ವಿಧಾನ ಪರಿಷತ್ ಚುನಾವಣಾ ಕಣದಿಂದ ಹಿಂದಕ್ಕೆ ಸರಿದ :ಎಂ.ಎನ್. ರಾಜೇಂದ್ರ ಕುಮಾರ್

 

 

 

ಮಂಗಳೂರು : ವಿಧಾನ ಪರಿಷತ್‌ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿದ್ದ ಸಹಕಾರಿ ಧುರೀಣ ಎಸ್‌ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್.‌ ರಾಜೇಂದ್ರ ಕುಮಾರ್‌ ಚುನಾವಣಾ ಕಣದಿಂದ ದೂರ ಉಳಿಯುವ ಅಚ್ಚರಿಯ ನಿರ್ಧಾರ ಮಾಡಿದ್ದಾರೆ.

ದ.ಕ, ಉಡುಪಿ ಉಭಯ ಜಿಲ್ಲೆಗಳ ಸಹಕಾರಿಗಳು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯ ಮಾಡಿದ ಹಿನ್ನಲೆಯಲ್ಲಿ ಡಾ.ಎಂ.ಎನ್.‌ ರಾಜೇಂದ್ರ ಕುಮಾರ್‌ ಚುನಾವಣೆಗೆ ಸ್ಪರ್ಧಿಸುವ ಚಿಂತನೆ ನಡೆಸಿ ಚುನಾವಣಾ ಕಚೇರಿಯನ್ನೂ ತೆರೆದಿದ್ದರು. ಅದಲ್ಲದೇ ಅ. 22 ರಂದು ಈ ಬಗ್ಗೆ ನಾಮಪತ್ರ ಸಲ್ಲಿಸುವುದಾಗಿಯೂ ಅವರು ಈ ಹಿಂದೆ ತಿಳಿಸಿದರು .

ಆದರೇ ಕಾಂಗ್ರೇಸ್‌ ಪಕ್ಷದಿಂದ ತಮ್ಮ ಚಿಹ್ನೆಯಡಿ ಸ್ಪರ್ಧಿಸುವಂತೆ ಕೆಪಿಸಿಸಿ ಅಧ್ಯಕ್ಷ ಹಾಗೂ ಜಿಲ್ಲೆಯ ವಿವಿಧ ಕಾಂಗ್ರೇಸ್‌ ಮುಖಂಡರುಗಳು ಒತ್ತಾಯಿಸಿದರು. ಈ ಬಗ್ಗೆ ಕಳೆದ ಎರಡು ಮೂರು ದಿನಗಳಿಂದ ಸಹಕಾರಿ ಕ್ಷೇತ್ರದ ವಿವಿಧ ಮುಖಂಡರ ಜತೆ ನಿರಂತರವಾಗಿ ರಾಜೇಂದ್ರ ಕುಮಾರ್‌ ಮಾತುಕತೆ ನಡೆಸುತ್ತಿದ್ದರು. ಆ ಬಳಿಕ ಇದೀಗ ಚುನಾವಣಾ ಕಣದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದ್ದಾರೆ.

ಸಹಕಾರ ಕ್ಷೇತ್ರದಲ್ಲಿ ಪಕ್ಷಾತೀತನಾಗಿ ಉಳಿಯುವ ಬಯಕೆಯಿಂದ ತಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ಡಾ ಎಂ. ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

error: Content is protected !!