ಜೀವನದಲ್ಲಿ ಸಾರ್ಥಕತೆ ಪಡೆಯಬೇಕಾದರೆ ಶಿಕ್ಷಣದ ಜೊತೆ ಶಿಸ್ತು ಅಳವಡಿಸಿಕೊಳ್ಳಬೇಕು : ಹರೀಶ್ ಕುಮಾರ್ , ಶ್ರೀ ಗುರುದೇವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ.

 

 

ಬೆಳ್ತಂಗಡಿ: ‘ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ, ಬಡವರಿಗೆ ಉತ್ತಮ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಪ್ರಾರಂಭವಾದ ಶ್ರೀ ಗುರುದೇವ ಶಿಕ್ಷಣ ಸಂಸ್ಥೆ ವಸಂತ ಬಂಗೇರರ ಕನಸಿನ ಕೂಸು’ ಎಂದು ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಹೇಳಿದರು.
ಅವರು ಇಲ್ಲಿನ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ 2021-22 ನೇ ಸಾಲಿನ ವಿಧ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದರು.

 

 

ಶಿಕ್ಷಣ‌ ಸಂಸ್ಥೆ ಪ್ರಾರಂಭಿಸುವುದು ಸುಲಭ. ಆದರೆ ಅದನ್ನು ಸರಿಯಾಗಿ ನೋಡಿಕೊಂಡು ಹೊಗುವುದು ಕಷ್ಟ, ಅದನ್ನು ವಸಂತ ಬಂಗೇರ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸೂರ್ಯ – ಚಂದ್ರ ಇರುವವರೆಗೂ ಈ‌ ಸಂಸ್ಥೆಯ ಶಿಕ್ಷಣ ಆಕಾಶದರತ್ತರಕ್ಕೆ ಬೆಳೆಯಲಿದೆ. ವಸಂತ ಬಂಗೇರ ಅವರು ಶಿಕ್ಷಣ ತಜ್ಞ ಅಲ್ಲ ಶಿಕ್ಷಣ ಪ್ರೇಮಿ. ಹಿಂದುಳಿದ ವಿದ್ಯಾರ್ಥಿಗಳು ಶಿಕ್ಷಣ ಕಲಿಯಬೇಕು ಅನ್ನುವ ಆಸೆ ಅವರದು. ಇಲ್ಲಿ ಉಳಿಯಲು ಕಷ್ಟವಾಗುವ ವಿದ್ಯಾರ್ಥಿಗಳಿಗೆ ತನ್ನ ಸ್ವಂತ ಖರ್ಚಿನಿಂದ ಹಾಸ್ಟೆಲ್ ನೀಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ ವಾಕ್ಯದಂತೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಧೃಡ ಸಮಾಜ ನಿರ್ಮಾಣವಾಗಬೇಕು ಎಂಬ ಸಂದೇಶವನ್ನು ಈಡೇರಿಸಲು ಪ್ರಯತ್ನ ಪಡುತ್ತಿದ್ದಾರೆ. ಬಡವರ ಮಕ್ಕಳು ಶಿಕ್ಷಣ ಪಡೆಯಲು ಕಷ್ಟ ಪಡುವುದನ್ನು ನಾವು ನೋಡಿದ್ದೇವೆ. ತೀರ ಬಡ ಕುಟುಂಬದ ವ್ಯಕ್ತಿ ಶಿಕ್ಷಣ ಪಡೆಯಬೇಕೆಂದು ಆಸೆ ಇಟ್ಟು ಬೆಳೆದವರು ಅಂಬೇಡ್ಕರ್. ದೇಶಕ್ಕೆ ಸಂವಿಧಾನ‌ ಕೊಟ್ಟು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದ್ದರು. ಇವರು ಶಿಕ್ಷಣ ಮತ್ತು ಸಮಾಜ ಸೇವೆಗೆ ಹಿಂಜರಿಯುತಿರಲಿಲ್ಲ. ಅಬ್ದುಲ್ ಕಲಾಂ ಮನೆ ಮನೆಗೆ ಪೇಪರ್ ಹಾಕಿ ಶಿಕ್ಷಣ ಪಡೆದವರು ಹಾಗೆ ವಿದ್ಯಾರ್ಥಿಗಳು ಕೂಡ ಕಷ್ಟ ಪಟ್ಟು ಕಲಿತು ಅವರಂತೆ ಸಾಧಕರಾಗಬೇಕು. ಜೀವನದಲ್ಲಿ ನಿಜವಾದ ಸಾರ್ಥಕತೆ ಪಡೆಯಬೇಕಾದರೆ ಶಿಕ್ಷಣದ ಜೊತೆಗೆ ಶಿಸ್ತನ್ನು ಬೆಳಸಬೇಕು. ಹಣ ಖರ್ಚಾಗಿ ಹೋಗಬಹುದು. ಆದರೆ ಜ್ಞಾನ ಸಂಪತ್ತು ಯಾವ ಕಾಲಕ್ಕೂ ಖರ್ಚಾಗುವುದಿಲ್ಲ ಎಂದರು.

 

 

ಶಾಲೆ ಉದ್ದಾರವಾಗಬೇಕಾದರೆ ಅಲ್ಲಿನ‌ ವಿಧ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿಯ ಸಹಕಾರ ಅಗತ್ಯ. ಮಕ್ಕಳಿಗೆ ‌ಮತ್ತು ಶಿಕ್ಷಕರಿಗೆ ಅವಿನಾಭಾವ ಸಂಬಂಧ ಇದೆ. ಮಕ್ಕಳು ಶಿಸ್ತಿನ‌ ಸಿಪಾಯಿಗಳಾಗಿದ್ದರೆ ಶಿಕ್ಷಕರಿಗೆ ಅದೇ ವಿದ್ಯಾರ್ಥಿಗಳು ನೀಡುವ ಕೊಡುಗೆ. ವಿದ್ಯಾರ್ಥಿ ಜೀವನ‌ ಸುಂದರವಾದ ದಿನಗಳು. ಈ‌ ಸಂಸ್ಥೆ‌ಯಿಂದ ನೈತಿಕ‌ ಶಿಕ್ಷಣ ದೊಂದಿಗೆ ಬಡವರಿಗೆ ಶಿಕ್ಷಣ ನೀಡುವ‌ ಕೆಲಸ ಆಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ವಸಂತ ಬಂಗೇರ ಮಾತನಾಡಿ, ವಿದ್ಯಾರ್ಥಿಗಳು ಅಬ್ದಲ್‌ ಕಲಾಂ, ಅಂಬೇಡ್ಕರ್ ರವರ ಹಾದಿಯಲ್ಲಿ ನಡೆಯಬೇಕು. ನಮ್ಮಲ್ಲಿ ಚುನಾವಣೆ ಇಲ್ಲ‌ , 2006 ರಲ್ಲಿ ಈ ಸಂಸ್ಥೆ ಪ್ರಾರಂಭವಾಗಿದೆ. ಪ್ರಾಂಶುಪಾಲರು, ಆಡಳಿತ ಮಂಡಳಿ ಸೇರಿ‌ ವಿದ್ಯಾರ್ಥಿ ಪಧಾದಿಕಾರಿಗಳನ್ನು ಆಯ್ಕೆ ಮಾಡಿಕೊಂಡು ಬಂದಿದ್ದಾರೆ. ಯಾವುದೇ ಸಂದರ್ಭದಲ್ಲಿ ಕಾಲೇಜಿನ‌ ಗೌರವ ಕೆಡಬಾರದು. ಕಾಲೇಜಿನ ಇತರ ವಿದ್ಯಾರ್ಥಿಗಳನ್ನು ಸರಿಯಾದ ದಾರಿಯಲ್ಲಿ ಹೋಗುವಂತೆ ಒಗ್ಗಟ್ಟಿನಿಂದ ಇರುವಂತೆ ವಿದ್ಯಾರ್ಥಿ ಪ್ರತಿನಿಧಿಗಳು ಮಾಡಬೇಕು. ಗಲಾಟೆ ಇನ್ನಿತರ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಮಾಧಾನ‌ ಮಾಡುವಂತ ಗುಣ ಈ‌ ವಿಧ್ಯಾರ್ಥಿ ಸಂಘದ ಮೂಲಕ ಮಾಡಬೇಕು. ಕಳೆದ 16 ವರ್ಷಗಳಿಂದ ವಿದ್ಯಾರ್ಥಿಗಳು ಉತ್ತಮ ಮಾರ್ಗವನ್ನು ಅನುಸರಿಸಿಕೊಂಡು ಹೋಗಿದ್ದಾರೆ.  ಬಡವರಿಗೆ ಶಿಕ್ಷಣ ಸಿಗಬೇಕೆಂದು ಎನ್ನುವ ಉದ್ದೇಶದಿಂದ ಈ ಶಿಕ್ಷಣ ಸಂಸ್ಥೆ ಪ್ರಾರಂಭಿಸಲಾಗಿದೆ. ನಮ್ಮ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಹೊರ ಜಿಲ್ಲೆ, ಹೊರ ತಾಲೂಕು, ಬಡತನ ಕುಟುಂಬದಿಂದ ಬಂದವರಿಗೆ ಕಾಲೇಜು ಶುಲ್ಕದಲ್ಲಿ ರಿಯಾಯಿತಿ ನೀಡಿದ್ದೇವೆ ಎಂದರು.

 

 

ಎಲ್ಲರಲ್ಲೂ ಕೂಡ ನಾಯಕತ್ವದ ಗುಣ ಇದೆ‌. ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ಇಲ್ಲಿನ ಶಿಕ್ಷಕ ವೃಂದ ವರ್ಷ ವರ್ಷ ಉತ್ತಮ‌ ವಿದ್ಯಾರ್ಥಿಗಳನ್ನು ಇಲ್ಲಿ ಬೆಳೆಸುತ್ತಿದ್ದಾರೆ. ಗೌರವದಿಂದ ಈ‌ ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ. ಸಂಸ್ಥೆಯ ಹಿತದೃಷ್ಟಿಯಿಂದ ಇಲ್ಲಿನ‌ ಎಲ್ಲಾ ಶಿಕ್ಷಕರು ದುಡಿಯಬೇಕೆಂದು ಶಿಕ್ಷಕರಲ್ಲಿ ಕೇಳಿಕೊಂಡರು.

ಸಂಸ್ಥೆಯ ಉಪಾದ್ಯಕ್ಷ ಪದ್ಮನಾಭ ಮಾಣಿಂಜ ಪ್ರತಿಜ್ಞಾವಿಧಿ ಭೋದನೆ ಮಾಡಿ ಮಾತನಾಡಿ, ‘ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಯಲ್ಲಿ ಇನ್ನಿತರ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಬೇಕಿದೆ. ಈ ಪ್ರತಿಜ್ಞೆಯನ್ನು ಸಕಾರ ಮಾಡಬೇಕು. ಸೌಹಾರ್ದ ಮನೋಭಾವವದಿಂದ ಕಾಲೇಜಿನಲ್ಲಿ ಇರಬೇಕು. ಶಿಕ್ಷಕರಿಗೆ ಆಡಳಿತ ಮಂಡಳಿಗೆ ಗೌರವ ಕೊಡಬೇಕು. ವಿದ್ಯಾರ್ಥಿಗಳು ಒಳ್ಳೆಯದನ್ನು ಮಾತ್ರ ಮನಸ್ಸಿನಲ್ಲಿ ಇಡಬೇಕು. ಜೀವನದಲ್ಲಿ ವಿದ್ಯಾಬ್ಯಾಸ ಜೊತೆಗೆ‌ ಕಾಲೇಜಿಗೆ ಒಳ್ಳೆಯ ಹೆಸರನ್ನು ತರಬೇಕು ಎಂದರು.

ಮುಖ್ಯ ಅತಿಥಿ ಎ.ಪಿ.ಎಂ.ಸಿ ಅದ್ಯಕ್ಷರಾದ ಚಿದಾನಂದ ಪೂಜಾರಿ, ವಿದ್ಯಾರ್ಥಿ ಸಂಘ ನಮ್ಮಲ್ಲಿ ನಾಯಕತ್ವ ಗುಣ ಬೆಳೆಸುತ್ತದೆ. ಇದು ಸಮಾಜದಲ್ಲಿ ಮುಂದೆ ವಿದ್ಯಾರ್ಥಿಗಳಿಗೆ ಹೆಸರು ಕೊಡುತ್ತದೆ . ಕಲಿತ ಶಾಲೆ‌‌ ಮತ್ತು ತಂದೆ ತಾಯಿಗಳಿಗೆ ಗೌರವ ನೀಡಬೇಕು. ವಿದ್ಯಾರ್ಥಿಗಳು ಪತ್ರಿಕೆ ಓದಬೇಕು. ನಾವು‌ ಕಾಲೇಜಿಗೆ ಹೋಗುವಾಗ ಕಷ್ಟ ಕಾಲವಿತ್ತು. ಆದರೆ ಈಗ ಅಂತಹ ಕಷ್ಟ ಇಲ್ಲ. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಈ ಸಂಸ್ಥೆಗೆ ಉತ್ತಮ‌ ಹೆಸರು ತರಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ ಸ್ವಾಗತಿಸಿ, ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಲತಾ ವಂದಿಸಿದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!