪುರಾವೆ ಇಲ್ಲದ ಕಾರಣ ತನ್ನ ಕ್ಯಾಲೆಂಡರ್.ದಿಂದ ‘ವ್ಯಾಲೆಂಟೈನ್’ರ ಹೆಸರನ್ನು ತೆಗೆದುಹಾಕಿತು. ಅದೇ ರೀತಿ ರಷ್ಯಾದ ಬೆಲ್‌ಗ್ರೇಡ್, ಅಮೇರಿಕಾದ ಫ್ಲೋರಿಡಾ ವಿಶ್ವವಿದ್ಯಾಲಯ, ಚೀನಾ, ಇಟಲಿ, ಸ್ವೀಡನ್, ಉತ್ತರ ಕೊರಿಯಾ, ಇಥಿಯೋಪಿಯಾ ಇತ್ಯಾದಿಗಳಲ್ಲಿಯೂ ಇದನ್ನು ಆಚರಿಸಲಾಗುವುದಿಲ್ಲ. ಹಾಗಾದರೆ ಭಾರತದಲ್ಲಿಯೇ ‘ವ್ಯಾಲೆಂಟೈನ್ಸ್ ಡೇ ಏಕೆ? ವಿವಿಧ ಕಂಪನಿಗಳು ಯುವಕರನ್ನು ಸೆಳೆಯುವ ಮೂಲಕ ತಮ್ಮ ಗಲ್ಲಾಪೆಟ್ಟಿಗೆ ತುಂಬಿಸುತ್ತಿವೆ. ಇದರ ವಿರುದ್ಧ ಹಿಂದೂಗಳು ಶಾಲಾ-ಕಾಲೇಜುಗಳಿಗೆ ತೆರಳಿ ಯುವಕರಿಗೆ ತಿಳುವಳಿಕೆ ನೀಡಬೇಕು ಮತ್ತು ಇಂತಹ ಜಾಹೀರಾತು ಬಿತ್ತರಿಸುವ ಕಂಪನಿಗಳನ್ನು ಕಾನೂನು ರೀತಿಯಲ್ಲಿ ವಿರೋಧಿಸಬೇಕು. ನಮ್ಮ ಯುವಕರಿಗೆ ಧರ್ಮಶಿಕ್ಷಣ ನೀಡಬೇಕು ಎಂದು ಪ್ರತಿಪಾದಿಸಿದರು.

error: Content is protected !!