ಬೆಳ್ತಂಗಡಿ:ಗ್ರಾಮದಲ್ಲಿ ಶಾಲೆ ಮತ್ತು ದೇವಸ್ಥಾನ ಸುಸ್ಥಿತಿಯಲ್ಲಿದ್ದರೆ ಊರು ಸುಭಿಕ್ಷೆಗೊಳ್ಳುತ್ತದೆ.ಎಂದು ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಹೇಳಿದರು.ಅವರು ನಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಸರ್ವಧರ್ಮದವರಿಗೆ ಆಶ್ರಯ ನೀಡುವ ವಿದ್ಯಾಲಯಗಳು ಸುಸಜ್ಜಿತ ವ್ಯವಸ್ಥೆಗಳೊಂದಿಗೆ ಕಾರ್ಯನಿರ್ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳತ್ತ ವಿದ್ಯಾರ್ಥಿಗಳು ಹಾಗೂ ಹೆತ್ತವರು ಒಲವು ತೋರಿಸುತ್ತಿರುವುದು ಉತ್ತಮ ಬೆಳವಣಿಗೆ
ಒಂದೂವರೆ ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಾಲಾ ಕಟ್ಟಡವನ್ನು ಜೂನ್ ತಿಂಗಳೊಳಗೆ ಪೂರ್ಣಗೊಳಿಸುವ ಯೋಜನೆ ರೂಪಿಸಲಾಗಿದೆ. ಮುಂದಿನ ಅನುದಾನದಲ್ಲಿ ಇಲ್ಲಿಗೆ ಬೇಕಾಗುವ ಗ್ರಂಥಾಲಯ, ಪ್ರಯೋಗಾಲಯ ಗಳನ್ನು ನಿರ್ಮಿಸುವ ಕುರಿತು ಭರವಸೆ ನೀಡಿದರು.
ನಡ ಗ್ರಾಪಂ ಅಧ್ಯಕ್ಷ ವಿಜಯ ಗೌಡ, ಉಪಾಧ್ಯಕ್ಷೆ ವಿನುತಾ, ಕಾರ್ಯದರ್ಶಿ ಕಿರಣ್ ಕುಮಾರ್, ಜಿ.ಪಂ. ಮಾಜಿ ಸದಸ್ಯರಾದ ಶೈಲೇಶ್ ಕುಮಾರ್ ರಾಜಶೇಖರ ಅಜ್ರಿ, ಬೆಳ್ತಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಮುನಿರಾಜ ಅಜ್ರಿ, ಶಾಲಾ ಸಮಿತಿ ಅಧ್ಯಕ್ಷ ವಸಂತ ಗೌಡ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧರಣೇಂದ್ರ ಜೈನ್,ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಅಜಿತ್ ಆರಿಗ, ಚರ್ಚ್ ಧರ್ಮಗುರು ಫಾ. ಪ್ರವೀಣ್ ಡಿಸೋಜ,ಮಸೀದಿಯ ಧರ್ಮಗುರು ಅಬ್ದುಲ್ ಖಾದರ್, ಸ್ಟಾರ್ ಲೈನ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಹಬೀಬ್ ಸಾಹೇಬ್, ನ್ಯಾಯವಾದಿ ಶಶಿಕಿರಣ್ ಜೈನ್,ಡಾ. ಪ್ರದೀಪ್ ನಾವೂರು, ಅಭಿನಂದನ್ ಹರೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಪುಷ್ಪಾ ಸ್ವಾಗತಿಸಿದರು. ಸಹಶಿಕ್ಷಕಿ ಸುಜಾತ ಕಾರ್ಯಕ್ರಮ ನಿರೂಪಿಸಿದರು