ಉಚಿತ ಹೃದಯ ತಪಾಸಣಾ ಶಿಬಿರ ಹಾಗೂ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನೂರುಲ್ ಹುದಾ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಲಾಯಿಲ ಸಹಯೋಗದಲ್ಲಿ ಕಾರ್ಯಕ್ರಮ

 

 

ಬೆಳ್ತಂಗಡಿ:ನೂರುಲ್ ಹುದಾ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ , ನೂರುಲ್ ಹುದಾ ಜುಮ್ಮಾ ಮಸೀದಿ , ಗ್ರಾಮ ಪಂಚಾಯತ್ ಲಾಯಿಲ ಮತ್ತು ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆ ಮತ್ತು ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ‌ ಉಚಿತ ಹೃದಯ ತಪಾಸಣಾ ಶಿಬಿರ ಹಾಗೂ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಇದೇ ಬರುವ ಡಿ. 05 ಆದಿತ್ಯವಾರ ಬೆಳಿಗ್ಗೆ 9 ರಿಂದ ಲಾಯಿಲದ ನೂರುಲ್ ಹುದಾ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ವಠಾರದಲ್ಲಿ ನಡೆಯಲಿದೆ. ಎಂದು ಲಾಯಿಲ ಎನ್. ಎಚ್.‌ಇ.ಸಿ.ಟಿ ಅಧ್ಯಕ್ಷ ಅನ್ಸರ್ ತಿಳಿಸಿದರು. ಅವರು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ‌ ನಮ್ಮ ಟ್ರಸ್ಟ್ ಈಗಾಗಲೇ ಹಲವಾರು ಸೇವಾ ಯೋಜನೆಗಳನ್ನು ಕೈಗೊಂಡಿದೆ ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಕಿಟ್, ಬೃಹತ್ ಆರೋಗ್ಯ ಶಿಬಿರ ಉಚಿತ ಕಣ್ಣಿನ ಪರೀಕ್ಷೆ ಕಾರ್ಯಕ್ರಮಗಳನ್ನು ಆಯೋಜಿಸಿ ಇದೀಗ ಹೃದಯ ತಪಾಸಣಾ ಶಿಬಿರವನ್ನು ಖ್ಯಾತ ವೈದ್ಯರಾದ ಪದ್ಮನಾಭ ಕಾಮತ್ ಅವರ ಮಾರ್ಗದರ್ಶನದಲ್ಲಿ ನಡೆಸಲಿದ್ದೇವೆ. ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೆಕಳ ಹಾಜಬ್ಬ ಹಾಗೂ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪಡೆದ ಸಾಹಿತಿ ಪ.ರಾ.ಶಾಸ್ರ್ತಿ ಪತ್ರಕರ್ತ ಬಿ. ಎಸ್. ಕುಲಾಲ್ ಇವರನ್ನು ಗೌರವಿಸುವ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಲಿದ್ದು . ಅಧ್ಯಕ್ಚತೆ ಅನ್ಸಾರ್ ತಾಜ್ , ಗೌರವ ಉಪಸ್ಥಿತಿ ಬಿಷಪ್ ಲಾರೆನ್ಸ್ ಮುಕ್ಕುಯಿ, ತಿಮ್ಮಣ್ಣರಸರಾದ ಪದ್ಮ ಪ್ರಸಾದ್ ಅಜಿಲ, ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಜಾಫರ್ ಸ್ವಾದಿಕ್ ತಂಞಳ್ ಲಾಯಿಲ. ವಿಶೇಷ ಆತಿಥಿಗಳಾಗಿ ಪದ್ಮಶ್ರೀ ಪುರಸ್ಕ್ರತ ಹರೇಕಳ ಹಾಜಬ್ಬ, ಖ್ಯಾತ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ .  ಉಚಿತ ಹೃದಯ ತಪಾಸಣಾ ಶಿಬಿರದಲ್ಲಿ ಇಸಿಜಿ, ಇಸಿಹೆಚ್ಒ ಪರೀಕ್ಷೆಯನ್ನು  ಉಚಿತವಾಗಿ ಮಾಡಲಾಗುವುದು,   ಶಿಬಿರಾರ್ಥಿಗಳಿಗೆ ಬೇಕಾದ ಔಷಧಿಗಳನ್ನು ಸ್ಥಳದಲ್ಲಿಯೇ ಉಚಿತವಾಗಿ ವಿತರಿಸಲಾಗುವುದು ಅದಲ್ಲದೇ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಕೆ.ಎಂಸಿ ಆಸ್ಪತ್ರೆಯ ಹಸಿರು ಕಾರ್ಡನ್ನು ಉಚಿತವಾಗಿ ನೀಡಲಾಗುವುದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ   ಈ ಆರೋಗ್ಯ ಶಿಬಿರದ  ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿನಂತಿಸಿದರು.ಪತ್ರಿಕಾಗೋಷ್ಠಿಯಲ್ಲಿ ಹಮೀದ್ ಮಿಲನ್, ಅಬ್ದುಲ್ ಬಾವುಂಞ, ಅಬ್ದುಲ್ ಹನೀಫ್, ಎಚ್. ಎ. ಕರೀಂ, ಉಪಸ್ಥಿತರಿದ್ದರು.

error: Content is protected !!