ಹರತಾಳು ಹಾಲಪ್ಪ ಸುಮಾರು 300 ಲಾರಿ ಮಾಲಿಕರಿಂದ ಹಣ ಪಡೆದಿರುವುದು ಸತ್ಯ: ಅವರು ತಪ್ಪು ಮಾಡಿದ್ದಾರೆ ಎಂದು ಪ್ರಮಾಣ ಮಾಡಿದ್ದೇನೆ: ಧರ್ಮಸ್ಥಳದಲ್ಲಿ ಬೇಳೂರು ಗೋಪಾಲಕೃಷ್ಣ ಹೇಳಿಕೆ

 

 

ಧರ್ಮಸ್ಥಳ: ಹರತಾಳು ಹಾಲಪ್ಪ ಅವರ ವಿರುದ್ಧ ಆರೋಪ ಮಾಡಿದ್ದೆ. ಮರಳು ದಂಧೆಯಲ್ಲಿ ದುಡ್ಡು ತಗೊಂಡಿದ್ದಾರೆ. ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಹೇಳಿದ್ದೆ. ಅದಲ್ಲದೇ ದುಡ್ಡು ಕೊಟ್ಟವರೂ ಕೂಡ ನನ್ನೊಟ್ಟಿಗೆ ಇದ್ದಾರೆ. ನೂರಕ್ಕೆ ನೂರು ಸತ್ಯ ಅವರು ಸುಮಾರು 300 ಲಾರಿ ಮಾಲಿಕರಿಂದ ಹಣ ಪಡೆದಿದ್ದಾರೆ ಅದರಲ್ಲಿ 30 ಜನ ಅವರ ಪರವಾಗಿ ಸಾಕ್ಷಿ ನೀಡಬಹುದು. ಮರಳು ನೀತಿಯನ್ನು ಯಾಕೆ ಸಡಿಲಗೊಳಿಸಿಲ್ಲ? ಸರ್ಕಾರಕ್ಕೆ ಹಣ ಕಟ್ಟಿ ಮರಳು ಯಾಕೆ ನೀಡುವುದಿಲ್ಲ. ಕಮೀಷನ್ ದಂಧೆಗಾಗಿ ಈ ರೀತಿ ನಡೆಯುತ್ತಿದೆ. ಈಗಾಲೇ ನಾನೂ ಕೂಡ ಮಂಜುನಾಥ ಸ್ವಾಮಿಯ ದರುಶನ ಮಾಡಿ ಅವರು ತಪ್ಪು ಮಾಡಿದ್ದಾರೆ ಎಂದು ಪ್ರಮಾಣ ಮಾಡಿದ್ದೇನೆ. ಅದರೆ ಅವರು ಪ್ರಮಾಣ ಮಾಡಿ ಹೋಗಿದ್ದೇನೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ಆ ಮಂಜುನಾಥನೇ ಸಾಕ್ಷಿ ಎಂದರು.
ಅವರು ಹರತಾಳು ಹಾಲಪ್ಪ ಆಣೆ ಪ್ರಮಾಣದ ಬಳಿಕ ದೇಗುಲಕ್ಕೆ ಆಗಮಿಸಿ, ಆರೋಪಗಳ ಕುರಿತು ಆಣೆಪ್ರಮಾಣ ನಡೆಸಿ ಮಾಧ್ಯಮಗಳ ಜೊತೆ ಮಾತನಾಡಿದರು.
ನಾನು ಇಲ್ಲಿಗೆ ಬರುವುದಿಲ್ಲ ಪಲಾಯನವಾದಿ ಎಂದು ಹೇಳಿದ್ದಾರೆ. ಗೋವಾ ಚುನಾವಣೆ ಬಗ್ಗೆ ನಾನು ಹೋಗಬೇಕಾಗಿತ್ತು. ಅದರೆ ಇದಕ್ಕಾಗಿಯೇ ಅದನ್ನು ರದ್ದುಗೊಳಿಸಿ ಕ್ಷೇತ್ರಕ್ಕೆ ಬಂದಿದ್ದೇನೆ. ನಾವು ಪಲಾಯನ ಮಾಡುವ ಪ್ರಶ್ನೆಯೇ ಇಲ್ಲ. ಎಲ್ಲರಿಗೂ ಇವತ್ತು ಬರುವಂತೆ ನೋಟಿಸ್ ಕೊಟ್ಟ ನಂತರ ಅವರು ಇರಬೇಕಿತ್ತು. ನಮ್ಮನ್ನು ಸ್ವಲ್ಪ ಕಾಯಬೇಕಿತ್ತು. ಎಲ್ಲರನ್ನೂ ಬರುವಂತೆ ಹೇಳಿ ಹಾಲಪ್ಪನವರು ಬೇಗ ಪ್ರಮಾಣ ಮಾಡಿ ಹೋಗಿದ್ದೇನೆ ಎಂದು ಹೇಳುತ್ತಿದ್ದಾರೆ ಎಂದರು.
ಹಲವು ದಿನಗಳ ವಾದ ವಿವಾದ ಅಣೆ ಪ್ರಮಾಣ ಇವತ್ತು ಅಂತ್ಯಗೊಳಿಸಿದ್ದೇವೆ. ಇವತ್ತು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದಿದ್ದೇವೆ ದೇವರ ದರುಶನ ಮಾಡಿದ್ದೇವೆ. ಅದರೆ ಹಾಲಪ್ಪನವರು ನಮ್ಮನ್ನು ಇಲ್ಲಿಗೆ ಬರುವಂತೆ ತಿಳಿಸಿ, ಅವರೂ ಇರಬೇಕಿತ್ತು. ಅದರೆ ಅವರು ಬೇಗ ಬಂದ್ದು ಪ್ರಮಾಣ ಮಾಡಿ ಹೋಗಿದ್ದೇನೆ ಎಂದು ಹೇಳುತ್ತಿದ್ದಾರೆ. ಇಡೀ ರಾಜ್ಯ ನೋಡುತ್ತಿದೆ. ಈ ಸ್ಥಳ ನಂಬಿಕೆಯ ಮೂಲ ಸ್ಥಳವಾಗಿದೆ. ಇಲ್ಲಿ ಅವರು ಏನೂ ಮಾಡಿಲ್ಲ ಎಂದು ಹೇಳಿ ಹೋಗಿದ್ದಾರೆ. ಅದಕ್ಕೆ ಸಾಕ್ಷಿ ಮಂಜುನಾಥೇಶ್ವರ ಆಗಿದ್ದಾನೆ‌ ಎಂದರು.

error: Content is protected !!