ಹಳ್ಳಕ್ಕೆ ಉರುಳಿದ ಟೆಂಪೋ, ಸವಾರರು ಪ್ರಾಣಾಪಾಯದಿಂದ ಪಾರು: ಕಿರಿದಾದ ಸೇತುವೆಯಿಂದ ದುರ್ಘಟನೆ

 

 

ಬೆಳ್ತಂಗಡಿ: ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಪ್ಪದಗಂಡಿ-ಕೆದಿಹಿತ್ಲು ಎಂಬಲ್ಲಿ ಕಲ್ಲು ಸಾಗಾಟ ನಡೆಸುತ್ತಿದ್ದ ಟೆಂಪೋ ಹಳ್ಳಕ್ಕೆ ಉರುಳಿಬಿದ್ದ ಘಟನೆ ಗುರುವಾರ ನಡೆದಿದೆ.
ಮುಂಡಾಜೆ-ಕಲ್ಮಂಜದ ಬಳಿ ಧರ್ಮಸ್ಥಳಕ್ಕೆ ಹತ್ತಿರದ ಸಂಪರ್ಕ ಕಲ್ಪಿಸುವ ಸತ್ಯನ ಫಲ್ಕೆಯ ರಸ್ತೆ ಇಕ್ಕಟ್ಟಾಗಿರುವ ಕಿರು ಸೇತುವೆಯಲ್ಲಿ ವಿರುದ್ಧ ದಿಕ್ಕಿನಿಂದ ಬಂದ ವಾಹನಕ್ಕೆ ಸಂಚಾರಕ್ಕೆ ಅವಕಾಶ ನೀಡಲು ಟೆಂಪೋವನ್ನು ಚಾಲಕ ಬದಿಗೆ ಕೊಂಡೊಯ್ದಿದ್ದು, ಸುರಕ್ಷತಾ ಪಟ್ಟಿ ಇಲ್ಲದ ಕಿರು ಸೇತುವೆಯಿಂದ ಸುಮಾರು 8 ಅಡಿ ಆಳದ ಹಳ್ಳಕ್ಕೆ ಉರುಳಿ ಬಿದ್ದು ಸಂಪೂರ್ಣ ನಜ್ಜುಗುಜ್ಜಾಗಿದೆ. ವಾಹನದಲ್ಲಿದ್ದರು ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ.

ಈ ರಸ್ತೆಯನ್ನು 7 ವರ್ಷಗಳ ಹಿಂದೆ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ 6 ಕಿರುಸೇತುವೆಗಳು ಮಾತ್ರ ಕಿರಿದಾಗಿದ್ದು, ಚಾಲಕರಲ್ಲಿ ಗೊಂದಲ ಮೂಡಿಸುತ್ತಿದೆ.

error: Content is protected !!