ಬೆಂಗಳೂರು: ಕೊರೊನಾ ಮೂರನೇ ಅಲೆ ವಿಶ್ವದ ಕೆಲ ದೇಶಗಳಲ್ಲಿ ಮತ್ತೆ ಆರಂಭವಾಗಿದ್ದು, ಜರ್ಮನಿಯಲ್ಲಿ ಒಂದೇ ದಿನ 50 ಸಾವಿರಕ್ಕೂ ಅಧಿಕ ಪಾಸಿಟಿವ್ ಪ್ರಕರಣ ಪತ್ತೆಯಾಗಿ ಆತಂಕ ಮೂಡಿಸಿದೆ.
ಜರ್ಮನಿಯಲ್ಲಿ ಒಂದೇ ದಿನ 50 ಸಾವಿರ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 235 ಮಂದಿ ಮೃತಪಟ್ಟಿರುವ ಕುರಿತು ಜರ್ಮನಿಯ ಸ್ಥಳೀಯ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನವೆಂಬರ್ ತಿಂಗಳಾರಂಭದ ಬಳಿಕ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಹಾಗೂ ಸಾವನ್ನಪ್ಪುತ್ತಿರುವವರ ಪ್ರಮಾಣವೂ ಹೆಚ್ಚಾಗಿದೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ.
ಜರ್ಮನಿಯಲ್ಲಿ ಇಲ್ಲಿಯವರೆಗೆ ಒಟ್ಟು 4.9 ಮಿಲಿಯನ್ ಜನರಿಗೆ ಸೋಂಕು ದೃಢಪಟ್ಟಿದ್ದು 97,198 ಜನರು ಸಾವನ್ನಪ್ಪಿದ್ದಾರೆ.
ಚೀನಾದಲ್ಲಿ ಮಾಲ್ಗಳು ಬಂದ್
!: ಚೀನಾದಲ್ಲಿ ಮತ್ತೆ ದಿಢೀರ್ ಕೊರೋನಾ ಸ್ಪೋಟಗೊಂಡಿದ್ದು, ಬೀಜಿಂಗ್ ವ್ಯಾಪ್ತಿಯಲ್ಲಿ ಶಾಪಿಂಗ್ ಮಾಲ್ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಅದೇ ರೀತಿ ವಸತಿ ಪ್ರದೇಶಗಳಿಂದ ಜನರು ಹೊರಬರದಂತೆ ನಿರ್ಬಂಧ ಹೇರಲಾಗಿದೆ.