ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ವತಿಯಿಂದ ಸ.25ರಂದು 33ನೇ ಮನೆ ಹಸ್ತಾಂತರ: ಕಾರ್ಯಕ್ರಮದಲ್ಲಿ ಬೆಂಗಳೂರು ಸಿಐಡಿ ಎಸ್ಪಿ ರವಿ ಚೆನ್ನಣ್ಣನವರ್ ಉಪಸ್ಥಿತಿ: ಸುದ್ದಿಗೋಷ್ಠಿಯಲ್ಲಿ ಸಂಸ್ಥಾಪಕ ದೀಪಕ್ ಬೆಳ್ತಂಗಡಿ ಮಾಹಿತಿ

 

 

 

 

 

ಬೆಳ್ತಂಗಡಿ: ಅಶಕ್ತ ಕುಟುಂಬಗಳಿಗೆ ಸಹಾಯ ಹಸ್ತ ಚಾಚುತ್ತಿರುವ ರಾಜಕೇಸರಿ ಟ್ರಸ್ಟ್ ವತಿಯಿಂದ ಬಡ ಕುಟುಂಬಕ್ಕೆ ನಿರ್ಮಾಣವಾಗುತ್ತಿರುವ 33 ನೇ ಮನೆ ಹಸ್ತಾಂತರ ಕಾರ್ಯಕ್ರಮ ಸ 25 ರಂದು ನಡೆಯಲಿದೆ ಎಂದು ರಾಜಕೇಸರಿ ಸಂಸ್ಥಾಪಕ ದೀಪಕ್ ‌ಬಿ.‌ಬೆಳ್ತಂಗಡಿ ತಿಳಿಸಿದರು.
ಅವರು ಬೆಳ್ತಂಗಡಿ ಪ್ರತಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈಗಾಗಲೇ ರಾಜ ಕೇಸರಿ ಟ್ರಸ್ಟ್ ‌ಮೂಲಕ ಹಲವಾರು ಸಮಾಜಮುಖಿ ಕಾರ್ಯಕ್ರಮ ಆಯೋಜಿಸುವ ಮೂಲಕ ಬಡವರ, ನೊಂದವರ ಪಾಲಿನ ಆಶಾಕಿರಣವಾಗಿ ಮೂಡಿಬರುತ್ತಿದೆ.33ನೇ ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಬೆಂಗಳೂರು ಸಿಐಡಿ ಎಸ್ಪಿ ರವಿ. ಡಿ. ಚೆನ್ನಣ್ಣನವರ್ ಆಗಮಿಸಿ ಮನೆಯ ಕೀ ಹಸ್ತಾಂತರಿಸಲಿದ್ದಾರೆ. ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಉದ್ಯಮಿಗಳಾದ ಮೋಹನ್ ಕುಮಾರ್ ಉಜಿರೆ, ಸಂಪತ್. ಬಿ. ಸುವರ್ಣ, ಮನೋಜ್ ಕಟ್ಟೆಮಾರ್, ಮಾಡಲಿದ್ದಾರೆ.
ನಾಮಫಲಕ ಉದ್ಘಾಟನೆಯನ್ನು‌ ರೋಟರಿ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ ನೆರವೇರಿಸಲಿದ್ದಾರೆ. ಜಯಂತ್ ನಡುಬೈಲು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಸೇರಿದಂತೆ ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕ ಎಡ್ವರ್ಡ್ ಡಿ’ಸೋಜಾ ಮುಖ್ಯಮಂತ್ರಿ ಪದಕ ಪಡೆದ ವೆಂಕಟೇಶ್ ನಾಯಕ್, ಯಕ್ಷಗಾನ ಕಲಾವಿದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಇವರಿಗೆ ಸನ್ಮಾನ ನಡೆಯಲಿದೆ. ಸಂಜೆ 5 ರಿಂದ ಸ್ಥಳೀಯರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ. ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ತಿಕ್, ನಾಗೇಶ್ ಬಿ. ನೆರಿಯ, ಜಯಪ್ರಕಾಶ ಕನ್ಯಾಡಿ ಉಪಸ್ಥಿತರಿದ್ದರು.

error: Content is protected !!