ಲಾಯಿಲ, ಕೊಯ್ಯೂರು ಕ್ರಾಸ್ ಬಳಿ ಗೋಮಾಂಸ ಅಕ್ರಮ ಸಾಗಾಟ: ವಾಹನ ಸೇರಿ ಆರೋಪಿಗಳಿಬ್ಬರ ಬಂಧನ, 23 ಕೆ.ಜಿ. ಗೋಮಾಂಸ, ರಿಕ್ಷಾ ವಶಕ್ಕೆ: ಬೆಳ್ತಂಗಡಿ ಪೊಲೀಸರ ಕಾರ್ಯಾಚರಣೆ

 

 

 

ಬೆಳ್ತಂಗಡಿ: ರಿಕ್ಷಾದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲು  ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಯ್ಯೂರು ಕ್ರಾಸ್ ಬಳಿ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನಂದಕುಮಾರ್ ಹಾಗೂ ಸಿಬ್ಬಂದಿಗಳು ಸೆ.22 ರಂದು ಬೆಳಗ್ಗೆ ವಾಹನ ತಪಾಸಣೆ ನಡೆಸುತ್ತಿರುವ ಸಂದರ್ಭ ಲಾಯಿಲ ಕಡೆಯಿಂದ ಬರುತ್ತಿರುವ ಆಟೋ ರಿಕ್ಷಾವನ್ನು ಪರಿಶೀಲಿಸಿದಾಗ ರಿಕ್ಷಾದಲ್ಲಿ 23 ಕೆ.ಜಿ. ಗೋ ಮಾಂಸ ಪತ್ತೆಯಾಗಿದೆ.ಇವರು ಲಾಯಿಲ ಗ್ರಾಮದ ಕಕ್ಕೇನ ಹಾಗೂ ಇತರ ಕಡೆಗಳಲ್ಲಿ ಗೋ ಮಾಂಸ ಮಾರಾಟ ಮಾಡಿ ಹಿಂದಿರುಗುತಿದ್ದಾಗ  ರಿಕ್ಷಾವನ್ನು ವಶಕ್ಕೆ ಪಡೆದುಕೊಂಡು ಇಬ್ಬರು ಆರೋಪಿಗಳಾದ ರಿಯಾಜ್ ಮತ್ತು ಸಾಕೀರ್ ಅವರನ್ನು ಬಂಧಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಅಕ್ರಮವಾಗಿ ಗಾಂಜಾ ಸಾಗಾಟ ಮತ್ತು ಕೆಲವು ಕಡೆಗಳಲ್ಲಿ‌ ಗೋ ಮಾಂಸವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸುತ್ತಿದ್ದು, ಕಾರ್ಯಾಚರಣೆಗಳು ಯಶಸ್ವಿಯಾಗುತ್ತಿವೆ. ಠಾಣೆಯ ಎಸ್.ಐ. ನಂದ ಕುಮಾರ್ ಹಾಗೂ ಅವರ ತಂಡದ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !!