ಧರ್ಮಸ್ಥಳಕ್ಕೆ‌ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್ ಭೇಟಿ: ಪಕ್ಷೇತರನಾಗಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧೆ: ನ.22ರಂದು ನಾಮಪತ್ರ ಸಲ್ಲಿಕೆ

 

 

ಬೆಳ್ತಂಗಡಿ: ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ  ಎಂ.ಎನ್.ರಾಜೇಂದ್ರ ಕುಮಾರ್ ಧರ್ಮಸ್ಥಳಕ್ಕೆ ಭೇಟಿ ನೀಡಿ  ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಗೌರವಿಸಿ ಆಶೀರ್ವಾದ ಪಡೆದುಕೊಂಡರು.ನಂತರ ಮಾಧ್ಯಮದವರ ಜತೆ ಮಾತನಾಡಿ, ಡಿ. 10ರಂದು ರಾಜ್ಯದಲ್ಲಿ ಸುಮಾರು 25 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಅವಿಭಾಜಿತ ದ.ಕ. ಜಿಲ್ಲೆಯಲ್ಲಿ ಎರಡು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಪಂಚಾಯತ್ ಸದಸ್ಯರ ಹಾಗೂ ಸಹಕಾರಿ ಬಂಧುಗಳ ಒತ್ತಾಯದಂತೆ ಈ ಬಾರಿ ಪಕ್ಷೇತರನಾಗಿ  ಚುನಾವಣೆಗೆ ಸ್ಪರ್ಧಿಸಲು ಚಿಂತನೆ ನಡೆಸುತಿದ್ದೇನೆ.

 

 

ನ.16 ನೇ ತಾರೀಕಿಗೆ ಮಂಗಳೂರಿನ ಓಶೀಯನ್ ಪಾರ್ಲ್ ಹೋಟೆಲ್ ಸಮೀಪದ ಇನ್ ಲ್ಯಾಂಡ್ ಕಟ್ಟಡದಲ್ಲಿ ಚುನಾವಣಾ ಕಚೇರಿ ಉದ್ಘಾಟನೆಗೊಳ್ಳಲಿದೆ. ಈ  ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಗೆ , ಗಣಪತಿ ದೇವರಿಗೆ  ಪ್ರಾರ್ಥನೆ  ಸಲ್ಲಿಸಿ ಧರ್ಮಾಧಿಕಾರಿಗಳ ಆಶೀರ್ವಾದವನ್ನು ಪಡೆಯಲು ಆಗಮಿಸಿದ್ದೇನೆ.ಅದೇ ರೀತಿ ನ. 22 ನೇ ತಾರೀಕು ನಾಮಪತ್ರ ಸಲ್ಲಿಸಲಿದ್ದೇನೆ.

 

 

ಗ್ರಾಮೀಣ ಭಾಗಗಳ ಪಂಚಾಯತ್ ಸದಸ್ಯರು, ಪಟ್ಟಣ ಪಂಚಾಯತ್ ಸದಸ್ಯರುಗಳಲ್ಲಿ ಈ ಮೂಲಕ ಮನವಿ ಮಾಡುವುದೇನೆಂದರೆ  ಪಕ್ಷಾತೀತವಾಗಿ ಪಂಚಾಯತ್ ಅಭಿವೃದ್ಧಿಯ ಹಾಗೂ ಸದಸ್ಯರ ಹೊಣೆಗಾರಿಕೆಗೆ ಪೂರಕವಾಗಿ ಶ್ರಮಿಸುತ್ತೇನೆ. ಈಗಾಗಲೇ ಜಿಲ್ಲೆಯ ಗ್ರಾಮೀಣ ಭಾಗಗಳ ಮೂಲೆ ಮೂಲೆಗೂ ತಿರುಗಾಡಿ ಬಂದವನು ಅದ್ದರಿಂದ ಹಳ್ಳಿಯ ಪರಿಚಯ ನನಗಿರುವುದರಿಂದ ಅಲ್ಲಿಯ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಕಳೆದ 27 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಇದ್ದುಕೊಂಡು ಪ್ರತೀ ಗ್ರಾಮ ಗಳನ್ನು ಭೇಟಿ‌ಮಾಡಿರುವುದರಿಂದ ಎಲ್ಲಾ ಹಳ್ಳಿಯ ಸಮಸ್ಯೆಗಳ ಬಗ್ಗೆ ಅರಿತಿದ್ದೇನೆ. ಅದ್ದರಿಂದ ಅಭಿವೃದ್ಧಿ ಪರ ಚಿಂತನೆಯಲ್ಲಿ ಇರುವ ನಾನು ಪಕ್ಷಾತೀತನಾಗಿ ಎಲ್ಲ ಸದಸ್ಯರನ್ನು ಸಮನಾಗಿ ಕಾಣುತ್ತೇನೆ ಅದ್ದರಿಂದ ಎಲ್ಲರೂ ಮತವನ್ನು ನೀಡಬೇಕಾಗಿ ಈ ಮೂಲಕ ವಿನಂತಿ ಮಾಡಿಕೊಳ್ಳುತಿದ್ದೇನೆ ಎಂದರು. ಈ ಸಂದರ್ಭದಲ್ಲಿ  ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಶಶಿಕುಮಾರ ರೈ, ಐಕಳ ದೇವಿಪ್ರಸಾದ್ ಶೆಟ್ಟಿ, ನಿರಂಜನ ಬಾವಂತ ಬೆಟ್ಟು, ಮಡಂತ್ಯಾರು ಪ್ಯಾಕ್ಸ್ ಅಧ್ಯಕ್ಷ ಅರವಿಂದ, ಉಜಿರೆ ಪ್ಯಾಕ್ಸ್ ಅಧ್ಯಕ್ಷ ಈ. ಸುಂದರ ಗೌಡ, ಬಾಹುಬಲಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾದ ಶಮಂತ ಕುಮಾರ್ ಜೈನ್,ಕುಮಾರ್ ನಾಥ್,ಉಷಾಲತಾ, ವೃಷಭ ಆರಿಗ ಮತ್ತಿತರರು ಉಪಸ್ಥಿತರಿದ್ದರು.

error: Content is protected !!