ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ಆರೋಪಿ ಉಸ್ತಾದ್ ಬಂಧನ.

 

 

 

 

ಬೆಳ್ತಂಗಡಿ:  ಮದರಸಾ ಶಾಲೆಯಲ್ಲಿ ಉಸ್ತಾದ್ ಒಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಾಲೂಕಿನ ಪುತ್ತಿಲ ಸಮೀಪದ ಕುಂಡಡ್ಕ ಎಂಬಲ್ಲಿ ನಡೆದಿದೆ. ಆರೋಪಿಯನ್ನು ಕುಂಡಡ್ಕ ಮದ್ರಾಸದ ಉಸ್ತಾದ್ ಸಿರಾಜುದ್ದೀನ್ ಮದನಿ ಎಂದು ಗುರುತಿಸಲಾಗಿದೆ
ಪುತ್ತಿಲ ಗ್ರಾಮದ ಕುಂಡಡ್ಕ ನಿವಾಸಿ ಮಹಿಳೆಯೊಬ್ಬರ ಇಬ್ಬರು ಹೆಣ್ಣು ಮಕ್ಕಳು ಕುಂಡಡ್ಕದ ಮದ್ರಸಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕಳೆದ ಜ 28 ನೇ ತಾರೀಖಿನಂದು ರಾತ್ರಿಯ ವೇಳೆ ಶಾಲೆ ಮುಗಿಸಿ ಮಕ್ಕಳಿಬ್ಬರು ಮನೆಗೆ ಬಂದು ತಾಯಿಗೆ ಉಸ್ತಾದ್ ಕಿರುಕುಳ ನೀಡಿದ ಬಗ್ಗೆ ಹಾಗೂ ಕಳೆದ ಒಂದು ವರ್ಷದಿಂದ ಈ ರೀತಿ ಅಸಭ್ಯವಾಗಿ ವರ್ತಿಸುತ್ತಿರುವುದಾಗಿ ಹೆಣ್ಣು ಮಕ್ಕಳು ಹೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿ ಉಸ್ತಾದ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!