ರಾಜ್ಯದ ಶಾಲೆ ಕಾಲೇಜುಗಳಿಗೆ ನಾಳೆಯಿಂದ ಮೂರು ದಿನ ರಜೆ ಘೋಷಣೆ

 

 

ಬೆಂಗಳೂರು : ಹಿಜಾಬ್-ಕೇಸರಿ ವಿವಾದ ತಾರಕಕ್ಕೇರಿದ ಹಿನ್ನೆಲೆ ರಾಜ್ಯದ  ಶಾಲೆ-ಕಾಲೇಜುಗಳಿಗೆ ನಾಳೆಯಿಂದ 3 ದಿನ ರಜೆ ಘೋಷಿಸಿ ಸರ್ಕಾರ ಆದೇಶಿಸಿದೆ.

ರಾಜ್ಯದ  ಶಾಲೆ-ಕಾಲೇಜು, ಎಂಜನಿಯರಿಂಗ್, ಪದವಿ ಕಾಲೇಜಗಳಿಗೆ ನಾಳೆಯಿಂದ ಮೂರು ದಿನ ರಜೆ ಘೋಷಣೆ ಮಾಡಲಾಗಿದೆ.ನ್ಯಾಯಾಲಯದಲ್ಲಿ ಈ ಪ್ರಕರಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಜೆ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳು ಶಾಂತಿ, ಸೌಹಾರ್ದತೆ ಕಾಪಾಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್‌ ನಾರಾಯಣ ಮನವಿ ಮಾಡಿದ್ದಾರೆ.

error: Content is protected !!