ಬೆಳ್ತಂಗಡಿ : ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆರೋಗ್ಯ ವೃದ್ಧಿ ಮತ್ತು ದೀರ್ಘಾಯುಷ್ಯ ಪ್ರಾಪ್ತಿಗಾಗಿ ತಾಲೂಕಿನ ಜನತೆಯ ಪರವಾಗಿ ಶಾಸಕ ಹರೀಶ್ ಪೂಂಜ ರವರ ನೇತೃತ್ವದಲ್ಲಿ ತಾಲೂಕಿನ ಸುಮಾರು 25 ಶಿವ ದೇವಾಲಯದಲ್ಲಿ ಮೃತ್ಯುಂಜಯ ಹೋಮ ನಡೆಯಿತು.
ಪ್ರಧಾನಿ ನರೇಂದ್ರ ಮೋದಿಯವರ ಆರೋಗ್ಯ ವೃದ್ದಿ ಹಾಗೂ ದೀರ್ಘಾಯುಷ್ಯಕ್ಕಾಗಿ ಮೃತ್ಯುಂಜಯ ಹೋಮದ ಜತೆಗೆ ಪ್ರಾರ್ಥನೆ ಸಲ್ಲಿಸಲಾಯಿತು.
ತಾಲೂಕಿನ ಪ್ರಮುಖ ಶಿವ ದೇವಾಲಯಗಳಾದ ಕುತ್ಯಾರು ಸೋಮನಾಥೇಶ್ವರ, ವೇಣೂರು ಮಹಾಲಿಂಗೇಶ್ವರ, ಮರೋಡಿ ಉಮಾಮಹೇಶ್ವರ, ಕಾಶಿಪಟ್ಣ ಪಂಚಲಿಂಗೇಶ್ವರ, ಗರ್ಡಾಡಿ ನಂದಿಕೇಶ್ವರ, ಶಿರ್ಲಾಲು ಮಹಾಲಿಂಗೇಶ್ವರ, ಮಲ್ಲಿಪ್ಪಾಡಿ ಸದಾಶಿವೇಶ್ವರ, ಓಡಿಲು ಮಹಾಲಿಂಗೇಶ್ವರ, ಅಳದಂಗಡಿ ಸೋಮನಾಥೇಶ್ವರಿ, ನಾವರ ಮಹಾಲಿಂಗೇಶ್ವರ, ಕೇಳ್ಕರ ಮಹಾಲಿಂಗೇಶ್ವರ, ಸುರ್ಯ ಸದಾಶಿವೇಶ್ವರ, ನಿಡಿಗಲ್ ಲೋಕನಾಥೇಶ್ವರ, ಇಂದಬೆಟ್ಟು ಅರ್ಧನಾರೀಶ್ವರ, ಕೂಡಬೆಟ್ಟು ಸದಾಶಿವೇಶ್ವರ, ಕಳೆಂಜ ಸದಾಶಿವೇಶ್ವರ, ರುದ್ರಗಿರಿ ಮೃತ್ಯುಂಜಯ, ಕೋರಿಂಜ ಪಂಚಲಿಂಗೇಶ್ವರ, ಕರಾಯ ಮಹಾಲಿಂಗೇಶ್ವರ, ಕುರಾಯ ಸದಾಶಿವೇಶ್ವರ, ಮಲೆಂಗಲ್ಲು ಉಮಾ ಮಹೇಶ್ವರ, ಪಜಿರಡ್ಕ ಸದಾಶಿವೇಶ್ವರ, ಬಯಲು, ಅಪ್ಪಿಲ ಉಮಾಮಹೇಶ್ವರ, ಚಾರ್ಮಾಡಿ ಪಂಚಲಿಂಗೇಶ್ವರ ಮೊದಲಾದ ಶಿವ ದೇವಾಲಯದಲ್ಲಿ ಆಯಾಯ ದೇವಾಲಯಗಳ ಆಡಳಿತ ಮಂಡಳಿ, ಊರಿನ ಗಣ್ಯರ, ಪ್ರಮುಖರ ಹಾಗೂ ದೇವಾಲಯಗಳ ಅರ್ಚಕರ ನೇತೃತ್ವದಲ್ಲಿ ಮೃತ್ಯುಂಜಯ ಹೋಮ ನಡೆಯಿತು.
ಮೃತ್ಯುಂಜಯ ಹೋಮ ನಡೆದ ದೇವಾಲಯಗಳಲ್ಲಿ ಆಯಾಯ ದೇವಾಲಯಗಳ ಆಡಳಿತ ಮೊಕ್ತೇಸರರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರುಗಳು, ಪ್ರಮುಖರು, ಗ್ರಾ.ಪಂ. ಸದಸ್ಯರುಗಳು, ಪ್ರಧಾನಿಯವರ ಅಭಿಮಾನಿಗಳು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.