ಉಜಿರೆ ರಸ್ತೆ ಅಗಲೀಕರಣ ಸಮರ್ಪಕವಾಗಿಲ್ಲ ಸಾರ್ವಜನಿಕರಿಂದ ಪಂಚಾಯತ್ ಗೆ ದೂರು ಬೇಡಿಕೆ ಈಡೇರಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ಮಹೇಶ್ ಶೆಟ್ಟಿ ತಿಮರೋಡಿ.

 

 

 

 

ಬೆಳ್ತಂಗಡಿ: ಉಜಿರೆಯಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ನಡೆಯುತ್ತಿದೆ. ಉಳ್ಳವರಿಗೆ ಒಂದು ಕಾನೂನು ಇನ್ನೊಬ್ಬರಿಗೆ ಇನ್ನೊಂದು ಕಾನೂನು ಬೇಡ ಇಂತಹ ಕೆಲಸ ನಡೆಯಕೂಡದು ಕಾನೂನು ಎಲ್ಲರಿಗೂ ಒಂದೇ ಉಜಿರೆ ಕಾಲೇಜು ಹತ್ತಿರದಿಂದ ಬಸ್ಸ್ ನಿಲ್ದಾಣದವರೆಗೆ ಒಂದೇ ರೀತಿ ಅಗಲೀಕರಣಗೊಳ್ಳಬೇಕು ಚರಂಡಿ ಹಾಗೂ ರಸ್ತೆ ಅಗಲವಾದಷ್ಟೂ ಒಳ್ಳೆಯದು ಅದೇ ರೀತಿ ಕಾಲೇಜ್ ರಸ್ತೆಯಲ್ಲಿ ರಿಕ್ಷಾ ಪಾರ್ಕಿಂಗ್ ಸ್ಥಳದಲ್ಲಿ ಚರಂಡಿ ನಿರ್ಮಿಸಲಾಗಿದೆ. ಪಾರ್ಕಿಂಗ್‌ಗೆ ಸ್ಥಳ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅದನ್ನು ಸರಿಪಡಿಸಬೇಕು ರಸ್ತೆಯ ಒಂದು ಬದಿಯಲ್ಲಿ ಮಾತ್ರ ತೆರವು ಕಾರ್ಯಾಚರಣೆ ನಡೆದಿದೆ. ಇನ್ನೊಂದು ಬದಿಯಲ್ಲಿ ರಸ್ತೆಗೆ ತಾಗಿ ಇರುವ ಅತಿಕ್ರಮಣ ತೆರವು ಮಾಡಿಲ್ಲ. ಧರ್ಮಸ್ಥಳ ಪ್ರವೇಶ ದ್ವಾರವನ್ನು ಬೆಳಾಲು ರಸ್ತೆ ಹತ್ತಿರ ಸ್ಥಳಾಂತರ ಮಾಡಬೇಕು ಎಂಬ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಪಂಚಾಯತ್ ಅಧ್ಯಕ್ಷರಿಗೆ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಸಾರ್ವಜನಿಕರು ಸೋಮವಾರ ಮನವಿ ಸಲ್ಲಿಸಿದರು.ಒಂದು ವೇಳೆ  ಮನವಿಗೆ ಸ್ಪಂದಿಸದೆ ಇದ್ದರೆ ಹೋರಾಟ ನಡೆಸುವುದಾಗಿ ಈ ಸಂದರ್ಭದಲ್ಲಿ  ತಿಮರೋಡಿ  ಎಚ್ಚರಿಕೆ ನೀಡಿದರು.

error: Content is protected !!