ನಾರಾವಿ ಬಳಿ ಬೈಕ್ಕಿಗೆ ಅಪರಿಚಿತ ವಾಹನ ಡಿಕ್ಕಿ : ಓರ್ವ ಸಾವು ,ಮತ್ತೊಬ್ಬ ಗಂಭೀರ.

 

ಬೆಳ್ತಂಗಡಿ : ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಇಂದು ಬೆಳಗ್ಗಿನ ಜಾವ ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ನಡೆದಿದೆ.

ಬೈಕ್ ನಲ್ಲಿದ್ದ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಊರುಬೈಲ್ ಚೆಂಬ್ ಗ್ರಾಮದ ಮುಕ್ಕುಯಿ ಮನೆಯ ಲಾರೆನ್ಸ್.ಎಮ್.ಜಿ(38) ಸಾವನ್ನಪ್ಪಿದ್ದು ,ಬೆಳ್ತಂಗಡಿ ತಾಲೂಕಿನ ನೆಲ್ಲಿಕಾರು ನಿವಾಸಿ ಜಾನ್(81)ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!