ಕೊರಗಜ್ಜನಿಗೆ ಅವಮಾನ ಖಂಡನೀಯ: ನಲಿಕೆ ಸಮಾಜ ಸೇವಾ ಸಂಘ.

 

 

 

ಬೆಳ್ತಂಗಡಿ:ವಿಟ್ಲ ಸಮೀಪದ ಮುಸ್ಲಿಂ ಕುಟುಂಬದ ಮದುವೆ ಸಮಾರಂಭದಲ್ಲಿ ಮದುಮಗನು ಆರಾಧ್ಯ ಧೈವ ಕೊರಗಜ್ಜನ ಹೋಲುವ ವೇಷ ಧರಿಸಿ ವ್ಯಂಗ್ಯ ಮಾಡಿದ ಘಟನೆ ನಡೆದಿದ್ದು ಇದರಿಂದ ನಾಡಿನ ಕೊರಗಜ್ಜ ಆರಾಧಕರ ಭಾವನೆಗೆ ಘಾಸಿಯಾಗಿದೆ.
ಕೊರಗಜ್ಜನಿಗೆ ಅವಮಾನಿಸಿದ ಘಟನೆಯನ್ನು ನಲಿಕೆಯವರ ಸಮಾಜ ಸೇವಾ ಸಂಘ ತೀವ್ರವಾಗಿ ಖಂಡಿಸುತ್ತದೆ.ಎಂದು ನಲಿಕೆಯವರ ಸಮಾಜ ಸೇವಾ ಸಂಘ ಬೆಳ್ತಂಗಡಿ ಅಧ್ಯಕ್ಷ ಎಸ್. ಪ್ರಭಾಕರ್ ಹೇಳಿದರು. ಅವರು ಜ 10 ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ನಮ್ಮ ತುಳುನಾಡಿನಲ್ಲಿ ದೈವಾರಾಧನೆ, ಭೂತಾರಾಧನೆಗಳಿಗೆ ಮಹತ್ವದ ಸ್ಥಾನವಿದ್ದು ಇಲ್ಲಿ ನಾಗಬನ, ಗುಡಿ, ಕಟ್ಟೆ , ದೈವಸ್ಥಾನಗಳು ಪವಿತ್ರವೆನಿಸಿ ತುಳುವರಿಂದ ವಿಶಿಷ್ಟವಾಗಿ ಆರಾಧಿಸಲ್ಪಡುತ್ತವೆ.

ನಮ್ಮ ನಾಡಿನ ಧೈವಾರಾಧನೆ ಜಾಗತಿಕ ಮಟ್ಟದಲ್ಲೂ ವಿಶೇಷ ಸಾಂಸ್ಕೃತಿಕ ಗೌರವಕ್ಕೆ ಪಾತ್ರವಾಗಿದೆ.
ತುಳುವರು ಸಾವಿರಾರು ದೈವಗಳನ್ನು ಆರಾಧಿಸಿಕೊಂಡು ಬರುತ್ತಿರುವ ತುಳುನಾಡಿನಲ್ಲಿ ನೂರಾರು ಕಾರಣಿಕ ಧೈವಗಳು ಆರಾಧಿಸಲ್ಪಡುತ್ತಿದ್ದು ಸ್ವಾಮಿ ಕೊರಗಜ್ಜನ ಆರಾಧನೆಯು ಧೈವಾರಾಧನೆಯಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ.
ಕೊರಗಜ್ಜ ಕಟ್ಟೆ, ಧೈವಸ್ಥಾನಗಳನ್ನು ಅಪವಿತ್ರಗೊಳಿಸುವ ಅವಮಾನಿಸುವ, ವ್ಯಂಗ್ಯ ಮಾಡುವ ಧೈವ ವಿರೋಧಿ ಕೃತ್ಯಗಳು ಸರಣಿಯಾಗಿ ಬೆಳಕಿಗೆ ಬರುತ್ತಿರುವುದು ಧೈವಭಕ್ತರಲ್ಲಿ ನೋವನ್ನುಂಟು ಮಾಡುತ್ತಿದೆ.
ಒಂದೆಡೆ ಕಿಡಿಗೇಡಿಗಳು ಕೊರಗಜ್ಜ ಧೈವಕಟ್ಟೆಗಳಿಗೆ, ಧೈವಸ್ಥಾನಗಳಿಗೆ ಹಾನಿ, ಅಪವಿತ್ರವೆಸಗಿ ಧೈವಾರಾಧಕರನ್ನು ಕೆರಳಿಸುತ್ತಿದ್ದು ಇನ್ನೊಂದೆಡೆ ಮತಾಂಧರು ಉದ್ದೇಶಪೂರ್ವಕವಾಗಿ ಕೊರಗಜ್ಜನಿಗೆ ಅವಮಾನಿಸುತ್ತಾ ವಿಕೃತ ಆನಂದ ಅನುಭವಿಸುತ್ತಿರುವುದು ಖಂಡನೀಯ ಇಂಥ ಕೃತ್ಯವೆಸಗುವ ವ್ಯಕ್ತಿ, ಶಕ್ತಿಗಳನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮಕೈಗೊಂಡು ನಲಿಕೆ ಸಮುದಾಯವನ್ನೊಳಗೊಂಡು ತುಳುನಾಡಿನ
ಧೈವ ಭಕ್ತ ಸಮೂಹದ ಭಾವನೆಗಳಿಗೆ ನ್ಯಾಯ ಒದಗಿಸಬೇಕು,
ಹಾಗೂ ಸರಣಿಯಾಗಿ
ಧೈವ ನಿಂದನೆ ಕೃತ್ಯಗಳ ಮೂಲಕ ಸಮಾಜದ ಶಾಂತಿ ಕದಡಿಸಲು ಯತ್ನಿಸುತ್ತಿರುವ ಕಿಡಿಗೇಡಿ ಶಕ್ತಿಗಳ ಅಟ್ಟಹಾಸವನ್ನು ಮಟ್ಟಹಾಕಬೇಕೆಂದು ಬೆಳ್ತಂಗಡಿ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ ಈ ಮೂಲಕ ಜಿಲ್ಲಾಡಳಿತವನ್ನು ಒತ್ತಾಯಿಸುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷ ಸೇಸಪ್ಪ ಕೆ, ಉಪಾಧ್ಯಕ್ಷ ರಾಮು ಶಿಶಿಲ, ಸದಸ್ಯರುಗಳಾದ ವಿನಯ ಕೊಯ್ಯೂರು, ರಮೇಶ್ ಕೇಲ್ತಾಜೆ, ಉಪಸ್ಥಿತರಿದ್ದರು.

error: Content is protected !!