ರಾಜ್ಯ ಮೆಚ್ಚುವ ಮಾದರಿ ಶಾಸಕನಾಗಿ ಹರೀಶ್ ಪೂಂಜ ಮೂಡಿ ಬಂದಿದ್ದಾರೆ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷ ಸೈಯದ್ ಸಲಾಂ ಹೇಳಿಕೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಬೆಳ್ತಂಗಡಿ ಮಂಡಲ ಪದಾಧಿಕಾರಿಗಳ ಜನಪ್ರತಿನಿಧಿಗಳ ಸಭೆ,ಹಾಗೂ ಸಂವಾದ ಕಾರ್ಯಕ್ರಮ.

 

 

 

ಬೆಳ್ತಂಗಡಿ: ಸಾಮಾನ್ಯ ಕಾರ್ಯಕರ್ತನಾಗಿ ತನ್ನ ಬದ್ಧತೆ ಹಾಗೂ ಅರ್ಹತೆಯಿಂದಾಗಿ ಬೆಳ್ತಂಗಡಿಯ ಜನಪ್ರಿಯ ಯುವ ಶಾಸಕ ಹರೀಶ್ ಪೂಂಜ ಇಡೀ ರಾಜ್ಯ ಮೆಚ್ಚುವ ಮಾದರಿ ಶಾಸಕನಾಗಿ ಮೂಡಿ ಬಂದಿದ್ದಾರೆ. ಎಂದು
ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷ ಸೈಯದ್ ಸಲಾಂ ಹೇಳಿದರು. ಅವರು ಬೆಳ್ತಂಗಡಿ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಬೆಳ್ತಂಗಡಿ ಮಂಡಲದ ಪದಾಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

 

 

ಚುನಾವಣೆಯಲ್ಲಿ ಗೆದ್ಧಂತಹ ಕೆಲವರಿಗೆ ಯೋಗ್ಯತೆ ಇರುತ್ತದೆ ಅದರೆ ಬದ್ಧತೆ ಇರುವುದಿಲ್ಲ . ನಮ್ಮನ್ನು ಗೆಲ್ಲಿಸಿದ ಜನರಿಗೆ ಬದ್ಧತೆಯಿಂದ ಯಾವ ರೀತಿಯ ಸೇವೆಯನ್ನು ನೀಡಬಹುದು. ಅದೇ ರೀತಿ ಗೆಲ್ಲಿಸಿದ ಪಕ್ಷ ಹಾಗೂ ನಾಯಕರಿಗೆ ಹಾಗೂ ಜನರಿಗೆ ಯಾವ ರೀತಿಯಲ್ಲಿ ನಿಷ್ಠರಾಗಿರಬಹುದು ಎಂಬುವುದನ್ನು ಮೊದಲು ತಿಳಿದುಕೊಳ್ಳಬೇಕು .ಅದ್ದರಿಂದ ಬದ್ಧತೆ ಹಾಗೂ ಆರ್ಹತೆ ಸೇರಿದಾಗಲೇ ಯಶಸ್ವಿ ನಮ್ಮದಾಗಲು ಸಾಧ್ಯವಿದೆ. ಅದರಲ್ಲಿ ಒಂದು ಇಲ್ಲದಿದ್ದರೂ ಯಶಸ್ಸು ಸಿಗಲು ಸಾಧ್ಯವಿಲ್ಲ. ಯೋಗ ಅಂದರೆ ಒಂದು ಭಾರಿ ಗೆಲ್ಲಬಹುದು ಅದರೆ ಯೋಗ್ಯತೆ ಇದ್ದಲ್ಲಿ ಎಷ್ಟು ಬಾರಿ ಬೇಕಾದರೂ ಗೆಲ್ಲಬಹುದು.

 

 

 

ಬದ್ಧತೆ, ಅರ್ಹತೆ, ಯೋಗ ಮತ್ತು ಯೋಗ್ಯತೆ ಎಲ್ಲ ಇರುವಂತವರು ಶಾಸಕ ಹರೀಶ್ ಪೂಂಜ ಆಗಿದ್ದಾರೆ. ಈ ನಿಟ್ಟಿನಲ್ಲಿ ಬೆಳ್ತಂಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪ ಸಂಖ್ಯಾತರು ಗೆಲ್ಲಲು ಕಾರಣವಾಗಿದೆ ಇದಕ್ಕಾಗಿ ಶಾಸಕ ಹರೀಶ್ ಪೂಂಜ ಹಾಗೂ ಬೆಳ್ತಂಗಡಿ ಬಿಜೆಪಿ ಮಂಡಲದ ಎಲ್ಲರಿಗೂ ಅಭಾರಿಯಾಗಿದ್ದೇನೆ ಇತರ ಪಕ್ಷಗಳಿಗಿಂತ ಬಿಜೆಪಿ ಪಕ್ಷ ಅಲ್ಪಸಂಖ್ಯಾತರಿಗೆ ಅವಕಾಶ ನೀಡುತ್ತಿದ್ದು .ಮುಂದಿನ ದಿನಗಳಲ್ಲಿ ಜಿ.ಪಂ ಮತ್ತು ತಾ.ಪಂ ಚುನಾವಣೆ ಬರಲಿದ್ದು ಇನ್ನಷ್ಟು ಪಕ್ಷಕ್ಕೆ ಬಲ ಕೊಡುವ ಕೆಲಸ ಮಾಡಬೇಕಾಗಿದೆ ಎಂದರು.

 

 

ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ಮಾತನಾಡಿ ಎಲ್ಲರನ್ನೂ ಸಮನವಾಗಿ ನೋಡಿ ಸಾಮಾನ್ಯ ಕಾರ್ಯಕರ್ತನನ್ನೂ ಗುರುತಿಸುವ ಪಕ್ಷ ಬಿಜೆಪಿಯಾಗಿದೆ. ಅದರೆ ಕಾಂಗ್ರೆಸ್ ಪಕ್ಷ ಮಾತ್ರ ಎಲ್ಲವನ್ನೂ ಟೀಕಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರನ್ನು ಹಾಗೂ ಚುನಾಯಿತ ಅಲ್ಪಸಂಖ್ಯಾತ ಜನಪ್ರತಿನಿಧಿಗಳನ್ನು ಬೆಳ್ತಂಗಡಿ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ವತಿಯಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಪ್ರಮುಖರಾದ ಸಲೀಂ ಅಂಬಾಗಿಲು, ಸಿರಾಜುದ್ದೀನ್ ಮುಡಿಪು,  ತಾಲೂಕು ಅಲ್ಪಸಂಖ್ಯಾತ ಮೋರ್ಚಾ ಪ್ರಭಾರಿ ಕೃಷ್ಣಪ್ಪ ಆಚಾರ್ಯ, ಕಾರ್ಯದರ್ಶಿ ಅಶ್ರಫ್ ಮಾಂಜಲ್, ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು. ತಾಲೂಕು ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ  ಅರುಣ್ ಕ್ರಾಸ್ತ  ಪ್ರಸ್ತಾವಿಸಿ ಸ್ವಾಗತಿಸಿದರು ಪ್ರಧಾನ ಕಾರ್ಯದರ್ಶಿ  ಅಭಿಜಿತ್ ಜೈನ್ ನಿರೂಪಿಸಿ ಧನ್ಯವಾದವಿತ್ತರು.

error: Content is protected !!