ಬೆಳ್ತಂಗಡಿಯಲ್ಲಿ ಗೀತಾ ಜಯಂತಿ ಅಂಗವಾಗಿ ಶೌರ್ಯ ಸಂಚಲನ ಕಾರ್ಯಕ್ರಮ. ಡಿ 13 ರಂದು ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಕಾರ್ಯಕ್ರಮ ಕು.‌ಹಾರಿಕಾ ಮಂಜುನಾಥ್ ಇವರಿಂದ ದಿಕ್ಷೂಚಿ ಭಾಷಣ ವಿಶ್ವಹಿಂದೂ ಪರಿಷತ್ ಭಜರಂಗದಳ ಮಾತೃ ಮಂಡಳಿ, ದುರ್ಗಾವಾಹಿನಿ ಬೆಳ್ತಂಗಡಿ ಪ್ರಖಂಡ ಆಯೋಜನೆ

 

 

 

ಬೆಳ್ತಂಗಡಿ:ಹಿಂದೂ ಸಮಾಜದ ಮೇಲಾಗುತ್ತಿರುವ ಆಕ್ರಮಣಗಳ ವಿರುದ್ಧ ಜನಜಾಗೃತಿ ಮೂಡಿಸುವುದಕ್ಕಾಗಿ ಗೀತಾ ಜಯಂತಿ ಅಂಗವಾಗಿ ಬೃಹತ್ ಶೌರ್ಯ ಸಂಚಲನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಎಂದು ವಿಶ್ವ ಹಿಂದೂ ಪರಿಷತ್ ಭಜರಂಗದಳ ಬೆಳ್ತಂಗಡಿ ಪ್ರಖಂಡ ಜಿಲ್ಲಾಧ್ಯಕ್ಷ ಭಾಸ್ಕರ ಧರ್ಮಸ್ಥಳ ಹೇಳಿದರು ಅವರು ಬೆಳ್ತಂಗಡಿ ವಿವೇಕಾನಂದ ಸೇವಾ ಟ್ರಸ್ಟ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಆಯೋಧ್ಯೆಯ ಬಾಬರಿ ಮಸೀದಿಯನ್ನು ಕೆಡವಿ, ಹಿಂದೂಗಳ ಆದರ್ಶ ಪುರುಷನಾದ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಬುನಾದಿ ಹಾಕಿದ ಹಿಂದೂಗಳ ಅಭೂತಪೂರ್ವ ಯಶಸ್ಸನ್ನು ಸಹಿಸದ ಮುಸ್ಲಿಂ ಮೂಲಭೂತವಾದಿಗಳು ಕಾರ್ಯಕ್ರಮದ ನಂತರ ಸಮಾಜಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡಿದ್ದು ಹಿಂದೂಗಳ ಮೇಲೆ ವ್ಯವಸ್ಥಿತವಾಗಿ ದಾಳಿ‌ ಮಾಡುತ್ತಿರುವುದು ಕಂಡುಬರುತ್ತಲೇ ಇದೆ.ಇದರ ವಿರುದ್ಧ ಜನಜಾಗೃತಿಗಾಗಿ ವಿಶ್ವಹಿಂದೂ ಪರಿಷತ್ ಭಜರಂಗದಳ ಮಾತೃಮಂಡಳಿ, ದುರ್ಗಾ ವಾಹಿನಿ, ಬೆಳ್ತಂಗಡಿ ಪ್ರಖಂಡ ವತಿಯಿಂದ ಸಂಚಲನಾ ಕಾರ್ಯಕ್ರಮ ಡಿ 13 ರಂದು ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸಮೀಪದಲ್ಲಿರುವ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ನಡೆಯಲಿದೆ. ಶೌರ್ಯ ಸಂಚಲನದ ಮೆರವಣಿಗೆ ಅಪರಾಹ್ನ 3 ಗಂಟೆಗೆ ಲಾಯಿಲ ವೆಂಕಟರಮಣ ದೇವಸ್ಥಾನದಿಂದ ಸಂಘಟನೆಯ ಪ್ರಮುಖರಿಂದ ಶಂಖನಾದದೊಂದಿಗೆ ಪ್ರಾರಂಭಗೊಂಡು , ಬೆಳ್ತಂಗಡಿ ನಗರದ ಮುಖ್ಯರಸ್ತೆಯ ಮೂಲಕ ಸಾಗಿ ಗುರುವಾಯನಕೆರೆ ಸಭಾಭವನಕ್ಕೆ ಬಂದ್ದು ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಕನ್ಯಾಡಿ ಶ್ರೀರಾಮಕ್ಷೇತ್ರದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.‌ದಿಕ್ಸೂಚಿ ಭಾಷಣ ಬೆಂಗಳೂರಿನ ಕು.‌ಹಾರಿಕಾ ಮಂಜುನಾಥ್ ಮಾಡಲಿದ್ದಾರೆ. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಉದ್ಯಮಿ ರಾಗ್ನೇಶ್ ವಹಿಸಿಕೊಳ್ಳಲಿದ್ದು ಸುಮಾರು ಎರಡು ಸಾವಿರಕ್ಕಿಂತಲೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಯೋಜಕ ಸಂತೋಷ್ ಅತ್ತಾಜೆ ,ತಾಲೂಕು ಅಧ್ಯಕ್ಷ ದಿನೇಶ್ ಚಾರ್ಮಾಡಿ, ಗೋರಕ್ಷಾ ಪ್ರಮುಖ್ ರಮೇಶ್ ಧರ್ಮಸ್ಥಳ ಉಪಸ್ಥಿತರಿದ್ದರು.

error: Content is protected !!