ಸತ್ಯ ಸಾರಮಾನಿ ಕಾನದ ಕಟದ ಜನ್ಮಭೂಮಿ ಬಂಗಾಡಿ ಕೇಂದ್ರ ಸಮಿತಿ ರಚನೆ : ಸಮುದಾಯ ಜಾಗೃತಿ ಕುರಿತು ಮರು ಚಿಂತನೆ

 

 

ಬೆಳ್ತಂಗಡಿ : ನಮ್ಮ ಸಮುದಾಯದ ಅವಳಿ ವೀರ ಪುರುಷರಾದ ಸತ್ಯ ಸಾರಮಾನಿ ಕಾನದ ಕಟದರು ಅನಿಷ್ಟ ಊಳಿಗಮಾನ್ಯ ಪದ್ಧತಿಯೂ ಸೇರಿದಂತೆ ಅಸ್ಪೃಶ್ಯತೆ, ದಬ್ಬಾಳಿಕೆಗಳ ವಿರುದ್ಧ ಗಟ್ಟಿ ಧ್ವನಿ ಎತ್ತಿ ಹೋರಾಡುವ ಮೂಲಕ ಸಮುದಾಯದಲ್ಲಿ ಸ್ವಾಭಿಮಾನ ಪ್ರಜ್ಞೆ ಮೂಡಿಸಿದರಲ್ಲದೆ  ಹೊಲ ಗದ್ದೆಗಳನ್ನು ತಾವೇ ಮಾಡಿ ಉತ್ತು ಬಿತ್ತಿ ಕೃಷಿ, ಬೆಳೆ ಸಂಸ್ಕೃತಿಯನ್ನು ಎತ್ತಿ ಹಿಡಿದು ಸ್ವಾವಲಂಬನೆಯ ಬದುಕನ್ನು ಕಲಿಸಿ ಇತಿಹಾಸ ಸೇರಿದ್ದು ಅವರ ಆದರ್ಶದ ಜೊತೆಗೆ ಅಂಬೇಡ್ಕರ್ ತೋರಿದ ದಾರಿಯಲ್ಲಿ ಸಮುದಾಯವನ್ನು ಮುನ್ನಡೆಸಬೇಕಾಗಿದೆ. ಎಂದು
.ಬಂಗಾಡಿ ಸತ್ಯ ಸಾರಮಾನಿ ಕಾನದ ಕಟದ ಜನ್ಮಸ್ಥಳ ಶೋಧನಾ ಸಮಿತಿ ಅಧ್ಯಕ್ಷ ವೆಂಕಣ್ಣ ಕೊಯ್ಯೂರು ಹೇಳಿದರು ಅವರು ಇಂದಬೆಟ್ಟು ಚರ್ಚ್ ಹಾಲ್ ನಲ್ಲಿ ನಡೆದ ಸತ್ಯ ಸಾರಮಾನಿ ಕಾನದ ಕಟದ ಜನ್ಮಭೂಮಿ ಬಂಗಾಡಿ , ಕೇಂದ್ರ ಸಮಿತಿಯನ್ನು ರಚನಾ ಸಭೆಯನ್ನುದ್ಧೇಶಿಸಿ ಮಾತನಾಡಿದರು.ಯುವ ಸಂಘಟಕ ಲಕ್ಷ್ಮಣ್ ಜಿ.ಎಸ್. , ಸಂಜೀವ ಆರ್, ರಮೇಶ್ ಆರ್, ವಸಂತ ಬಿ.ಕೆ. ಮತ್ತಿತರರು ಮಾತನಾಡಿ ಸತ್ಯ ಸಾರಮಾನಿ ಕಾನದ ಕಟದರ ಜನ್ಮಭೂಮಿಯಾದ ಬಂಗಾಡಿಯನ್ನು ಇಡೀ ಸಮುದಾಯ ಒಗ್ಗೂಡಿ ಕಾನದ ಕಟದರನ್ನು ಸಾಮೂಹಿಕವಾಗಿ ಆರಾಧಿಸುವ ಪವಿತ್ರ ಭೂಮಿಯಾಗಿ ನಾಡಿಗೆ ಮತ್ತೊಮ್ಮೆ ಪರಿಚಯಿಸಬೇಕಾಗಿದೆ ಎಂದು ಪ್ರತಿಪಾದಿಸಿದರು.

ಸತ್ಯ ಸಾರಮಾನಿ ಕಾನದ ಕಟದ ಜನ್ಮಭೂಮಿಯಾದ ಬಂಗಾಡಿಯ ಸತ್ಯ ಸಾರಮಾನಿ ಸಮುದಾಯದ ಹಿರಿಯ ಮುಖಂಡರ ನೇತೃತ್ವದಲ್ಲಿ ಇಂದಬೆಟ್ಟು ಸತ್ಯಸಾರಮಾನಿ ದೈವಸ್ಥಾನ ಸಮಿತಿ ಕಾರ್ಯದರ್ಶಿ ಸೋಮ ಇಂದಬೆಟ್ಟು ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಸಮುದಾಯದ ಜಾಗೃತಿ ಬಗ್ಗೆ ನಡೆದ ಮಹತ್ವದ ಚಿಂತನಾ ಸಭೆಯ ನಂತರ ಸಮಿತಿಯನ್ನು ರಚನೆ ಮಾಡಲಾಯಿತು.

ಸತ್ಯ ಸಾರಮಾನಿ ಯುವ ಸೇನೆ ಅಧ್ಯಕ್ಷ ಸುರೇಶ್ ಪಿ.ಬಿ., ವಸಂತ ಬಿ.ಕೆ., ನಾರಾಯಣ ಇಂದಬೆಟ್ಟು,
ಸತ್ಯ ಸಾರಮಾನಿ ಕಾನದ ಕಟದ ಜನ್ಮಭೂಮಿ ಬಂಗಾಡಿ ಕೇಂದ್ರ ಸಮಿತಿಯ ಗೌರವಾಧ್ಯಕ್ಷರಾಗಿ ವೆಂಕಣ್ಣ ಕೊಯ್ಯೂರು,
ಅಧ್ಯಕ್ಷರಾಗಿ ಸೋಮ ಇಂದಬೆಟ್ಟು, ಉಪಾಧ್ಯಕ್ಷರುಗಳಾಗಿ ಕೇಶವ ಕಡಿರುದ್ಯಾವರ , ವಸಂತ ಬಿ.ಕೆ., ಲಕ್ಷ್ಮಣ್ ಜಿ.ಎಸ್.,
ಪ್ರಧಾನ ಕಾರ್ಯದರ್ಶಿಯಾಗಿ ಕೆ.ನೇಮಿರಾಜ್ ಬಂಗಾಡಿ,
ಜೊತೆ ಕಾರ್ಯದರ್ಶಿಯಾಗಿ ನಾರಾಯಣ ಇಂದಬೆಟ್ಟು,
ಕೋಶಾಧಿಕಾರಿಯಾಗಿ
ರಾಜು ಕೆ. ಪಡಂಗಡಿ,
ಮಾಧ್ಯಮ ಸಂಪರ್ಕ ನಿರ್ವಹಣೆ
ಅಚುಶ್ರೀ ಬಾಂಗೇರು, ಸಲಹೆಗಾರರಾಗಿ
ಚೀಂಕ್ರ ಇಂದಬೆಟ್ಟು,
ಕಾರ್ಯಕಾರಿ ಸಮಿತಿ ಸದಸ್ಯರಾಗಿ ರುಕ್ಮಯ್ಯ ಬಂಗಾಡಿ, ರಮೇಶ್ ಆರ್, ಐತಪ್ಪ ಇಂದಬೆಟ್ಟು, ಸುಂದರ ನಾಲ್ಕೂರು, ಸಂಜೀವ ಇಂದಬೆಟ್ಟು, ಪುಷ್ಪರಾಜ್ ಕರಂಬಾರು, ಸಂಜೀವ ಆರ್,
ಸುಂದರ ಇಂದಬೆಟ್ಟು, ಬಾಬು ಮುಂಡ್ರಬೆಟ್ಟು,
ಚಿನ್ನಯ ಇಂದಬೆಟ್ಟು, ಲೋಕೇಶ್ ನೀರಾಡಿ,
ಉದಯ ಗೋಳಿಯಂಗಡಿ  ಮುಂತಾದವರು ಆಯ್ಕೆಯಾದರು.

ಮುಂದಿನ ಸಭೆಯಲ್ಲಿ ಸಮುದಾಯದ ಅಭಿವೃದ್ಧಿಯ ಬಗ್ಗೆ ದುಡಿಯುತ್ತಿರುವ ಇನ್ನಷ್ಟು ಅನೇಕ ಪ್ರಮುಖ ನಾಯಕರುಗಳನ್ನು
ಈ ಸಮಿತಿಯಲ್ಲಿ ಪದಾಧಿಕಾರಿಗಳನ್ನಾಗಿ ನೇಮಿಸಿಕೊಳ್ಳಲಾಗುವುದು ಎಂದು ಗೌರವಾಧ್ಯಕ್ಷರಾದ ವೆಂಕಣ್ಣ ಕೊಯ್ಯೂರು ಮತ್ತು ಅಧ್ಯಕ್ಷರಾದ ಸೋಮ ಇಂದಬೆಟ್ಟು  ತಿಳಿಸಿದರು..

ಕೆ.ನೇಮಿರಾಜ್ ಪ್ರಸ್ತಾವನೆಗೈದು ಸ್ವಾಗತಿಸಿದರು.
ವಸಂತ ಬಿ.ಕೆ. ವಂದಿಸಿದರು.

 

error: Content is protected !!