ದಕ್ಷಿಣ ಕನ್ನಡದಲ್ಲಿ 5 ಒಮಿಕ್ರಾನ್ ಪ್ರಕರಣ ಪತ್ತೆ..! ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆ.

 

 

ಬೆಂಗಳೂರು: ಕರ್ನಾಟಕದಲ್ಲಿ ಒಮಿಕ್ರಾನ್ ಸೋಂಕಿನ ಪ್ರಕರಣ ಹೆಚ್ಚಳವಾಗುತ್ತಿವೆ. ಇಂದು ಒಟ್ಟು 6 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆವೊಂದರಲ್ಲೇ ಒಟ್ಟು 5 ಪ್ರಕರಣ ಪತ್ತೆಯಾಗಿತ್ತು. ಆದ್ರೆ ದಕ್ಷಿಣ ಕನ್ನಡದಲ್ಲಿನ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಇಂದು ದಕ್ಷಿಣ ಕನ್ನಡದ ಎರಡು ಶಿಕ್ಷಣ ಸಂಸ್ಥೆಗಳಿಂದ ಒಟ್ಟು 5 ಪ್ರಕರಣ ಪತ್ತೆಯಾದರೆ ಯುಕೆಯಿಂದ ಆಗಮಿಸಿದ ಓರ್ವನಲ್ಲಿ ಒಮಿಕ್ರಾನ್ ಕಾಣಿಸಿದೆ. ದಕ್ಷಿಣ ಕನ್ನಡದ ಕ್ಲಸ್ಟರ್ ಒಂದರಲ್ಲಿ ಒಟ್ಟು 14 ಕೋವಿಡ್ ಪ್ರಕರಣ ದೃಢವಾಗಿವೆ. ಇದರಲ್ಲಿ 4 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದವು.
ಕ್ಲಸ್ಟರ್ ಎರಡರಲ್ಲಿ 19 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ದರಲ್ಲಿ 1 ಒಮಿಕ್ರಾನ್ ಪ್ರಕರಣ ದೃಢಪಟ್ಟಿತ್ತು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಟ್ವೀಟ್‌ನ​ಲ್ಲಿ ಮಾಹಿತಿ ನೀಡಿದ್ದಾರೆ. ಈ ಮೂಲಕದ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಮಾಹಿತಿ:ಕುರ್ನಾಡುವಿನ ಜೆಎನ್ ವಿ ಶಾಲೆಯ 16 ವಿದ್ಯಾರ್ಥಿಗಳಿಗೆ ಡಿಸೆಂಬರ್ 10 ರಂದು ಕೊರೊನಾ ಪಾಸಿಟಿವ್ ಬಂದಿತ್ತು. ಇವರ ಜೆನೊಮಿಕ್ ರಿಪೋರ್ಟ್ ಇಂದು ಬಂದಿದ್ದು, ಇದರಲ್ಲಿ ನಾಲ್ಕು ‌ಮಂದಿಗೆ ಒಮಿಕ್ರಾನ್ ವೈರಸ್ ಇರುವುದು ಗೊತ್ತಾಗಿದೆ. ಹಾಗೆಯೇ ‌ಶ್ರೀನಿವಾಸ ನರ್ಸಿಂಗ್ ಕಾಲೇಜಿನ 19 ವಿದ್ಯಾರ್ಥಿಗಳಿಗೆ ಡಿಸೆಂಬರ್ 9 ರಂದು ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಇವರ ಮಾದರಿಯನ್ನು ಡಿಸೆಂಬರ್ 10 ರಂದು ಜೆನೊಮಿಕ್ ರಿಪೋರ್ಟ್​ಗೆ ಕಳುಹಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ಒಬ್ಬ ವಿದ್ಯಾರ್ಥಿನಿಗೆ ಒಮಿಕ್ರಾನ್ ವೈರಸ್ ಇರುವುದು ಪತ್ತೆಯಾಗಿದೆ. ಆದ್ರೆ ಈಗಾಗಲೇ ಈ ಎಲ್ಲ ಐವರ ಕೋವಿಡ್ ವರದಿ ನೆಗೆಟಿವ್ ಬಂದಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಮಾಹಿತಿ ನೀಡಿದೆ.

error: Content is protected !!