ಉಜಿರೆ ಎಸ್.ಡಿ.ಎಂ. ಪಿ.ಜಿ. ಕಾಲೇಜಿನಲ್ಲಿ ಅ.1ರಿಂದ ಚಿತ್ರಕಥೆ, ನಿರ್ದೇಶನ, ಸಿನಿಮಾಟೋಗ್ರಾಫಿ‌ ತರಬೇತಿ ಕಾರ್ಯಾಗಾರ: ವಿದ್ಯಾರ್ಥಿಗಳಿಗೆ ₹ 3 ಸಾವಿರ, ಇತರರಿಗೆ ₹ 4500 ಪ್ರವೇಶ ಶುಲ್ಕ, ಶೇ.60 ಪ್ರಾಯೋಗಿಕ, ಶೇ.40 ಥಿಯರಿ ತರಗತಿ: ಎಸ್.ಡಿ.ಎಂ. ಬಿ.ವೋಕ್, ಪುಣೆಯ ಇನ್ಸಿಟ್ಯೂಟ್ ಆಫ್ ಫಿಲ್ಸ್ ಆಂಡ್ ವಿಡಿಯೋ ಟೆಕ್ನಾಲಜಿ, ಮುಂಬೈನ ಆದಿತ್ಯ ಕ್ರಿಯೇಟಿವ್ ಫಿಲ್ಸ್ ಮೇಕರ್ ಸಂಸ್ಥೆ ಸಹಯೋಗ

 

ಬೆಳ್ತಂಗಡಿ: ಚಿತ್ರಕಥೆ, ನಿರ್ದೇಶನ ಮತ್ತು ಸಿನಿಮಾಟೋಗ್ರಾಫಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಭಾಗವಹಿಸಲು ಅನುಕೂಲವಾಗುವಂತೆ ಮತ್ತು ಕಥೆಗಳನ್ನು ಚಿತ್ರಕಥೆಯಾಗಿ ಪರಿವರ್ತಿಸುವ ಕುರಿತು ವಿಶೇಷ ಕಾರ್ಯಗಾರವನ್ನು ಉಜಿರೆ ಎಸ್‌ಡಿಎಂ ಪಿಜಿ ಕಾಲೇಜಿನಲ್ಲಿ ಅಕ್ಟೋಬರ್1 ರಿಂದ 12 ರ ವರೆಗೆ ನಡೆಯಲಿದೆ ಎಂದು ಸಾಂಸ್ಕೃತಿಕ ಸಂಘಟಕ, ನಿರ್ದೇಶಕ ಹಾಗೂ ನಿರ್ಮಾಪಕ ಸ್ಮಿತೇಶ್ ಎಸ್. ಬಾರ್ಯ ಹೇಳಿದರು.
ಅವರು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಶ್ರೀಗುರು ಮಿತ್ರಸಮೂಹ ಬೆಳ್ತಂಗಡಿ ಮತ್ತು ಬೋಧಿ ಪ್ರೊಡಕ್ಷನ್ ಇವರು ಪ್ರಮುಖ ಸಂಘಟಕರಾಗಿ ಕಾರ್ಯಾಗಾರ ಆಯೋಜಿಸಿದ್ದಾರೆ. ಹಲವರ ಮನದೊಳಗೆ ಚಲನಚಿತ್ರ ಮಾಡಬಲ್ಲ ಕಥೆಗಳಿವೆ. ಆದರೆ ಅದನ್ನು ದೃಶ್ಯರೂಪಕ್ಕೆ ಇಳಿಸುವ ಬಗೆ ಕ್ಲಿಷ್ಟಕರವಾಗಿದೆ. ಇದನ್ನು ಮನಗಂಡು ಈ ಕಾರ್ಯಾಗಾರವನ್ನು ಕೈಗೆತ್ತಿಕೊಳ್ಳಲಾಗಿದೆ. ಉಜಿರೆ ಎಸ್.ಡಿ.ಎಮ್.ಕಾಲೇಜಿನ ಡಿಪಾರ್ಟ್‌ಮೆಂಟ್ ಆಫ್ ಬಿ.ವೋಕ್ (ಡಿಜಿಟಲ್ ಮೀಡಿಯಾ ಮತ್ತು ಫಿಕ್ಸ್ ಮೇಕಿಂಗ್), ಇನ್ಸಿಟ್ಯೂಟ್ ಆಫ್ ಫಿಲ್ಸ್ ಆಂಡ್ ವಿಡಿಯೋ ಟೆಕ್ನಾಲಜಿ , ಪುಣೆ ಆದಿತ್ಯ ಕ್ರಿಯೇಟಿವ್ ಫಿಲ್ಸ್ ಮೇಕರ್ ಮುಂಬೈ ಇವರು ಸಹಯೋಗ ನೀಡುತ್ತಿದ್ದಾರೆ ಎಂದರು.
ಕಾರ್ಯಾಗಾರದಲ್ಲಿ ಕಥೆಯನ್ನು ಚಿತ್ರಕಥೆಯಾಗಿ ಪರಿವರ್ತಿಸುವ ಬಗೆ, ನಿರ್ದೇಶನ ಮಾಡುವ ವಿಧಾನ, ಕ್ಯಾಮರ ಕೈ ಚಳಕ ತೋರುವ ವಿಧಾನ, ಸಂಕಲನದ ಒಳಗುಟ್ಟು ಮತ್ತು ಸಿನಿಮಾ ಮಾರ್ಕೆಟಿಂಗ್ ಬಗ್ಗೆ ಕಲಿಯಬಹುದಾಗಿದ್ದು, ಶೇ. 40ರಷ್ಟು ತರಗತಿ ಪಾಠಗಳು ಹಾಗೂ ಶೇ. 60ರಷ್ಟು ಪ್ರಾಯೋಗಿಕ ತರಗತಿಗಳು ನಡೆಯಲಿವೆ. ಸಿನಿಮಾಕ್ಕೆ ಉಪಯೋಗಿಸುವ ಲೈಟ್‌, ಬೆಳಗಿನ ವಿನ್ಯಾಸದ ತರಗತಿ, ಕ್ಯಾಮಾರಾವನ್ನು ಪ್ರತಿಯೊಬ್ಬರಿಗೂ ನೀಡಿ ಅದನ್ನು ಉಪಯೋಗಿಸುವ ಪ್ರಾಯೋಗಿಕ ಅಭ್ಯಾಸವನ್ನೂ ನೀಡಲಾಗುತ್ತದೆ. ಕಾರ್ಯಾಗಾರದಿಂದ ಗ್ರಾಮೀಣ ಪ್ರದೇಶದವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾಯೋಗಿಕ ತರಗತಿಗೆ ಒತ್ತು ನೀಡಲಾಗುತ್ತಿದ್ದು, ಪೂರ್ಣಪ್ರಮಾಣದ ಕಲಿಕೆ ಸಾಧ್ಯ ಎಂದರು.
ಕಾರ್ಯಗಾರದ ಬಳಿಕ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಲು ಅವಕಾಶವಿದೆ. ತಮ್ಮೊಳಗಿರುವ ಕಥೆಗಳನ್ನು ಚಿತ್ರಕಥೆಯಾಗಿ ಪರಿವರ್ತಿಸುವ ಬಗ್ಗೆ ಕೂಡ ತಿಳಿಯಬಹುದು. ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಚಿಸುವವರಿಗೆ ವಿದ್ಯಾರ್ಥಿಗಳಿಗೆ 3 ಸಾವಿರ ರೂ., ಮತ್ತು ಇತರ ಆಸಕ್ತರಿಗೆ 4500 ರೂ. ಪ್ರವೇಶ ಶುಲ್ಕ ಪಾವತಿಸಬೇಕಿದೆ. ಇದು ಊಟದ ವ್ಯವಸ್ಥೆಯನ್ನೂ ಒಳಗೊಂಡಿದೆ. ಕಾರ್ಯಾಗಾರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9901607312 ಸಂಪರ್ಕಿಸಬಹುದು ಎಂದು ಮಾಹಿತಿ ‌ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ರಮಾನಂದ ಸಾಲಿಯಾನ್ ಮತ್ತು ಕಲಾವಿದ ಅನೀಶ್ ಅಮೀನ್ ಉಪಸ್ಥಿತರಿದ್ದರು.

error: Content is protected !!