ಬೆಸ್ಟ್ ಫೌಂಡೇಶನ್ ವತಿಯಿಂದ ಸ್ವ ಉದ್ಯೋಗ ಪ್ರೇರಣೆಗಾಗಿ ಉಚಿತ ರಬ್ಬರ್ ಟ್ಯಾಪಿಂಗ್ ತರಬೇತಿ

 

 

ಬೆಳ್ತಂಗಡಿ; ಈಗಾಗಲೇ ‘ಸೇವೆ-ಸಾಮರಸ್ಯ-ಸಂಘಟನೆ’ ಎಂಬ ಧ್ಯೇಯದಡಿ ಬಹುವಿಧ ಸೇವಾ ಚಟುವಟಿಕೆಗಳ ಮೂಲಕ ಮನೆಮಾತಾಗಿರುವ ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ವತಿಯಿಂದ ಯುವಜನತೆಯಲ್ಲಿ ಸ್ವ ಉದ್ಯೋಗ ಪ್ರೇರಣೆಗಾಗಿ ಆಸಕ್ತರಿಗೆ ಉಚಿತ ರಬ್ಬರ್ ಟ್ಯಾಪಿಂಗ್ ತರಬೇತಿ ಶಿಬಿರ ಹಮ್ಮಿಕೊಳ್ಳಲು ತೀರ್ಮಾನಿಸಿದ್ದು ಆಸಕ್ತರು ನೊಂದಾಯಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಬ್ಬರ್ ಮಂಡಳಿಯ ಸಹಕಾರದೊಂದಿಗೆ ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದೊಂದಿಗೆ ಈ ತರಬೇತಿ ನಡೆಯಲಿದೆ. ತರಬೇತಿ ಶಿಬಿರ ಸೇರ ಬಯಸುವವರು 7204978230 ನಂಬರ್ ಕರೆ ಅಥವಾ ವಾಟ್ಸ್ ಆಪ್ ಮೂಲಕ ವಿವರವನ್ನು ನೀಡುವಂತೆ ಕೋರಲಾಗಿದೆ. ಸಧ್ಯಕ್ಕೆ ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಬೆಸ್ಟ್ ಫೌಂಡೇಶನ್ ಅಧ್ಯಕ್ಷ, ಹೈಕೋರ್ಟ್ ನ್ಯಾಯವಾದಿ ರಕ್ಷಿತ್ ಶಿವರಾಂ ತಿಳಿಸಿದ್ದಾರೆ.

error: Content is protected !!