ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಅಧ್ಯಕ್ಷರಾಗಿ ಎಂ. ಪಿ. ಶ್ರೀನಾಥ್ ಆಯ್ಕೆ.

 

 

 

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಎಂ.ಪಿ ಶ್ರೀನಾಥ್ ಗೆಲುವು ಸಾಧಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮೂರು ಹೋಬಳಿಗಳ ಪೈಕಿ ಬೆಳ್ತಂಗಡಿ ಹೋಬಳಿ ಮತ್ತು ಕೊಕ್ಕಡ ಹೋಬಳಿಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಕೇಂದ್ರ ಸಮಿತಿ ಅಧ್ಯಕ್ಷಗಾದಿಗೆ ಹಾಗೂ ದ.ಕ. ಜಿಲ್ಲಾಧ್ಯಕ್ಷ ಸ್ಥಾನಗಳಿಗೆ ಭಾನುವಾರ ಮತದಾನ ನಡೆದಿದ್ದು, ಶೇ. 47..86 ಮತದಾನವಾಗಿದೆ.

 

                   ಡಾ. ಎಂ.ಪಿ. ಶ್ರೀನಾಥ್

 

ದ.ಕ. ಜಿಲ್ಲೆಯ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಗಳಿಗೆ ಉಜಿರೆ ಶ್ರೀಧ.ಮಂ. ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಪಿ. ಶ್ರೀನಾಥ್ ಹಾಗೂ ಮಂಗಳೂರು ಏರ್‌ಪೋರ್ಟ್‌ ಮಾಜಿ ನಿರ್ದೆಶಕ ಎಂ.ಆರ್.ವಾಸುದೇವ ಸ್ಪರ್ಧೆಯಲ್ಲಿದ್ದರು. ಬೆಳ್ತಂಗಡಿ ಮತ್ತು ವೇಣೂರು ಹೋಬಳಿಯನ್ನು ಒಂದು ಮತದಾನ ಕೇಂದ್ರವನ್ನು ಮಾಡಿ ಬೆಳ್ತಂಗಡಿ ಮಿನಿ ವಿಧಾನಸೌಧ ಹಾಗೂ ಕೊಕ್ಕಡ ನಾಡ ಕಚೇರಿ ಮತದಾನ ಕೇಂದ್ರದಲ್ಲಿ ಕಸಾಪ ಸದಸ್ಯರು ಮತ ಚಲಾಯಿಸಿದರು. ತಾಲೂಕಿನಲ್ಲಿ 1140 ಪುರುಷ ಹಾಗೂ 436 ಮಹಿಳಾ ಸದಸ್ಯರಿದ್ದು ಒಟ್ಟು 1576 ಮಂದಿ ಸದಸ್ಯ ಮತದಾರರಿದ್ದಾರೆ. ಅದರಲ್ಲಿ 577 ಪುರುಷ ಹಾಗೂ 171 ಮಹಿಳಾ ಒಟ್ಟು 748 ಸದಸ್ಯ ಮತದಾರರು ಮತ ಚಲಾಯಿಸಿದ್ದು ಶೇ. 47.86 ಮತದಾನವಾಗಿದೆ.

ಬೆಳ್ತಂಗಡಿ ಮತ್ತು ವೇಣೂರು ಹೋಬಳಿಯಲ್ಲಿ 898 ಪುರುಷ ಹಾಗೂ 345 ಮಹಿಳಾ ಒಟ್ಟು 1243 ಮತದಾರರಿದ್ದು ಅದರಲ್ಲಿ 438 ಪುರುಷ ಹಾಗೂ 182 ಮಹಿಳಾ ಒಟ್ಟು ೫೮೦ 580 ಸದಸ್ಯ ಮತದಾರರು ಮತ ಚಲಾಯಿಸಿದ್ದಾರೆ. ಶೇ. 46.66 ಮತದಾನವಾಗಿದೆ. ಇಲ್ಲಿ ಕಸಾಪ ಅಭ್ಯರ್ಥಿ ಡಾ. ಎಂ.ಪಿ. ಶ್ರೀನಾಥ್
520 ಮತ ಹಾಗೂ ಎಂ.ಆರ್. ವಾಸುದೇವ 58 ಮತ ಪಡೆದಿದ್ದಾರೆ. 2 ಮತ ಅಸಿಂಧು ಮತ.
ಅದೇ ರೀತಿ ಕೊಕ್ಕಡ ಕೇಂದ್ರದಲ್ಲಿ 242 ಪುರುಷ ಹಾಗೂ 91 ಮಹಿಳಾ ಒಟ್ಟು 333 ಮತದಾರರಿದ್ದು ಅದರಲ್ಲಿ 139 ಪುರುಷ ಹಾಗೂ 29 ಮಹಿಳಾ ಒಟ್ಟು 168 ಸದಸ್ಯ ಮತದಾರರು ಮತ ಚಲಾಯಿಸಿದ್ದು ಶೇ. 50.45 ಮತದಾನವಾಗಿದೆ. ಇಲ್ಲಿ ಡಾ. ಎಂ.ಪಿ ಶ್ರೀನಾಥ್ 152 ಮತ ಹಾಗೂ ಎಂ.ಆರ್. ವಾಸುದೇವ 15 ಮತ ಪಡೆದಿದ್ದಾರೆ. 1 ಅಸಿಂದು ಮತ.

ಜಿಲ್ಲಾಧ್ಯಕ್ಷರಾಗಿ ಎಂ.ಪಿ. ಶ್ರೀನಾಥ್ ಆಯ್ಕೆ

ದ.ಕ. ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಡಾ. ಎಂ.ಪಿ. ಶ್ರೀನಾಥ್ ಅವರು ಉಜಿರೆ ಶ್ರೀಧ.ಮಂ. ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. 26 ವರ್ಷಗಳಿಂದ ಕಾಲೇಜು ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿರುವ ಇವರು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಹಲವಾರು ವರ್ಷಗಳಿಂದ ವಿವಿಧ ಜವಾಬ್ದಾರಿಯನ್ನು ವಹಿಸಿಕೊಂಡು ಸಮರ್ಥವಾಗಿ ನಿರ್ವಹಿಸಿದ ಅನುಭವವಿದೆ.
2008 ರಿಂದ 2021ರ ವರೆಗೆ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ವಿವಿಧ ಸಮಿತಿಗಳಲ್ಲಿ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ 10 ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿದ್ದು, 2017ರಲ್ಲಿ ಉಜಿರೆಯಲ್ಲಿ ಜಿಲ್ಲಾ ಸಮ್ಮೇಳನ ಸಂಘಟನೆ, 2 ಅಂತರ್ ರಾಷ್ಟ್ರೀಯ, 12 ರಾಷ್ಟ್ರ, 16 ರಾಜ್ಯ ಮಟ್ಟದ ಕಾರ್ಯಾಗಾರ ಮತ್ತು ಕಮ್ಮಟದಲ್ಲಿ ಭಾಗವಹಿಸಿದ್ದಾರೆ. ತುಳು ಸಾಹಿತ್ಯ, ಜನಪದ, ಕಂಬಳ ಸಮಿತಿಗಳಲ್ಲಿ ಜವಾಬ್ದಾರಿ, ಉಜಿರೆಯಲ್ಲಿ ನಡೆದ ವಿಶ್ವತುಳು ಸಮ್ಮೇಳನ ಸಮಿತಿ ಕಾರ್ಯದರ್ಶಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕಸಾಪ ಬೆಂಗಳೂರು ಪರೀಕ್ಷಾ ಸಲಹಾ ಮಂಡಳಿ ಸಮಿತಿ ಸದಸ್ಯರಾಗಿ, ಕರ್ನಾಟಕ ಜಾನಪದ ವಿವಿ ಗ್ರಾಮ ಚರಿತ್ರೆ ಕೋಶ ಯೋಜನೆಯಡಿ ಕ್ಷೇತ್ರ ತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ.
ಕಯ್ಯಾರ ಕಿಂಞ್ಞಣ್ಣ ರೈ ಬದುಕು ಮತ್ತು ಬರೆಹ ಹಾಗೂ ಶಿಕಾರಿ ಮತ್ತು ಬಂಡಾಯ ಹೊಸ ಓದು ಇವರ ಪ್ರಕಟಿತ ಕೃತಿಗಳು. ವಿಶ್ವತುಳು ಸಮ್ಮೇಳನದಲ್ಲಿ ತುಳುವೆರೆ ದರ್ಶನ ಛಾಯಾಚಿತ್ರ ಸಂಕಲನ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಭಿನಂದನಾ ಗ್ರಂಥ ಧರ್ಮಯಾನದ ಸಂಯೋಜನೆ, ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಲೇಖನ ಮಾಲಿಕೆ ಸುವರ್ಣ ಸಂಚಯ 20 ಪುಸ್ತಕಗಳ ಸಂಯೋಜನೆ, 2010ರ ಚಾರುಮುಡಿ ಸ್ಮರಣ ಸಂಚಿಕೆ ಇವರ ಸಂಪಾದನೆಯಾಗಿದೆ.
ಬಸವಕೇಂದ್ರ ಮುರುಘಾಮಠದಿಂದ ಶಿಕ್ಷಕರತ್ನ ಪ್ರಶಸ್ತಿ, ಗಡಿನಾಡ ಧ್ವನಿ ರಾಜ್ಯ ಪ್ರಶಸ್ತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ, ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಬೆಂಗಳೂರು ಇವರಿಂದ ವಿಶ್ವ ಕನ್ನಡ ಕಣ್ಮಣಿ ಪ್ರಶಸ್ತಿ ಹಾಗೂ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಿಸಿದ್ದಾರೆ.

error: Content is protected !!