ಬೆಳ್ತಂಗಡಿ: ವಿದ್ಯುತ್ ಕಂಬ ಸ್ಥಳಾಂತರಿಸುವ ಕೆಲಸದ ವೇಳೆ, ವಿದ್ಯುತ್ ಗುತ್ತಿಗೆ ಕಂಪೆನಿ ನೌಕರ ವಿದ್ಯುತ್ ಶಾಕ್ ಹೊಡೆದು ಗಾಯಗೊಂಡ ಘಟನೆ ಉಜಿರೆಯಲ್ಲಿ ನಡೆದಿದೆ.
ಉಜಿರೆ ಕಾಲೇಜು ರಸ್ತೆ ಅಭಿವೃದ್ಧಿ ಕಾಮಗಾರಿ ಸಲುವಾಗಿ ರಸ್ತೆ ಬದಿಯ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಗೊಳಿಸಲಾಗುತ್ತಿದೆ. ಈ ಸಮಯ ಕಂಬದ ಮೇಲೆ ತಂತಿ ಜೋಡಿಸುವ ಕೆಲಸ ಮಾಡುತ್ತಿದ್ದ, ಕೊಕ್ಕಡ ನಿವಾಸಿ ಮಿತಿಲೇಶ್ ಎಂಬ ನೌಕರನಿಗೆ ವಾಣಿಜ್ಯ ಬಳಕೆಯ ಇನ್ವರ್ಟರ್ ನಿಂದ ವಿದ್ಯುತ್ ವಾಪಾಸು ಪ್ರವಹಿಸಿ ಶಾಕ್ ಹೊಡೆದಿದೆ.ಇದರಿಂದ ನೌಕರ ಅಸ್ವಸ್ಥಗೊಂಡು ಕಂಬದಲ್ಲಿ ವಿದ್ಯುತ್ ತಂತಿಯ ಮೇಲೆ ಸಿಲುಕಿಕೊಂಡಿದ್ದರು. ತಕ್ಷಣ ಇತರ ನೌಕರರು ಹಾಗೂ ಸ್ಥಳೀಯರು ಸೇರಿ ಅವರನ್ನು ಕಂಬದಿಂದ ಕೆಳಗೆ ಇಳಿಸಿ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಹೆಚ್ವಿನ ಮಾಹಿತಿ ತಿಳಿದುಬರಬೇಕಾಗಿದೆ.