ಬೆಳ್ತಂಗಡಿ : ಭಜನೆ ಇದ್ದಲ್ಲಿ ವಿಭಜನೆ ಇಲ್ಲ ಎನ್ನುವ ಮಾತಿನಂತೆ ನಮ್ಮ ತಾಲೂಕಿನ ಎಲ್ಲರೂ ಒಟ್ಟಾಗಿ ಒಗ್ಗಟ್ಟಾಗಿ ಮುನ್ನಡೆಯುವ ಜೊತೆಗೆ ನಮ್ಮ ಮಣ್ಣಿನ ಅಂತರ್ಸತ್ವವನ್ನು ಪಾಲಿಸಿಕೊಂಡು ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಭಜನಾ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಶಾರದಾಂಬ ಭಜನಾ ಮಂಡಳಿ ಬುಳೆಕ್ಕರ ಕುಕ್ಕೇಡಿಯಲ್ಲಿ
ವಿಶ್ವ ಹಿಂದೂ ಪರಿಷತ್ ಮತ್ತು ಶ್ರಮಿಕ ಸೇವಾ ಟ್ರಸ್ಟ್ ಬೆಳ್ತಂಗಡಿ ವತಿಯಿಂದ ತಾಲೂಕಿನ ಭಜನಾ ಮಂಡಳಿಗಳಿಗೆ ಆಯೋಜಿಸಿದ ಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಭಜನಾ ಮಂಡಳಿಗಳನ್ನು ಉತ್ತೇಜಿಸುವ ದೃಷ್ಠಿಯಿಂದ, ಯುವ ಜನತೆಯಲ್ಲಿ ಸಧ್ವಿಚಾರ ಧಾರೆಯನ್ನು, ಧಾರ್ಮಿಕ ಜಾಗೃತಿಯನ್ನು ಪ್ರೇರೇಪಿಸುವ ಸದಾಶಯದೊಂದಿಗೆ ತಾಲೂಕಿನ ಭಜನಾ ಮಂಡಳಿಗಳಿಗೆ ತಾಲೂಕು ಮಟ್ಟದ ಭಜನಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ .ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ವಿಭಾಗ ಸಹ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ, ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷ ದಿನೇಶ್ ಚಾರ್ಮಾಡಿ,ವೇಣೂರು ಪ್ರಖಂಡದ ಅಧ್ಯಕ್ಷ ಶಶಾಂಕ್ ಭಟ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.