ಮಾ 05 ಕ್ಕೆ ವೇಣೂರು ಪೆರ್ಮುಡ ಸೂರ್ಯ ಚಂದ್ರ ಕಂಬಳ ಪತ್ರಿಕಾ ಗೋಷ್ಠಿಯಲ್ಲಿ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಕೋಟ್ಯಾನ್ ಹೇಳಿಕೆ.

 

 

ಬೆಳ್ತಂಗಡಿ: 29ನೇ ವರ್ಷದ ವೇಣೂರ್ ಪೆರ್ಮುಡ ಸೂರ್ಯ ಚಂದ್ರ ಜೋಡುಕರೆ ಕಂಬಳ ಕೂಟ ಬರುವ ಮಾ.5 ರಂದು ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಲ|ನಿತೀಶ್ ಹೆಚ್. ಕೋಟ್ಯಾನ್ ಹೇಳಿದರು.

ಅವರು ಡಿ.18 ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಕಳೆದ 28 ವರ್ಷಗಳಿಂದಲೂ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದ ಕಂಬಳ ಈ ವರ್ಷವೂ 24 ಗಂಟೆಯೊಳಗೆ ನಿಗದಿತ ಸಮಯದಲ್ಲಿ ಎಲ್ಲಾ ಸಂಘ ಸಂಸ್ಥೆಗಳ ಗಣ್ಯರ ಹಾಗೂ ಊರವರ ಸಹಕಾರದಿಂದ ಗೌರವಾಧ್ಯಕ್ಷ ಮಾಜಿ ಶಾಸಕ ಕೆ. ವಸಂತ ಬಂಗೇರ ಮತ್ತು ಸಮಿತಿಯ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆಯಲಿದೆ.

ಈ ವರ್ಷ ಪೆರ್ಮುಡ ಕಂಬಳ ನಡೆಯುವುದಿಲ್ಲ ಎಂಬ ಗಾಳಿ ಸುದ್ದಿ ಹರಡುತ್ತಾ ಇದ್ದು ಸುಳ್ಳು ಸುದ್ದಿಯಾಗಿದ್ದು ನಿಗದಿಯಂತೆ ಮಾ.5 ರಂದು ನಡೆಯಲಿದೆ. ಈ ಬಗ್ಗೆ ಎಲ್ಲಾ ಪೂರ್ವ ತಯಾರಿಗಳು ಮುಗಿದಿದ್ದು ಡಿ.19 ರಿಂದ ಕುದಿ ಕಂಬಳಗಳು ಪ್ರಾರಂಬವಾಗಲಿದೆ. ಪೆರ್ಮುಡ ಕಂಬಳ ಡಿಸೆಂಬರ್-ಜನವರಿಯಲ್ಲಿ ನಡೆಸುತ್ತಾ ಬರುತ್ತಿದ್ದು ಈ ಬಾರಿ ನದಿಯಲ್ಲಿ ನೀರಿನ‌ ಮಟ್ಟ ಹೆಚ್ವಿರುವುದರಿಂದ ಮಾ.5 ಕ್ಕೆ ದಿನ ನಿಗದಿಪಡಿಸಲಾಗಿದೆ. ಕಂಬಳಕ್ಕೆ ಎಲ್ಲಾ ಗಣ್ಯರನ್ನು ಆಹ್ವಾನಿಸಲಾಗುವುದು ಅಲ್ಲದೆ ಈ ವರ್ಷ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿ ಅಳದಂಗಡಿಯವರನ್ನು ಗೌರವಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಮಾಜಿ ಜಿ.ಪಂ. ಸದಸ್ಯ ಶೇಖರ್ ಕುಕ್ಕೇಡಿ, ಉಪಾಧ್ಯಕ್ಷ ಲಕ್ಷ್ಮಣ ಪೂಜಾರಿ ಹೆಡ್ಮೆ, ಕೋಶಾಧಿಕಾರಿ ಅಶೋಕ ಪಾಣೂರು ಉಪಸ್ಥಿತರಿದ್ದರು.

error: Content is protected !!