ರಾಷ್ಟ್ರಮಟ್ಟದಲ್ಲಿ ಸಾಧನೆ ತೋರಿದ ಕ್ರೀಡಾಪಟುಗಳಿಗೆ‌ ಅದ್ಧೂರಿ ‌ಸ್ವಾಗತ: ತೆರೆದ ವಾಹನದಲ್ಲಿ ಮೆರವಣಿಗೆ, ಇನ್ನಷ್ಟು ಸಾಧನೆ ಮಾಡುವಂತೆ ಹಾರೈಕೆ

 

 

ಬಂದಾರು: ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿ ತವರೂರಿಗೆ ಆಗಮಿಸಿದ ಕ್ರೀಡಾಪಟುಗಳಿಗೆ ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತ ನೀಡಲಾಯಿತು.
ಹರಿಯಾಣದಲ್ಲಿ ನಡೆದ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದ ಸೀನಿಯರ್ ವಿಭಾಗದಲ್ಲಿ ಭರತೇಶ್ ಗೌಡ ಮೈರೋಳ್ತಡ್ಕ, ದ್ವೀತಿಯ ಸ್ಥಾನ ಪಡೆದ ಆಶಿಕಾ ಮುಗೇರಡ್ಕ,ಮೊಗ್ರು ಹಾಗೂ ಸಬ್ ಜ್ಯೂನಿಯರ್ ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದ ಅಭಿಶ್ರುತ್ ಮುರ,‌ಮೊಗ್ರು.‌ ಸುಜಿತ್ ಶ್ರೀರಾಮನಗರ,ಬಂದಾರು ಅವರನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.

 

 

ಎಲ್ಲರೂ ಅತ್ಯುತ್ತಮ ಪ್ರದರ್ಶನ ನೀಡಿ ತವರೂರಿಗೆ ಆಗಮಿಸಿದ್ದು, ಜನಪ್ರತಿನಿಧಿಗಳು, ಗಣ್ಯರು, ಹಿರಿಯರು, ಕ್ರೀಡಾಭಿಮಾನಿಗಳು ಹಾಗೂ ಗ್ರಾಮಸ್ಥರು ನಾಸಿಕ್ ಬ್ಯಾಂಡ್, ಸಿಡಿಮದ್ದು ಸಿಡಿಸಿ, ಪದ್ಮುಂಜ, ಮೈರೋಳ್ತಡ್ಕ, ಮುರ, ಮುಗೇರಡ್ಕ, ಬಂದಾರುವರೆಗೆ ಮೆರವಣಿಗೆ ಮೂಲಕ ಕರೆತಂದರು. ಬಳಿಕ ವಿಜೇತರಿಗೆ ಬಂದಾರು, ಮೊಗ್ರು ನಾಗರಿಕರು ಅಭಿನಂದನೆ ಸಲ್ಲಿಸಿ, ಇನ್ನಷ್ಟು ಸಾಧನೆ ಮಾಡುವಂತೆ‌ ಹಾರೈಸಿದರು.‌

error: Content is protected !!