ಕಾಲ’ದ‌ ಹೊಡೆತಕ್ಕೆ ನಲುಗಿದ ಬಡ ಶ್ರಮಿಕ ‘ಕುಟುಂಬ’: ಪತಿಗೆ ಅಪಘಾತ, ಪತ್ನಿಗೂ ಅನಾರೋಗ್ಯ, ಇಬ್ಬರು ಪುಟ್ಟ ಹೆಣ್ಣು ಮಕ್ಕಳಿಗೆ ಕಣ್ಣೀರೇ ಗತಿ: ಸಾಲದ ಹೊರೆಯ ನಡುವೆ ಚಿಕಿತ್ಸೆಗೆ ಹಣ ಹೊಂದಿಸುವ ಅನಿವಾರ್ಯ ಪರಿಸ್ಥಿತಿ: ಬೇಕಿದೆ ಸಹೃದಯಿಗಳ ಧನ ಬೆಂ’ಬಲ’

 

ವರದಿ:ಪ್ರಸಾದ್ ಶೆಟ್ಟಿ  ಎಣಿಂಜೆ.

ಬೆಳ್ತಂಗಡಿ: ಅದು ಪತಿ, ಪತ್ನಿ, 11 ಹಾಗೂ 12 ವರ್ಷದ ಇಬ್ಬರು ಹೆಣ್ಣು ಮಕ್ಕಳು, ಪತಿಯ ತಾಯಿ ಇದ್ದ ಬಡ ಹಾಗೂ ಸುಖೀ ಕುಟುಂಬ. ಪತಿ, ಪತ್ನಿ ಇಬ್ಬರೂ ಶ್ರಮಿಕರು. ಪತಿ ಹೋಟೆಲ್ ಉದ್ಯೋಗ ಮಾಡಿದರೆ, ಪತ್ನಿ ಬೀಡಿ ಕಟ್ಟಿ ಪ್ರಾಮಾಣಿಕವಾಗಿ ಬಂದ ಹಣದಲ್ಲಿ ಚಿಕ್ಕ ಹೆಂಚಿನ ಮನೆಯಲ್ಲಿ ಚಿಕ್ಕದಾಗಿ, ಚೊಕ್ಕವಾಗಿ, ಸುಖೀ ಸಂಸಾರ ನಡೆಸುತ್ತಿದ್ದರು. ಮುಂದೆ ಉತ್ತಮ ಜೀವನ ನಡೆಸುವ ಕನಸಿನೊಂದಿಗೆ ರಾತ್ರಿ, ಹಗಲು ಶ್ರಮ ಪಟ್ಟು ದುಡಿದು ಉತ್ತಮ ಜೀವನ ಸಾಗಿಸಲು ಪ್ರಯತ್ನ ನಡೆಸುತ್ತಿದ್ದರು. ಆದರೆ ದುರಾದೃಷ್ಟವಶಾತ್ ಇದೀಗ ‘ಕಾಲ’ದ ಹೊಡೆತಕ್ಕೆ ಸಿಕ್ಕಿ ಒಪ್ಪೊತ್ತಿ‌ನ ಊಟಕ್ಕೂ ಕಷ್ಟ ಪಡುವ ಜೊತೆಗೆ ‘ಜೀವ’ನ ಉಳಿಸಿಕೊಳ್ಳುವ ಹೋರಾಟದಲ್ಲಿ ತೊಡಗಿದ್ದು, ಸಾಲದ ಹೊರೆಯ ಜೊತೆಗೆ ಚಿಕಿತ್ಸೆಗೆ ಹಣ ಹೊಂದಿಸಬೇಕಾದ ಅನಿವಾರ್ಯತೆಗೆ ಕುಟುಂಬ ಸಿಲುಕಿದೆ. ಪುಟ್ಟ ಮಕ್ಕಳ ಜೊತೆಗೆ ಆಟವಾಡಿಕೊಂಡು ಶಿಕ್ಷಣ ಪಡೆಯಬೇಕಾದ ಹೆಣ್ಣು ಮಕ್ಕಳು ಪೋಷಕರ ಅಸಹಾಯಕತೆ ನೋಡಿಕೊಂಡು ಕಣ್ಣೀರಿನಲ್ಲಿ ಕೊರಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುಟುಂಬಕ್ಕಾದ ಪರಿಸ್ಥಿತಿ ಶತ್ರುವಿಗೂ ಬಾರದಿರಲಿ ಎಂದು ಈ ಕುಟುಂಬವನ್ನು ಹತ್ತಿರದಿಂದ ಗಮನಿಸಿದವರು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಈ ಕುಟುಂಬಕ್ಕೆ ಸಹೃದಯಿ ಸಾರ್ವಜನಿಕರ ಉದಾರ ಧನ ಸಹಕಾರ ಸಿಕ್ಕಲ್ಲಿ ದೊಡ್ಡ ಮಟ್ಟದ ಬದಲಾವಣೆ ಉಂಟಾಗದಿದ್ದರೂ ಕುಟುಂಬಕ್ಕೆ ಕೊಂಚ ಚೇತರಿಕೆಯಾದರೂ ದೊರಕಬಹುದೋ ಏನೋ… ಈ ಬಡ ಕುಟುಂಬಕ್ಕೆ ಸಾರ್ವಜನಿಕರ ಸಹಕಾರ ಲಭಿಸಲಿ, ಅನಾರೋಗ್ಯ ಪೀಡಿತ ದಂಪತಿಗೆ ಸಹಾಯವಾಗಲಿ ಎಂಬುದು ‘ಪ್ರಜಾಪ್ರಕಾಶ ನ್ಯೂಸ್’ ತಂಡದ ಆಶಯವಾಗಿದೆ‌.

 

 

ವೀರ ಕೇಸರಿ ತಂಡದಿಂದ ಆಸರೆಯ ಮನೆ 

 

ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕನ್ಯಾಡಿ 1 ಬರಮೇಲು ಎಂಬಲ್ಲಿಯ ಭಾಸ್ಕರ ಶೆಟ್ಟಿ, ರಾಧಾ ದಂಪತಿಗಳು 14 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ 11 ಹಾಗೂ 12 ವರ್ಷದ ಇಬ್ಬರು ಹೆಣ್ಣು ಮಕ್ಕಳು‌. ಇವರ ಜೊತೆಗೆ ಭಾಸ್ಕರ ಶೆಟ್ಟಿ ಅವರ ತಾಯಿ ಸೇರಿ ಚಿಕ್ಕದಾದ ಹಂಚಿನ ಮನೆಯಲ್ಲಿ ಒಪ್ಪೊತ್ತಿನ ಊಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಡ ಕುಟುಂಬವಿದು. ಮನೆಯಲ್ಲಿ ಜೀವನ ನಿರ್ವಹಣೆಗಾಗಿ ಏನೂ ಇರಲಿಲ್ಲ, ಆದ್ದರಿಂದ ಭಾಸ್ಕರ ಶೆಟ್ಟಿಯವರು ಹುಬ್ಬಳಿಯಲ್ಲಿ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡು, ಅಲ್ಲಿ ಕೆಲಸ ಮಾಡುತ್ತಾ ಬರುವ ಸಂಬಳದಲ್ಲಿ ಮನೆ ನಿರ್ವಹಣೆ ಮಾಡಿ, ಬಡವರಾದರೂ ಉತ್ತಮ ಜೀವನ ನಡೆಸುತ್ತಿದ್ದರು.

 

 

ಅದರೆ ಈ ಸಂತೋಷ ಹೆಚ್ಚು ಸಮಯ ಉಳಿಯಲಿಲ್ಲ 2017ರಲ್ಲಿ  ತನ್ನ ಹುಬ್ಬಳ್ಳಿಯ ಹೋಟೆಲಿನಿಂದ ಮಧ್ಯರಾತ್ರಿ ತನ್ನ ದ್ವಿಚಕ್ರದಲ್ಲಿ ತನ್ನ ರೂಮ್ ಗೆ ತೆರಳುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಇವರನ್ನು ಆಸ್ಪತ್ರೆಗೆ ಸೇರಿಸಿದರು.‌ ಅಲ್ಲಿ ಬದುಕುವುದೂ ಕಷ್ಟ ಎಂದು ಇನ್ನೊಂದು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಯೂ ಇವರನ್ನು ದಾಖಲಿಸಲು ನಿರಾಕರಿಸಿದ ಸಂದರ್ಭ ಅಪದ್ಬಾಂಧವನಂತೆ ಅವರು ಕೆಲಸ ಮಾಡುತ್ತಿದ್ದ ಹೋಟೆಲ್ ಮಾಲಿಕರು ಆಸ್ಪತ್ರೆಯಲ್ಲಿ ಮಾತನಾಡಿ ಚಿಕಿತ್ಸೆ ನೀಡುವಲ್ಲಿ ಸಫಲರಾದರು. ಅಪಘಾತದಿಂದ ಒಂದು ಕಣ್ಣು ಕಾಣದಂತಾಯಿತು, ಒಂದು ಕಿವಿ ಕೇಳದಂತಾಯಿತು. ಕಾಲು ತುಂಡಾಗಿ, ಕೊನೆಗೂ ಕಷ್ಟದಲ್ಲಿ ನಡೆದಾಡುವಂತಾಯಿತು. ಆಸ್ಪತ್ರೆಯ ಎಲ್ಲಾ ಚಿಕಿತ್ಸೆಯ ಬಿಲ್ಲನ್ನು ಮಾಲಿಕರೇ ಭರಿಸಿ, ಇವರನ್ನು ಮನೆಗೆ ಕಳುಹಿಸಿದರು. ಇವರ ಸಂಬಳದಿಂದಲೇ ಸಾಗುತಿದ್ದ ಸಂಸಾರಕ್ಕೆ ದೊಡ್ಡ ಹೊಡೆತ ಬಿತ್ತು. ಅದರೂ ದೃತಿಗೆಡದೇ ಇವರ ಹೆಂಡತಿ 39 ವರ್ಷ ಪ್ರಾಯದ ರಾಧಾ ಅವರು ಬೀಡಿ ಕಟ್ಟಿ ಗಂಡ ಮಕ್ಕಳು, ಅತ್ತೆಯನ್ನು ಸಾಕಲು‌ ಪ್ರಾರಂಭಿಸಿದರು.‌ ಅದರೂ ಜೀವನ ಕಷ್ಟದಾಯಕವಾಗಿತ್ತು.  ಮದ್ದಿಗೂ ಹಣ ಹೊಂದಿಸಲು ಕಷ್ಟ ಪಡಬೇಕಾದ ಸ್ಥಿತಿ ನಿರ್ಮಾಣವಾಯಿತು. ಜೊತೆಗೆ ಹಳೆಯದಾಗಿದ್ದ ಮನೆ ದುರಸ್ತಿಯಾಗದೆ ಮುರಿದು ಬೀಳುವ ಸ್ಥಿತಿಯಲ್ಲಿತ್ತು. ಈ ಬಗ್ಗೆ ಭಾಸ್ಕರ ಅವರು ತನ್ನ ಸ್ಥಳೀಯ ಗೆಳೆಯನಲ್ಲಿ ತನ್ನ ಅಸಹಾಯಕತೆ ಕುರಿತು ಹೇಳಿದಾಗ ಅವರು ಅಶಕ್ತರ ಬಾಳಿಗೆ ಬೆಳಕಾಗುವ ಸದಾ ಸಮಾಜಮುಖಿ ಕಾರ್ಯಗಳ ಮೂಲಕ ಹೆಸರುಗಳಿಸಿದ ಕನ್ಯಾಡಿಯ  ‘ವೀರ ಕೇಸರಿ’ ಸಂಘಟನೆಯ ಸದಸ್ಯರ ಗಮನಕ್ಕೆ ತಂದರು. ಅದರ ಸದಸ್ಯರು ಮನೆಯ ದುಃಸ್ಥಿತಿ ನೋಡಿ ದಾನಿಗಳ ಸಹಕಾರದಲ್ಲಿ ಹಳೆಯ ಮನೆಯ ಪಕ್ಕದಲ್ಲೇ ಹೊಸ ಮನೆಯೊಂದನ್ನು ಕಳೆದ 2 ವರ್ಷಗಳ ಹಿಂದೆ  ನಿರ್ಮಿಸಿಕೊಟ್ಟು ಆಸರೆಯಾದರು. ಅವಾಗಲೇ ಭಾಸ್ಕರ್ ಅವರು ಮಂಗಳೂರಿನ ಮಾಲ್ ಒಂದರಲ್ಲಿ ಊಟ ಖರ್ಚು ರೂಂ ಬಾಡಿಗೆ ಸೇರಿ 8 ಸಾವಿರಕ್ಕೆ ಕೆಲಸಕ್ಕೆ ಸೇರಿದರು. ಅವರ ಸಂಬಳ ಮನೆ ಖರ್ಚಿಗೂ ಸಾಕಾಗುತ್ತಿರಲಿಲ್ಲ. ರಾಧಾ ಅವರು ಬೀಡಿ ಕಟ್ಟುತಿದ್ದುದರಿಂದ ಕಷ್ಟದಲ್ಲಿ ಜೀವನ ಸಾಗುತಿತ್ತು. ಅದರೆ ಕಳೆದ ಆರು ತಿಂಗಳ ಹಿಂದೆ ಮನೆಯೊಡತಿ ರಾಧಾ ಅವರಿಗೆ ವಿಪರೀತ ತಲೆ ನೋವು ಕಾಣಿಸಿಕೊಂಡಿತು, ಇದಕ್ಕಾಗಿ ಬೆಳ್ತಂಗಡಿ ನಗರದ  ಡಾಕ್ಟರ್ ಬಳಿ ಹೋಗಿ ತಪಾಸಣೆ ಮಾಡಿ ಔಷಧಿಯನ್ನು  ತಂದು ಸೇವಿಸುತ್ತಿದ್ದರು.ಅದರೆ ಡಿ 13 ರಂದು‌ ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಿ, ಅಡುಗೆಗಾಗಿ ಅಡುಗೆ ಮನೆಗೆ ಹೋಗಿದ್ದರು, ಈ ಸಂದರ್ಭದಲ್ಲಿ ವಾಂತಿ ಮಾಡಿ ತಲೆ ತಿರುಗಿ ಬಿದ್ದುಬಿಟ್ಟರು. ಮನೆಯಲ್ಲಿ ಯಾರೂ ಇರಲಿಲ್ಲ, ಸ್ವಲ್ಪ ಹೊತ್ತಿನ ನಂತರ  ಪಕ್ಕದ ಮನೆಯವರು ಬಂದು ನೋಡಿದಾಗ ರಾಧಾ ಅವರು ಬಿದ್ದಿರುವುದು ಗಮನಕ್ಕೆ ಬಂತು. ತಕ್ಷಣ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಂಗಳೂರಿಗೆ  ಹೋಗಲು ಸೂಚಿಸಿದರು. ಅಲ್ಲಿ ಹೋಗಿ ತಪಾಸಣೆ ನಡೆಸಿದಾಗ, ಅಲ್ಲಿ ದೊರೆತ ವರದಿಯ ಪ್ರಕಾರ ಇವರಿಗೆ ಬ್ರೈನ್ ಟ್ಯೂಮರ್ ಎಂಬ ಮಾಹಿತಿ ವೈದ್ಯರು ತಿಳಿಸಿದರು. ಮೊದಲೇ ಆಘಾತಗೊಂಡಿದ್ದ ಬಡ ಕುಟುಂಬಕ್ಕೆ ಈ ವಿಚಾರ ಬರ ಸಿಡಿಲಿನಂತೆ ಎರಗಿತು. ಮೊದಲೇ ಏನೂ ಇಲ್ಲದ ಸ್ಥಿತಿ  ಕಳೆದ ಡಿ 20ರಂದು ಅಪರೇಶನ್ ಆಗಿದೆ ಅದರೂ ಮದ್ದಿಗೆ ಏನು ಮಾಡಬೇಕು, ಅದಕ್ಕಾಗಿ ಹಣ ಹೊಂದಿಸಬೇಕು. ಏನೂ‌ ಮಾಡುವುದೆಂಬ ಚಿಂತೆಯಲ್ಲಿ ಇದೆ ಈ ಕುಟುಂಬ.

 

ಹಳೆಯ ಹಂಚಿನ ಮನೆ

ಗಂಭೀರ ಸ್ಥಿತಿಯಲ್ಲಿರುವ ಕ್ಯಾನ್ಸರ್  ಪೀಡಿತ  ಅಕ್ಕ 

ಅದಲ್ಲದೇ ಸುಮಾರು 70 ವರ್ಷ ಪ್ರಾಯದ ವೃದ್ಧ ತಾಯಿಯೊಂದಿಗೆ ಭಾಸ್ಕರ ಶೆಟ್ಟಿಯವರ ಹಳೆಯ ಹಂಚಿನ ಮನೆಯಲ್ಲಿ‌ ಕ್ಯಾನ್ಸರ್ ನಿಂದ ಮುಖದಲ್ಲಿ ತೂತು ಆಗಿ ಆಹಾರ ನೀಡಿದರೆ ಆ ತೂತಿನ ಮೂಲಕ ಹೊರಗೆ ಬರುವ ಸ್ಥಿತಿಯಲ್ಲಿ ಏನೂ ಹೊಟ್ಟೆಗೆ ತಿನ್ನಲಾಗದೇ ಶೋಚನೀಯ  ಗಂಭೀರ ಸ್ಥಿತಿಯಲ್ಲಿರುವ 40 ವರ್ಷದ ಅಕ್ಕ ( ದೊಡ್ಡಮ್ಮನ ಮಗಳು) ಕೇವಲ ಪಾನೀಯ ಮಾತ್ರ ಸೇವಿಸಿಕೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡುತಿದ್ದಾರೆ. ಅವರಿಗೆ ಯಾರೂ ಇಲ್ಲದ ಕಾರಣ ತನ್ನ ಮನೆಗೆ ಕರೆದುಕೊಂಡು ವೃದ್ಧೆ ತಾಯಿ ನೋಡಿಕೊಂಡರೂ ಖರ್ಚಿಗೆ ಇವರೇ ಏನಾದರೂ ನೀಡಬೇಕಾಗುತ್ತದೆ.ಎಲ್ಲವೂ ಸೇರಿ ಈಗಾಗಲೇ ಸುಮಾರು ₹  3 ಲಕ್ಷದಷ್ಟು ಹಣ ಸಾಲ ಆಗಿದೆ ಎನ್ನುತ್ತಾರೆ ಭಾಸ್ಕರ್ ಶೆಟ್ಟಿಯವರು.

 

 

ಅದ್ದರಿಂದ ಸಹೃದಯಿಗಳು, ನೇರವಾಗಿ ಈ ಕೆಳಗಿನ ಬ್ಯಾಂಕ್ ಖಾತೆಗೆ ಅಥವಾ ಅವರ ಮೊಬೈಲ್ ಪೋನ್ ಪೇ ಮೂಲಕ ಅರ್ಥಿಕ ಸಹಕಾರ ನೀಡಿ ಅವರ ಬಾಳಲ್ಲಿ ಬೆಳಕನ್ನು ಮೂಡಿಸಲು ಸಹಕಾರ ನೀಡಬಹುದು.

ಬ್ಯಾಂಕ್ ವಿವರ 

 

State Bank of India
Savings Bank Account
BELTHANGANDY
CIF No
Account No :
85284039940

33740200151
P.B.NO.1, SHREE KSHETRA COMPLE
X .
Customer Name: Mr. BHASKAR
SHETTY
s/D/W/H/o:SEENA
Address: BARAMALU HOUSE KNYADI VILLAGE.
SHETTY
9483895438
PERMANU POST

Branch Code:3356

IFSC:SBIN0003356
BELTHANGADY T Q

 

ಸಂಪರ್ಕ ಸಂಖ್ಯೆ :9483895438.(phone pay )    8861759438

 

 

ಹೆಚ್ಚಿನ ಮಾಹಿತಿಗಾಗಿ ಈ ಮೇಲಿನ ಭಾಸ್ಕರ ಶೆಟ್ಟಿ ಯವರ ಪೋನ್ ನಂಬ್ರಕ್ಕೆ ಸಂಪರ್ಕಿಸಬಹುದು.

error: Content is protected !!