ಮಡಂತ್ಯಾರ್ ಸುತ್ತಮುತ್ತ ಭಾರೀ ಗಾಳಿಗೆ ಹಾರಿಹೋದ ಮನೆಗಳ ಮೇಲ್ಚಾವಣಿ , ಧರೆಗುರುಳಿದ ಅಡಿಕೆ ಮರಗಳು.

 

 

 

 

ಮಡಂತ್ಯಾರ್: ಏಕಾಏಕಿ ಬಿರುಗಾಳಿ ರೂಪದ ಭಾರೀ ಗಾಳಿಗೆ ಪಾಂಡವರ ಕಲ್ಲು, ಕೊಮ್ಮಿನಡ್ಕ, ಮಾಡಾ, ಕಜೆಕ್ಕಾರು ಸುತ್ತಮುತ್ತ ಹಲವಾರು ಮನೆಗಳ ಮೇಲ್ಚಾವಣಿ ಹಾರಿ ಹೋಗಿದ್ದು   ಸಿಮೆಂಟ್ ಶೀಟ್ ಗಳೆಲ್ಲ ಗಾಳಿಗೆ ಹಾರಿ ಹೋಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ   ‌ಅನೇಕ ಕೃಷಿಕರ ತೋಟದ  ಅಡಿಕೆ ಮರಗಳು ಮುರಿದು ಬಿದ್ದು ಅಪಾರ ಪ್ರಮಾಣದ ಕೃಷಿ ನಾಶವಾಗಿದೆ ಕೆಲವೆಡೆ ಮರಗಳು ಉರಳಿಬಿದ್ದಿದ್ದು ವಿದ್ಯುತ್ ಕಂಬಗಳು ಧರೆಗುರುಳಿದೆ. ಸಂಜೆ ಹೊತ್ತಿನಲ್ಲಿ ಏಕಾಏಕಿ ಬಿರುಗಾಳಿ ರೂಪದಲ್ಲಿ ಬೀಸಿದ ಗಾಳಿ ಕೃಷಿಕರನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಹಾನಿಗೊಳಗಾದ ಕೃಷಿ ಹಾಗೂ ನಷ್ಟದ. ಬಗ್ಗೆ ಹೆಚ್ಚಿನ  ಮಾಹಿತಿ ಇನ್ನಷ್ಟೆ ತಿಳಿದುಬರಬೇಕಾಗಿದೆ.

 

 

 

 

 

 

 

 

 

 

error: Content is protected !!