ನದಿಯಲ್ಲಿ ಮುಳುಗಿ ಯುವಕ ಸಾವು. ಚಂದ್ಕೂರು ಸಮೀಪ ನಡೆದ ಘಟನೆ.

 

 

ಬೆಳ್ತಂಗಡಿ: ನದಿಯಲ್ಲಿ ಮುಳುಗಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ.
ನಡ ಗ್ರಾಮದ ಚಂದ್ಕೂರು ಸಮೀಪದ ಸೋಮಾವತಿ ನದಿಯಲ್ಲಿ ಮೂರು ಮಂದಿ ಯುವಕರು ಸ್ನಾನಕ್ಕೆ ತೆರಳಿದ ಸಂದರ್ಭ  ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು  ಯುವಕನೊಬ್ಬ ಮುಳುಗಿ ಮೃತ ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ ಮುಳುಗಿದ ಯುವಕನನ್ನು ಸ್ಥಳೀಯ ನಿವಾಸಿ ಉಮೇಶ್  ಮಂಜೊಟ್ಟಿ ಹಾಗೂ ಸ್ಥಳೀಯರು ಸೇರಿ    ತಕ್ಷಣ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ . ಮೃತ ಯುವಕ ಕಾಶಿಬೆಟ್ಟು ಎಂಬಲ್ಲಿಯ ಇಸ್ಮಾಯಿಲ್ ಎಂಬವರ ಪುತ್ರ ನಬಾನ್ (18) ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

error: Content is protected !!