ಥ್ರೋಬಾಲ್ ಕರ್ನಾಟಕ ತಂಡದಲ್ಲಿ ಬೆಳ್ತಂಗಡಿಯ ಭರತೇಶ್ ಗೌಡ: ಹರಿಯಾಣ ವಿ.ವಿ.ಯಲ್ಲಿ ಅ.29ರಿಂದ ನಡೆಯಲಿರುವ ರಾಷ್ಟ್ರಮಟ್ಟದ ಕೂಟ

 

ಬೆಳ್ತಂಗಡಿ: ಅ.29 ರಿಂದ 31ರವರೆಗೆ ಹರಿಯಾಣ ವಿಶ್ವವಿದ್ಯಾಲಯದಲ್ಲಿ‌ ನಡೆಯಲಿರುವ ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಬೆಳ್ತಂಗಡಿ ತಾಲೂಕು ಬಂದಾರು, ಮೈರೋಳ್ತಡ್ಕದ ಪ್ರತಿಭೆ ಭರತೇಶ್ ಗೌಡ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
ವಿವೇಕಾನಂದ ಕಾಲೇಜಿನಲ್ಲಿ ಅಂತಿಮ‌ ವರ್ಷದ ಬಿ.ಕಾಂ ಪದವಿ ವಿದ್ಯಾರ್ಥಿಯಾಗಿರುವ ಭರತೇಶ್ ಭರತೇಶ್ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ‌.
ಬಂದಾರು ಗ್ರಾಮದ ಮೈರೋಳ್ತಡ್ಕ, ನೆಲ್ಲಿದಖಂಡದ ಬೊಮ್ಮಣ್ಣ ಗೌಡ ಮತ್ತು ಚೆಲುವಮ್ಮ ದಂಪತಿಗಳ ಪುತ್ರರಾಗಿರುವ ಭರತೇಶ್ ವಾಣಿ ಪಿ,ಯು‌ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಕಾಲೇಜು ದಿನಗಳಲ್ಲೇ ಉತ್ತಮ ಪ್ರದರ್ಶನದೊಂದಿಗೆ ಗಮನ‌ಸೆಳೆಯುವ ಜೊತೆಗೆ ರಾಷ್ಟಮಟ್ಟದ ತಂಡಕ್ಕೂ ಆಯ್ಕೆಯಾಗಿ ಭರವಸೆ ಮೂಡಿಸಿದ್ದರು. ಇದೀಗ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದು, ಉತ್ತಮ ಪ್ರದರ್ಶನದೊಂದಿಗೆ ಸಾಧನೆ‌ ಮಾಡಲಿ, ರಾಷ್ಟ್ರೀಯ ತಂಡದಲ್ಲೂ ಅವಕಾಶ ಪಡೆಯುವಂತಾಗಲಿ ಎಂಬುದು ‘ಪ್ರಜಾಪ್ರಕಾಶ ನ್ಯೂಸ್’ ತಂಡದ ಹಾರೈಕೆ.

error: Content is protected !!