ಯುವೋತ್ಸವ’ ರಾಜ್ಯ ಮಟ್ಟದ ಆನ್ಲೈನ್ ಭಾಷಣ ಸ್ಪರ್ಧೆ: ಬೆಳ್ತಂಗಡಿ ಮಂಜುಶ್ರೀ ಜೆಸಿಐನಿಂದ ಆಯೋಜನೆ: ‘ಯುವ ಮನಸ್ಸುಗಳಲ್ಲಿ ಸ್ವಾಮಿ ವಿವೇಕಾಂದರು’‌ ವಿಷಯ

 

 

 

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ‘ಯುವೋತ್ಸವ’ ಸ್ವಾಮಿ ವಿವೇಕಾನಂದರ 159 ನೆ ಜನ್ಮದಿನಾಚರಣೆ ಪ್ರಯುಕ್ತ ‘ಯುವ ಮನಸ್ಸುಗಳಲ್ಲಿ ಸ್ವಾಮಿ ವಿವೇಕಾಂದರು’ ಎಂಬ ವಿಷಯದಲ್ಲಿ ರಾಜ್ಯ ಮಟ್ಟದ ಆನ್ಲೈನ್ ಭಾಷಣ ಸ್ಪರ್ಧೆ ನಡೆಯಲಿದೆ ಎಂದು ಜೆಸಿಐ ಅಧ್ಯಕ್ಷ ಪ್ರಸಾದ್ ಬಿ.ಎಸ್ ಹೇಳಿದರು.
ಅವರು ಗುರುವಾರ ಬೆಳ್ತಂಗಡಿ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,’ ಸ್ಪರ್ಧಾ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ವಿಶೇಷ ಬಹುಮಾನ ಹಾಗೂ ಜೆಸಿಐ ಟ್ರೋಫಿಯನ್ನು ನೀಡಲಾಗುವುದು. ಕನ್ನಡ ಭಾಷೆಯಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಮುಕ್ತವಾಗಿ ಭಾಗವಹಿಸಬಹುದು ಎಂದರು.
ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಭಾಷಣವನ್ನು ವೀಡಿಯೋ ಚಿತ್ರೀಕರಣ ಮಾಡಿ ತಮ್ಮ ಸ್ವ ವಿವರದ ಜೊತೆಗೆ ಫೆ.24 ರ ಒಳಗೆ ‘8971689755’ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿಕೊಡಬೇಕು. ಚಿತ್ರೀಕರಣ ಮಾಡಿರುವ ವೀಡಿಯೋ ಮತ್ತು ಆಡಿಯೋ ಸ್ಪಷ್ಟವಾಗಿ ಇರಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು ಫಲಿತಾಂಶವನ್ನು ಮಾ. 3ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಿಕಟಪೂರ್ವ ಅಧ್ಯಕ್ಷ ಸ್ವರೂಪ್ ಶೇಖರ್, ಪೂರ್ವಾಧ್ಯಕ್ಷರಾದ ನಾರಾಯಣ ಶೆಟ್ಟಿ, ಸಂತೋಷ್ ಪಿ. ಕೋಟ್ಯಾನ್, ಕಾರ್ಯದರ್ಶಿ ಶಂಕರ್ ರಾವ್, ಕಾರ್ಯಕ್ರಮ ಸಂಯೋಜಕ ಚಂದ್ರಹಾಸ ಬಳಂಜ ಇದ್ದರು.

error: Content is protected !!