ಮೂಲಭೂತ ಸೌಕರ್ಯ ಕಲ್ಪಿಸಲು ಶ್ರಮವಹಿಸಿ ದುಡಿಯುತ್ತೇನೆ: ಶಾಸಕ ಹರೀಶ್ ಪೂಂಜ ಲಾಯಿಲ 15 ಲಕ್ಷದ ರಸ್ತೆ ಕಾಮಾಗಾರಿ ಉದ್ಘಾಟನೆ

 

 

 

ಬೆಳ್ತಂಗಡಿ:ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುತ್ರಬೈಲ್ ಮಹಾಮ್ಮಾಯಿ ನಗರದಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ನಿರ್ಮಿಸಲಾದ ರೂ 15 ಲಕ್ಷದ ಕಾಂಕ್ರೀಟ್ ರಸ್ತೆಯನ್ನು ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾಲೂಕಿನ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು ಟೀಕೆಗಳಿಗೆ ಅಭಿವೃದ್ದಿ ಮೂಲಕ ಉತ್ತರ ನೀಡಲಾಗುತ್ತಿದೆ ಜನರ ಮೂಲಭೂತ ಸೌಕರ್ಯ ಕಲ್ಪಿಸಲು ಶ್ರಮ ವಹಿಸಿ ದುಡಿಯುತ್ತೇನೆ ತಾಲೂಕಿನ ಸಮಗ್ರ ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಎಂದರು. ಕಾರ್ಯಕ್ರಮದಲ್ಲಿ ಬಿ. ಜೆ. ಪಿ ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರ್,ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಶಾ ಸಲ್ಡಾನ ಉಪಾಧ್ಯಕ್ಷ ಗಣೇಶ್ ಆರ್ ಎಪಿಎಂಸಿ ಸದಸ್ಯ ಈಶ್ವರ ಭೈರ, ಪಂಚಾಯತ್ ಸದಸ್ಯ ಮೋಹನ್ ದಾಸ್ ಶ್ರೀಮತಿ ಸವಿತಾ ಶೆಟ್ಟಿ, ಹರಿಕೃಷ್ಣ, ಶ್ರೀಮತಿ ಆಶಾಲತ, ಅರವಿಂದ್ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಸುಧಾಕರ್ ಬಿ. ಎಲ್,   ಲಾಯಿಲ  ಗ್ರಾ ಪಂ  ಮಾಜಿ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ಬಿ. ಜೆ. ಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಅಶ್ರಫ್ ಮಾಂಜಾಲ್ ಹಾಗೂ ವಿವಿಧ ಬೂತ್ ಸಮಿತಿ ಅಧ್ಯಕ್ಷರು ಕಾರ್ಯದರ್ಶಿಗಳು, ಕಾರ್ಯಕರ್ತ ಬಂಧುಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು

error: Content is protected !!