ಪುತ್ತೂರು ಜಿಲ್ಲಾ ಗೋರಕ್ಷಾ ಸಹ ಪ್ರಮುಖ್ ರಾಮ್ ಪ್ರಸಾದ್ ಮರೋಡಿ ನಿಧನ: “ಉತ್ತಮ ಸಂಘಟಕನನ್ನು ಕಳೆದುಕೊಂಡಿದ್ದೇವೆ” ಎಂದು ಕಂಬನಿ‌‌ಮಿಡಿದ ಶಾಸಕ ಹರೀಶ್ ಪೂಂಜ

 

 

ನಾರಾವಿ: ಭಜರಂಗ ದಳ ಪುತ್ತೂರು ಜಿಲ್ಲಾ ಗೋರಕ್ಷಾ ಸಹ ಪ್ರಮುಖ್  ಮರೋಡಿ ಪಲಾರಗೋಳಿ ರಾಮ್ ಪ್ರಸಾದ್ ಮರೋಡಿ (37.ವ) ಅಲ್ಪಕಾಲದ ಅಸೌಖ್ಯದಿಂದ ಸೆ.13 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೆಲ ದಿನಗಳ ಹಿಂದೆ ಜಾಂಡಿಸ್ ಖಾಯಿಲೆಯಿಂದ ಬಳಲುತ್ತಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಇಂದು ಕೊನೆಯುಸಿರೆಳೆದಿದ್ದಾರೆ.
ಇವರು ಪಲಾರಗೋಳಿ ಬ್ರಹ್ಮ ಬೈದರ್ಕಳ ಗರಡಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರು ತಂದೆ ತಾಯಿ, ಪತ್ನಿ, ಪುತ್ರಿ, ಓರ್ವ ಸಹೋದರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಇಂದು ಸಂಜೆ 7 ಗಂಟೆಗೆ ಅವರ ಸ್ವಗೃಹ ಪಲಾರಗೋಳಿಯಲ್ಲಿ ಅಂತಿಮ ಕಾರ್ಯ ನೆರವೇರಲಿದೆ.

ಕಂಬನಿ ಮಿಡಿದ ಶಾಸಕರು

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು, ಸಾವಿನ ಸುದ್ದಿ ಕೇಳಿ ಕಂಬನಿ ಮಿಡಿದಿದ್ದಾರೆ. ಸಂಘಟನೆಯ ಬಲವಾಗಿದ್ದ ರಾಮ್ ಪ್ರಸಾದ್ ಮರೋಡಿ ನಿಧನ ವಾರ್ತೆ ಕೇಳಿ ಅತೀವ ದುಃಖವಾಗಿದೆ. ಉತ್ತಮ ಸಂಘಟಕರಾಗಿದ್ದ ಇವರು ಯುವಕರಿಗೆ ಸ್ಫೂರ್ತಿಯಾಗಿದ್ದರು. ಪರಮಾತ್ಮನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಹಾಗೂ ಬಂಧು ಮಿತ್ರರಿಗೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

error: Content is protected !!