“ಜೈ ಶ್ರೀ ರಾಮ್, ಜೈ ಹನುಮಾನ್ ಎಂದು ಅಧಿಕಾರಕ್ಕೆ ಬಂದು, ದೇವರುಗಳಿಗೆ ದಿಕ್ಕಿಲ್ಲದಂತೆ ಮಾಡಿದ್ದಾರೆ”: “ದೇವಸ್ಥಾನ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಇಂದು ದೇವಸ್ಥಾನ ನಾಶ ಮಾಡಲು ಹೊರಟಿದ್ದಾರೆ”: “ಲೂಟಿ ಆದ ಬಳಿಕ ಕೋಟೆ ಬಾಗಿಲು ಮುಚ್ಚಿದರು ಎಂಬಂತೆ ದೇಗುಲ ಒಡೆದು, ದೇಗುಲ ಧ್ವಂಸ ನಿಷೇಧ ಬಿಲ್ ಪಾಸ್ ಮಾಡಿದ್ದಾರೆ”: “ಮಂಗನಿಗೆ ಹೆಂಡ ಕುಡಿಸಿದಂತಾಗಿದೆ ಬಿ.ಜೆ.ಪಿ. ಪರಿಸ್ಥಿತಿ!”: ಪ್ರತಿಭಟನಾ ಜಾಥಾದಲ್ಲಿ ಬಿಜೆಪಿ ವಿರುದ್ಧ ಮಾಜಿ ಸಚಿವ ಗಂಗಾಧರ ಗೌಡ ಟೀಕಾ ಪ್ರಹಾರ: ಮಾಜಿ‌ ಶಾಸಕ ವಸಂತ ಬಂಗೇರರಿಂದಲೂ ಬಿಜೆಪಿ ವಿರುದ್ಧ ವಾಗ್ದಾಳಿ

 

ಬೆಳ್ತಂಗಡಿ: ದೇವಸ್ಥಾನ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಇಂದು ದೇವಸ್ಥಾನ ನಾಶ ಮಾಡಲು ಹೊರಟಿದ್ದಾರೆ. ಇದು ವಿಚಿತ್ರವಾದ ಸನ್ನಿವೇಶ. ಇಲ್ಲಿಯ ತನಕ ಪ್ರತಿ ದೇವಸ್ಥಾನ ಅಭಿವೃದ್ಧಿ ಪಡಿಸಿರುವ ಚರಿತ್ರೆ ಇರುವುದು ಕಾಂಗ್ರೆಸ್ ‌ಪಕ್ಷಕ್ಕೆ. ಹತ್ತಕ್ಕಿಂತಲೂ ಹೆಚ್ಚು ದೇವಸ್ಥಾನಗಳ ಅಭಿವೃದ್ಧಿಗೆ ಕೊಡುಗೆ ಮುಜರಾಯಿ ಇಲಾಖೆ ಮೂಲಕ ಕಾಂಗ್ರೆಸ್ ನೀಡಿದೆ. ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆರಾಧನಾ ಎಂಬ ಕಾರ್ಯಕ್ರಮ ಜಾರಿಗೆ ತಂದು ಪಂಜುರ್ಲಿ, ಗುಳಿಗ‌ ಮೊದಲಾದ ದೈವ ದೇವಸ್ಥಾನಗಳ ಅಭಿವೃದ್ಧಿ ಪಡಿಸಿದ್ದ ಚರಿತ್ರೆ ಕೂಡ ಕಾಂಗ್ರೆಸ್‌ ಪಕ್ಷದ್ದು ಎಂದು ಮಾಜಿ ಸಚಿವ ಗಂಗಾಧರ ಗೌಡ ಹೇಳಿದರು.

 

 

ಮಂಗನಿಗೆ ಮದ್ಯ ಕುಡಿಸಿದಂತಾಗಿದೆ ಬಿ.ಜೆ.ಪಿ. ಪರಿಸ್ಥಿತಿ. ಅಷ್ಟೇ ಅಲ್ಲ, ಮಂಗನಿಗೆ ಮದ್ಯ ಕುಡಿಸಿ ಅದರ ಇನ್ನೊಂದು ಕೈಗೆ ಬ್ಲೇಡ್ ನೀಡಿದರೆ ಏನಾಗುತ್ತದೆ..? ತನ್ನ ಹತ್ತಿರವಿರುವ ಎಲ್ಲರಿಗೂ ಪರಚಿ ತನ್ನನ್ನು ತಾನು ಪರಚಿಕೊಳ್ಳುತ್ತದೆ. ಅದೇ ಪರಿಸ್ಥಿತಿ ಈಗ ಬಿ.ಜೆ.ಪಿ.ಯದ್ದಾಗಿದೆ. ಜೈ ಶ್ರೀ ರಾಮ್, ಜೈ ಹನುಮಾನ್ ಎಂದು ಅಧಿಕಾರಕ್ಕೆ ಬಂದವರು ಈಗ ಅದೇ ದೇವರುಗಳಿಗೆ ದಿಕ್ಕಿಲ್ಲದಂತೆ ಮಾಡಿದ್ದಾರೆ. ಇಂತಹ ಬೆಳವಣಿಗೆ ಊಹಿಸಿರಲಿಲ್ಲ. ಎಲ್ಲಾ ಲೂಟಿ ಆದ ನಂತರ ಕೋಟೆ ಬಾಗಿಲು ಮುಚ್ಚಿದರು ಎನ್ನುವ ಗಾದೆ ಮಾತಿನ‌ ಹಾಗೆ ಇನ್ನು ಮುಂದಕ್ಕೆ ದೇವಸ್ಥಾನ‌‌‌ ದ್ವಂಸ ನಿಷೇಧ ಬಿಲ್ಲನ್ನು ಅಧಿವೇಶನದಲ್ಲಿ ಪಾಸ್ ಮಾಡಿದ್ದಾರೆ ಎಂದು ಬಿ.ಜೆ.ಪಿ. ನಡೆಯನ್ನು ಟೀಕಿಸಿದರು.

 

ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಎದುರಾಗಿದೆ: ವಸಂತ ಬಂಗೇರ.

ಮಾಜಿ ಶಾಸಕ ವಸಂತ ಬಂಗೇರ ಮಾತನಾಡಿ, ಪ್ರತಿಭಟನೆ ಮಾಡಬಾರದು, ಮೈಕ್ ಉಪಯೋಗ ಮಾಡುವಂತಿಲ್ಲ. ನಾವು‌ ಮಾತಾಡುವುದು ಜಾಸ್ತಿ ದೂರಕ್ಕೆ ಕೇಳುವಂತೆ ಸರ್ಕಾರ ಮಾಡಿದೆ‌. ಕರ್ನಾಟಕ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಎದುರಾಗಿದೆ. ಈಗ ದೇವಸ್ಥಾನ ಒಡೆದು ಹಾಕುತ್ತಿದ್ದಾರೆ. ಅದರೆ ಅದಕ್ಕೆ ಕಾರಣೀಕರ್ತರನ್ನಾಗಿ ಅಧಿಕಾರಿಗಳನ್ನು ಮಾಡಿ ತಪ್ಪಿಸಿಕೊಳ್ಳುವ ಪ್ರಯತ್ನ‌ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸುಮಾರು 15 ವರ್ಷಗಳ ಹಿಂದೆ ಲಾಯಿಲಾ ವೆಂಕಟರಮಣ ದೇವಸ್ಥಾನದ ಬಳಿ ಇದ್ದ ಅಶ್ವತ್ಥ ಕಟ್ಟೆಯನ್ನು ರೋಡ್ ಮಾರ್ಜಿನ್ ನೆಪವೊಡ್ಡಿ ಪ್ರತಾಪ್ ಸಿಂಹ ನಾಯಕ್ ಒಡೆಯಲು ಹೋಗಿದ್ದರು. ಆದರೆ ನಾನು ಬಿಟ್ಟಿರಲಿಲ್ಲ ಈಗ ಅದೇ ಅಶ್ವತ್ಥ ಮರ ಬಹಳ ಎತ್ತರಕ್ಕೆ ಬೆಳೆದು ನಿಂತಿದೆ. ಆ ಸಮಯದಲ್ಲಿ ಪ್ರತಾಪ ಸಿಂಹರು ಅಧಿಕಾರದಲ್ಲಿರಲಿಲ್ಲ. ಆದರೆ ಈಗ ಅಧಿಕಾರದಲ್ಲಿದ್ದಾರೆ‌ ಆದರೂ ಈಗ ದೇವಸ್ಥಾನ ಒಡೆಯುತ್ತಿದ್ದಾರೆ‌. ಅವರು ಈಗಲಾದರೂ ಸತ್ಯ ಮಾತನಾಡಬೇಕು ಎಂದು ಹೇಳಿದರು.

 

 

ಈ ಹಿಂದೆ ಕನ್ಯಾಡಿಯಲ್ಲಿ ರಾಮ‌ ಮಂದಿರ ಉತ್ತಮ ಸ್ಥಿತಿಯಲ್ಲಿ ಇರಲಿಲ್ಲ. ಆ ಸಮಯದಲ್ಲಿ ಆತ್ಮಾನಂದ ಸರಸ್ವತಿ ಸ್ವಾಮೀಜಿಗಳು ಇದ್ದರು. ಅದನ್ನೂ ಒಡೆಯಲು ಆಗಿನ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಂದಿದ್ದರು. ಅದರೆ ಅಂದು ನಡೆಯಬೇಕಿದ್ದ ಧ್ವಂಸವನ್ನು ತಡೆದಿದ್ದೆ. ಆ ಸಮಯದಲ್ಲಿ‌ ಉಳಿದ ದೇವಸ್ಥಾನ ಈಗ ಕೋಟಿಗಟ್ಟಲೆ ಸಂಪತ್ತಿನ ದೇವಸ್ಥಾನ ಆಗಿದೆ. ನಮ್ಮ ತಾಲೂಕಿನಲ್ಲಿ ಈಗ ಅನೇಕ ಅವತಾರ ಪುರುಷರು ಹುಟ್ಟಿಕೊಳ್ಳುತ್ತಿದ್ದಾರೆ, ಇವರು ಯಾವ ರೀತಿಯ ಅವತಾರ ಪುರುಷರು ಗೊತ್ತಾಗುತ್ತಿಲ್ಲ. ಈಗಿನ‌ ಸಂತೆಕಟ್ಟೆ ಬಳಿ ಇರುವ ಸರ್ಕಾರದ ಸ್ಥಳದಲ್ಲಿ ಅಯ್ಯಪ್ಪ ಗುಡಿ ದೇವಸ್ಥಾನ ಕಟ್ಟಲು ಶಂಕರ್ ಹೆಗ್ಗಡೆಯವರು ಬಂದು ಕೇಳಿದ್ದರು. ದೇವಸ್ಥಾನ ಕಟ್ಟಲು ನೀವು ಕಟ್ಟಿ ಎಂದು ನಾನು ಆದೇಶ ನೀಡಿದ್ದೆ. ಯಾರೂ ಕೋರ್ಟ್ ಗೆ ಹೋದರೂ ಈ ದೇವಸ್ಥಾನದ ಒಂದು ಕಂಬವನ್ನೂ ಅಲುಗಾಡಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದೆ. ಈಗ ಪ್ರತೀ ವರ್ಷ ಇಲ್ಲಿಂದ ಶಬರಿಮಲೆ ಯಾತ್ರೆಗೆ ಹೋಗುತ್ತಾರೆ. ನಮ್ಮ ಉದ್ದೇಶ ನಮ್ಮ ರಾಜ್ಯದಲ್ಲಿ ಇರುವ ಯಾವುದೇ ದೇವಸ್ಥಾನ ನಾಶ ಮಾಡಬಾರದು. ಯಾವ ಅಧಿಕಾರಿ ದೇವಸ್ಥಾನ ನಾಶ‌ ಮಾಡಲು ಬಂದರೂ ಅವರ ಕಾಲು ಮುರಿಯುತ್ತದೆ ಎಂದು ವಾಗ್ಧಾಳಿ ನಡೆಸಿದರು.

 

 

ಬಿ.ಜೆ.ಪಿ ಯವರು ಮನೆಯಲ್ಲಿ ಚಾಪೆ ಹಾಕಿ ಮಲಗಲಿ. ಬಿ.ಜೆ.ಪಿ ಗರು ತಿಳಿದುಕೊಂಡಿದ್ದಾರೆ ನಾವು ಕೆಳಗೆ ಬಂದಿದ್ದೇವೆ ಎಂದು, ಆದರೆ ನಾವು ಮೇಲೆ ಬರುತ್ತಿದ್ದೇವೆ. ಬೇಸರದ ವಿಷಯ ಏನೆಂದರೆ ಈಗ ಬಿ.ಜೆ.ಪಿಗರು ಕೆಳಗೆ ಇಳಿಯುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಶೈಲೇಶ್ ಕುಮಾರ್, ಗ್ರಾಮೀಣ ಬ್ಲಾಕ್ ಅಧ್ಯಕ್ಷ ರಂಜನ್ ಗೌಡ ಜಿ. ಗೌಡ ನೇತೃತ್ವದಲ್ಲಿ ಲಾಯಿಲಾ ವೆಂಕಟರಮಣ ದೇವಸ್ಥಾನದಿಂದ ಸಂತೆಕಟ್ಟೆ ಅಯ್ಯಪ್ಪ ಗುಡಿಯವರೆಗೆ ಪ್ರತಿಭಟನಾ ಜಾಥಾ ನಡೆದಿದ್ದು, ಅಧಿಕ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು ‌
ಶೈಲೇಶ್ ಕುಮಾರ್ ನಿರೂಪಿಸಿ, ವಂದಿಸಿದರು.

error: Content is protected !!