ಲಾಯಿಲ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ 17 ನೇ ವರುಷದ “ಮೊಸರು ಕುಡಿಕೆ” ಉತ್ಸವ. ಅಶಕ್ತರಿಗೆ ಸಹಾಯಧನ , ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ.

 

 

 

ಬೆಳ್ತಂಗಡಿ: ಲಾಯಿಲ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ  ಸ 12 ಆದಿತ್ಯವಾರ 17 ನೇ ವರುಷದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮವನ್ನು ವಿಘ್ನೇಶ್ವರ ಕಲಾ ಮಂದಿರದಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಯಮಿ  ವೀರೇಶ್ ಬಾಗಲಕೋಟೆ  ದೀಪಾ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

 

ಮಧುಕರ್ ಆಯೋದ್ಯಾನಗರ  ಸ್ಮರಣಾರ್ಥ ಸಹಾಯಧನ , ಆಹಾರ ಕಿಟ್ ವಿತರಣೆ.

 

ದಿವಂಗತ ಸದಸ್ಯ ಮಧುಕರ್ ಅಯೋಧ್ಯಾನಗರ ಇವರ ಸ್ಮರಣಾರ್ಥ “ಶ್ರೀ ಕೃಷ್ಣ ಜನ್ಮಾಷ್ಟಮಿ ಸೇವಾ ಸಮಿತಿ” ಇದರ 4 ನೇ ವರ್ಷದ ಸೇವಾ ಯೋಜನೆಯ ಭಾಗವಾಗಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುತ್ರಬೈಲ್ ನಿವಾಸಿ ಸತೀಶ್ ಭೈರ ಇವರಿಗೆ ರೂ 10,000 ಮತ್ತು ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿರುವ ಬಜಕ್ರೆಸಾಲ್ ನಿವಾಸಿ ಸೀತಾ ಅಚಾರ್ತಿ ಇವರಿಗೆ ರೂ 10,000 ಧನ ಸಹಾಯ ಮತ್ತು‌ 10 ಬಡ ಕುಟುಂಬಗಳಿಗೆ ತಲಾ 1,000 ದಂತೆ ಆಹಾರ ಕಿಟ್ ವಿತರಿಸಲಾಯಿತು.

 

ಗ್ರಾ.ಪಂ ಸದಸ್ಯರಾಗಿ ಆಯ್ಕೆಯಾದ ಸಮಿತಿ ಸದಸ್ಯರಿಗೆ  ಸನ್ಮಾನ 

 

 

 

ಸಮಿತಿಯ ಸಕ್ರಿಯ ಸದಸ್ಯರಾಗಿದ್ದು ಗ್ರಾಮ ಪಂಚಾಯತ್ ನೂತನ ಸದಸ್ಯರಾಗಿ ಆಯ್ಕೆಯಾದ ಗಣೇಶ್, ಅರವಿಂದ್, ದಿನೇಶ್ ಶೆಟ್ಟಿ, ಹರಿಕೃಷ್ಣ, ಮೋಹನ್ ದಾಸ್, ಇವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.ಸಮಿತಿಯ ಅಧ್ಯಕ್ಷ ಸುಜಿತ್ ಗುರಿಂಗಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಸಲ್ಡಾನ, ರುಕ್ಮಯ ಕನ್ನಾಜೆ, ಸುಧಾಕರ್ ಬಿ. ಎಲ್, ರಾಜೇಶ್ ಶೆಟ್ಟಿ, ಪ್ರಕಾಶ್ ಕಾಶಿಬಿಟ್ಟು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

 

ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಆರ್ ಸ್ವಾಗತಿಸಿ, ಸದಸ್ಯ ಅರವಿಂದ ಲಾಯಿಲ ಧನ್ಯವಾದವಿತ್ತರು. ಸಮಿತಿಯ ಸದಸ್ಯ ಜಗದೀಶ್ ಕನ್ನಾಜೆ ಕಾರ್ಯಕ್ರಮ ನಿರ್ವಹಿಸಿದರು.

 

error: Content is protected !!