ಪಡಿತರ ಅಕ್ಕಿ ವಿತರಣೆಯಲ್ಲಿ ಅಕ್ರಮದ ಘಾಟು: ಬಡವರ ಅಕ್ಕಿಯ ತೂಕ ಕಡಿಮೆಗೊಳಿಸಿ ಕನ್ನ!: ಒಟ್ಟು ತೂಕದಲ್ಲಿ ವ್ಯತ್ಯಾಸಗೊಳಿಸಿ‌ ಮೋಸ: ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಬಡ ಜನತೆ:

 

 

 

             ವಿಶೇಷ ವರದಿ:

ಬೆಳ್ತಂಗಡಿ:  ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯುತ್ತದೆ ತೂಕ ತಪ್ಪಿಸುವ ಕೆಲಸ ಬಡವರಿಗೆ ನೀಡುವ ಅಕ್ಕಿಯಲ್ಲೂ ನಡೆಯುತ್ತದೆ ಅಕ್ರಮ.ಬಡ ಕುಟುಂಬಗಳಿಗೆ ಇದೆಲ್ಲದರ ಯಾವುದೇ ಗೊಡವೆ ಇಲ್ಲದೆ ರೇಶನ್ ಅಂಗಡಿಯಲ್ಲಿ ಅಕ್ಕಿ ನೀಡುವುದನ್ನು ನಂಬಿಕೆಯಿಟ್ಟು ಹೊತ್ತು ಕೊಂಡು ಹೋಗುತ್ತಾರೆ. ತಾವು ತರುತ್ತಿರುವ ಅಕ್ಕಿಯಲ್ಲಿ ಸ್ವಲ್ಪ ಪಾಲನ್ನು ಸೊಸೈಟಿಯವರು ನುಂಗುತ್ತಾರೆ ಎಂಬ ಪರಿವೆ ಇಲ್ಲದೇ ಮನೆಗೆ ಖುಷಿಯಲ್ಲಿ ತರುತ್ತಾರೆ

ಈ ಬಗ್ಗೆ  ಸಾರ್ವಜನಿಕರಿಂದ ಬಂದ ಮಾಹಿತಿಯಂತೆ  ಕಾರ್ಯಚರಣೆಗಿಳಿದ ಪ್ರಜಾಪ್ರಕಾಶ ತಂಡಕ್ಕೆ   ಅಶ್ಚರ್ಯ ಕಾದಿತ್ತು.   ಒಂದು  ಎಸ್.ಸಿ. ಬಡ ಕುಟುಂಬಕ್ಕೆ ನೀಡಿದ ರೇಶನ್ ಅಕ್ಕಿಯನ್ನು  ಪರಿಶೀಲಿಸಿ ತೂಕ ಮಾಡಿದಾಗ ಅಳತೆಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು 3 ಕೆಜಿ  ಗಿಂತಲೂ ಅಧಿಕ ತೂಕ ಕಡಿಮೆ ಇರುವುದು ಗಮನಕ್ಕೆ ಬಂದಿದೆ.  ಕೋವಿಡ್   ಸಂದರ್ಭದಲ್ಲಿ ತಲಾ ಸದಸ್ಯರಿಗೆ 10ಕೆಜಿ ಅಕ್ಕಿ ಸಿಗುತ್ತಿದೆ  ಈ ಬಗ್ಗೆ ಅವರಲ್ಲಿ ವಿಚಾರಿಸಿದಾಗ ನಮ್ಮ ಮನೆಯಲ್ಲಿ 6 ಜನ ಸದಸ್ಯರಿದ್ದೇವೆ. ನಮಗೆ ಬಿಪಿಎಲ್ ಕಾರ್ಡ್ ಇರುವುದರಿಂದ  ಈಗ ಅಕ್ಕಿ ಸುಮಾರು 60 ಕೆ.ಜಿ. ಯಷ್ಟು ಸಿಗುತ್ತದೆ ಎನ್ನುವ ಅವರಲ್ಲಿ ತೂಕ ಮಾಡುವಾಗ ತೂಕವನ್ನು ಗಮನಿಸಿದ್ದೀರಾ ಎಂಬ ಪ್ರಶ್ನೆಗೆ    ಈ ಬಗ್ಗೆ ನಮಗೆ ಏನೂ ಗೊತ್ತಾಗುವುದಿಲ್ಲ ಎಂಬ ಉತ್ತರ ನಮಗೆ ನೀಡಿದಾಗ ನಿಜವಾಗಲೂ ಇಂತಹ ಮುಗ್ದ ಜನರನ್ನು ಮೋಸ ಮಾಡುವವರು ಇದ್ದರಲ್ಲ ಅನ್ನುವ ನೋವು ನಮಗೆ ಕಾಡಿತ್ತು. ಉದಾಹರಣೆಗೆ ಒಂದು ರೇಶನ್ ಅಂಗಡಿಯಲ್ಲಿ ಸುಮಾರು 500 ಕಾರ್ಡ್ ದಾರರು ಇದ್ದಲ್ಲಿ ಒಂದೊಂದು ಕಾರ್ಡ್ ನಿಂದಲೂ ಸರಾಸರಿ 2 ಕೆಜಿಯಷ್ಟು ಅಕ್ಕಿ ಕಡಿಮೆ ನೀಡಿದರೂ 1000 ಕೆಜಿ ಅಕ್ಕಿ ಉಳಿಕೆಯಾಗುತ್ತದೆ. ಇದನ್ನು ಕೆಜಿಗೆ ಕನಿಷ್ಠ 10 ರೂಪಾಯಿಯ ದರದಲ್ಲಿ  ಮಾರಾಟ ಮಾಡಿದರೂ ತಿಂಗಳಿಗೆ 10 ಸಾವಿರ ರೂಪಾಯಿ ಜೇಬಿಗೆ ಇಳಿಸಿಕೊಳ್ಳುತ್ತಾರೆ. ಇದು ಲೈಸನ್ಸ್ ಪಡೆದ ಯಜಮಾನನ ಗಮನಕ್ಕೆ ಬರುತ್ತದೋ ಇಲ್ಲವೋ ಗೊತ್ತಿಲ್ಲ ಇಂತಹ ಮೋಸ ಮುಗ್ದ ಜನರಿಗೆ ಗೊತ್ತೆ ಅಗುವುದಿಲ್ಲ.ಅದಲ್ಲದೇ ಕೆಲವು ರೇಶನ್ ಅಂಗಡಿಗಳಲ್ಲಿ ಹಳೆಯ ಕಾಲದ ತೂಕ ಮಾಡುವ ಮಾಪನಗಳಿವೆ ಡಿಜಿಟಲ್ ಅಳತೆ ಮಾಪನಗಳು ಇಲ್ಲ ಅನ್ನುವ ಬಗ್ಗೆಯೂ ಮಾಹಿತಿ ಇದೆ.  ಅದ್ದರಿಂದ  ವರ್ಷಕ್ಕೊಮ್ಮೆ ಅಳತೆ ಮಾಪನ ಇಲಾಖೆಯ ಮೂಲಕ ತಪಾಸಣೆಗೊಳಪಡಿಸಬೇಕು  ಈ ಬಗ್ಗೆಯೂ ಅಧಿಕಾರಿಗಳು ನ್ಯಾಯ ಬೆಲೆ ಅಂಗಡಿಯವರಿಗೆ ಎಚ್ಚರಿಕೆ ನೀಡಬೇಕಾಗಿದೆ. ಅದೇ ರೀತಿ ಸಾರ್ವಜನಿಕರು ಕೂಡ ತಮಗೆ ನೀಡುವ ಪಡಿತರದ ಅಳತೆಯನ್ನು ಸರಿಯಾಗಿ ಗಮನ ಇಟ್ಟು ನೋಡಬೇಕು ಎಲ್ಲಿಯಾದರೂ ಸಂಶಯ ಕಂಡು ಬಂದಲ್ಲಿ ಪ್ರಶ್ನಿಸಬೇಕು ಬಡವರಿಗಾಗಿ ನೀಡುವ ಅಕ್ಕಿ ಸಮರ್ಪಕವಾಗಿ ಸಿಗಬೇಕು ಬಡವನ ಹೊಟ್ಟೆಗೆ ಹೊಡೆಯುವ ಕೆಲಸ ಯಾರಿಂದಲೂ ಆಗಬಾರದು.ಅದಲ್ಲದೇ ಕೆಲವರು ಪಡಿತರ ಅಕ್ಕಿಯನ್ನು ನ್ಯಾಯಾ ಬೆಲೆ ಅಂಗಡಿಯಿಂದ ಪಡೆದುಕೊಂಡು ಅದನ್ನು ನೇರವಾಗಿ  ಅಂಗಡಿಗಳಿಗೆ ಮಾರಾಟ ಮಾಡುವುದು ಸೇರಿದಂತೆ ತಾಲೂಕಿನ ಕೆಲವು ಪ್ರತಿಷ್ಠಿತ ಅಂಗಡಿಗಳೂ  ಇದರಲ್ಲಿ ಶಾಮೀಲಾಗಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಈ ಬಗ್ಗೆ ಅಕ್ರಮವಾಗಿ ಸಾಗಾಟ ನಡೆಸುವ ವಾಹನಗಳು ಅಂಗಡಿಗಳ  ಬಗ್ಗೆ ಹಾಗೂ ಪಡಿತರ ಅಂಗಡಿಗಳ ಬಗ್ಗೆ  ಯಾರ ಒತ್ತಡಕ್ಕೆ ಮಣಿಯದೇ  ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಿ  ಸರಿಯಾದ ಕ್ರಮ ಕೈಗೊಳ್ಳಬೇಕಾಗಿದೆ

error: Content is protected !!