ಜನರ ಬಹುದಿನಗಳ ಕನಸು ಈಡೇರುತಿದೆ :ಗ್ರಾ.ಪಂ ಅಧ್ಯಕ್ಷೆ ಆಶಾ ಸಲ್ದಾನ. ಲಾಯಿಲ ಕನ್ನಾಜೆಯ ಕೈಪ್ಲೋಡಿಯಲ್ಲಿ 40 ಲಕ್ಷ ಅನುದಾನದಲ್ಲಿ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಶಿಲಾನ್ಯಾಸ

 

ಬೆಳ್ತಂಗಡಿ:ಜಲಜೀವನ್ ಮೆಷಿನ್ ಯೋಜನೆಯ ಮೂಲಕ ಈಗಾಗಲೇ ಈ ಟ್ಯಾಂಕ್ ನಿರ್ಮಾಣಗೊಳ್ಳುತಿದ್ದು ಈ ಭಾಗದ ಜನರ ನೀರಿನ ಸಮಸ್ಯೆ ಪರಿಹಾರವಾಗಿ ಬಹು ದಿನಗಳ ಕನಸು ಈಡೇರುವಂತಾಗಿದೆ. ಎಂದು ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಬೆನಡಿಕ್ಟ ಸಲ್ದಾನ ಹೇಳಿದರು. ಅವರು ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಎರಡನೇ ವಾರ್ಡಿನ ಕನ್ನಾಜೆ ಸಮೀಪದ ಕೈಪ್ಲೋಡಿ ಎಂಬಲ್ಲಿ ಜಲಜೀವನ್ ಮೆಷಿನ್ ಯೋಜನೆಯಡಿ ಸುಮಾರು 40 ಲಕ್ಷ ಅನುದಾನದಲ್ಲಿ 1 ಲಕ್ಷ ನೀರು ಸಂಗ್ರಹಣಾ ಸಾಮಾರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಸೆ 13 ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಶಾಸಕರಾದ ಹರೀಶ್ ಪೂಂಜ ಈಗಾಗಲೇ ಜಲಜೀವನ್ ಮೆಷಿನ್ ಮೂಲಕ ನೀರಾವರಿ ಯೋಜನೆಗಳನ್ನು ತಾಲೂಕಿಗೆ ಮಂಜೂರುಗೊಳಿಸಿದ್ದಾರೆ ತಾಲೂಕಿನ ಪ್ರತಿಯೊಂದು ಹಳ್ಳಿಗಳ ಅಭಿವೃದ್ಧಿಯ ಬಗ್ಗೆ ವಿಶೇಷ ಅನುದಾನಗಳನ್ನು ಬಿಡುಗಡೆಗೊಳಿಸಿ ತಾಲೂಕಿನ ಪ್ರತಿ ಮನೆಗೂ ಮೂಲಭೂತ ಸೌಕರ್ಯ ಒದಗಿಸಿಕೊಡುವಲ್ಲಿ ಅವರು ಶ್ರಮ ಪಡುತ್ತಿರುವುದು ನಮಗೆಲ್ಲ ಹೆಮ್ಮೆ ತರುವಂತಾಗಿದೆ ಎಂದ ಅವರು   ಪಂಚಾಯತ್ ನಲ್ಲಿ ಮನೆ ನಿವೇಶನದ   ಬಗ್ಗೆಯೂ ಹಲವಾರೂ ಅರ್ಜಿಗಳು ಬಂದಿದ್ದು ಈಗಾಲೇ ಕೆಲವೊಂದು ಕಡೆಗಳಲ್ಲಿ ಜಾಗ ಗುರುತಿಸಿದ್ದು  ಕಾನೂನಾತ್ಮಕ ಪ್ರಕ್ರಿಯೆಯ ನಂತರ   ಈ ಬಗ್ಗೆಯೂ  ಮುಂದಿನ  ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

 

 

ಉಪಾಧ್ಯಕ್ಷ ಗಣೇಶ್ ಆರ್ ಮಾತನಾಡಿ ಈ ಭಾಗದ ಜನರ ಬಹುದಿನಗಳ ಬೇಡಿಕೆಯೊಂದು ಈಡೇರುತಿದೆ.
ಗ್ರಾಮ ಪಂಚಾಯಿತಿ ಮಾಡಿದ ಮನವಿಗೆ ಟ್ಯಾಂಕ್ ನಿರ್ಮಾಣಕ್ಕೆ ಅನುದಾನ ಮಂಜೂರುಗೊಳಿಸಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸೌಮ್ಯಲತಾ ಜಯಂತ ಗೌಡ ಮತ್ತು ಲಾಯಿಲ ಪಂಚಾಯತ್ ನ   ಆಡಳಿತ ಮಂಡಳಿಗೆ ಈ ಮೂಲಕ ಅಭಿನಂದನೆಗಳು. ಅದಲ್ಲದೇ ನಮ್ಮ ಗ್ರಾಮ ಪಂಚಾಯತ್ ನ ಪ್ರತಿಯೊಂದು ಅಭಿವೃದ್ಧಿ ಯ ಬಗ್ಗೆ  ಅನುದಾನಗಳನ್ನು ನೀಡಿ ಸದಾ ಬೆನ್ನೆಲುಬಾಗಿ ಸ್ಪಂದಿಸುತ್ತಿರುವ ನಮ್ಮೆಲ್ಲರ ಮೆಚ್ಚಿನ ಶಾಸಕರಾದ ಹರೀಶ್ ಪೂಂಜ ಇವರಿಗೂ  ಅಭಿನಂದನೆಗಳು ಎಂದರು.

 

 

ಮಾಜಿ ಪಂಚಾಯತ್ ಅಧ್ಯಕ್ಷ ರುಕ್ಮಯ ಕನ್ನಾಜೆ ಮಾತನಾಡಿ ಈ ಪರಿಸರದಲ್ಲಿ ಹಲವು ಮನೆಗಳು ಇರುವುದರಿಂದ ನೀರಿನ ಸಮಸ್ಯೆ ಹೆಚ್ಚಾಗಿತ್ತು. ಅದಕ್ಕಾಗಿ ಇಲ್ಲಿ ನೀರಿನ ವ್ಯವಸ್ಥೆಯ ಬಗ್ಗೆ ಹಲವು ಬಾರಿ ಪಂಚಾಯತ್ ಸಭೆಗಳಲ್ಲಿ ಹಾಗೂ ಜನ ಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದೇವು ಇದೀಗ ಇಲ್ಲಿ ನೂತನ ಟ್ಯಾಂಕ್ ನಿರ್ಮಾಣಗೊಳ್ಳುತ್ತಿರುವುದು ಸಂತೋಷವಾಗುತಿದೆ ಎಂದರು.

 

ಗ್ರಾಮ ಪಂಚಾಯತ್  ಸದಸ್ಯ ಹಾಗೂ  ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ ಮಾತನಾಡಿ ಕೇಂದ್ರ ಸರಕಾರ ಪ್ರತೀ ಮನೆ ಮನೆಗೂ ನೀರು ದೊರಕಬೇಕು ಎಂಬ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಲಜೀವನ ಮೆಷಿನ್ ಮೂಲಕ ಅನುಷ್ಠಾನಕ್ಕೆ ತರುತ್ತಿದೆ.ತಾಲೂಕಿನಾದ್ಯಂತ ಶಾಸಕರ ಮೂಲಕ ಹಲವಾರು ಯೋಜನೆಗಳು ಮಂಜೂರುಗೊಂಡಿದೆ ಈ ಮೂಲಕ ಲಾಯಿಲ ಗ್ರಾಮದಲ್ಲಿ ಕುಂಠಿನಿ, ಗಾಂಧಿನಗರದಲ್ಲಿ ಟ್ಯಾಂಕ್ ಕಾಮಗಾರಿ ಪ್ರಾರಂಭಗೊಂಡಿದೆ ಇದೀಗ ಕನ್ನಾಜೆಯ ಕೈಪ್ಲೋಡಿಯಲ್ಲಿಯೂ ನೂತನ ಟ್ಯಾಂಕ್ ನಿರ್ಮಾಣಗೊಂಡು ನೀರಿನ ಸಮಸ್ಯೆ ಅನುಭವಿಸುತಿದ್ದ ಜನರ ಬಹು ವರುಷಗಳ ಬೇಡಿಕೆ ಈಡೇರಿದಂತಾಗಿದೆ. ಇಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಪ್ರಯತ್ನಿಸಿದ ಎಲ್ಲರಿಗೂ ಈ ಪರಿಸರದ  ಜನರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೆನೆ ಎಂದರು.ಕಾರ್ಯಕ್ರಮದಲ್ಲಿ ಎರಡನೇ ವಾರ್ಡಿನ‌ ಪಂಚಾಯತ್ ಸದಸ್ಯರುಗಳಾದ ಚಿದಾನಂದ ಶೆಟ್ಟಿ ಕನ್ನಾಜೆ, ರಜನಿ ಚಂದ್ರಪಾಲ್, ನೀರು ನೈರ್ಮಲ್ಯ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಣ ಪೂಜಾರಿ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಗಣೇಶ್ ಕನ್ನಾಜೆ,ವಾಸು ಸಪಲ್ಯ ಕನ್ನಾಜೆ ಮುಗ್ರೋಡಿ ಕನ್ ಸ್ಟ್ರಕ್ಷನ್ ನ ಉದಯ ಕುಮಾರ್, ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಕಾರ್ಯದರ್ಶಿ ಪುಟ್ಟಸ್ವಾಮಿ ಸ್ವಾಗತಿಸಿ ಧನ್ಯವಾದವಿತ್ತರು.

error: Content is protected !!