ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷರಾಗಿ ಪುಷ್ಪರಾಜ ಶೆಟ್ಟಿ ಆಯ್ಕೆ.

 

 

ಬೆಳ್ತಂಗಡಿ: ತಾಲೂಕು ವರ್ತಕರ ಸಂಘದ ಅಧ್ಯಕ್ಷರಾಗಿ ಬೆಳ್ತಂಗಡಿಯ ಉದ್ಯಮಿ ಪುಷ್ಪರಾಜ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಸಪ್ಟಂಬರ್ 03 ರಂದು ಸಿವಿಸಿ ಹಾಲ್ ನಲ್ಲಿ ನಡೆದ ಮದ್ದಡ್ಕ, ಗುರುವಾಯನಕೆರೆ, ಬೆಳ್ತಂಗಡಿ, ಲಾಯಿಲ ವರ್ತಕರ ಸಭೆಯಲ್ಲಿ  ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈಗಾಗಲೇ ಹಲವು ಸಂಘಟನೆಗಳ ಮೂಲಕ ತನ್ನನ್ನು ತಾನು ಗುರುತಿಸಿಕೊಂಡಿರುವ ಪುಷ್ಪರಾಜ್ ಶೆಟ್ಟಿ ಯವರು ನೇತ್ರಾವತಿ ತಿರುವು ಯೋಜನೆ ವಿರುದ್ಧ ಇವರ ನಾಯಕತ್ವದಲ್ಲಿ ಬೆಳ್ತಂಗಡಿಯಲ್ಲಿ ನಡೆದ ಬೃಹತ್ ಪ್ರತಿಭಟನೆ ರಾಷ್ಟ್ರ ಮಟ್ಟದಲ್ಲಿ ಸುದ್ಧಿಯಾಗಿತ್ತು.ಸಮಾಜಮುಖಿ ಚಿಂತನೆಯೊಂದಿಗೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ  ನಿಟ್ಟಿನಲ್ಲಿ   ಇವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಎಲ್ಲರೂ ಇಚ್ಛೆ ವ್ಯಕ್ತಪಡಿಸಿದಾಗ ಎಲ್ಲರ ಒಪ್ಪಿಗೆಯಂತೆ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು.

ವರ್ತಕರ ಸಂಘದ ಉದ್ಧೇಶ

ಉದ್ಯಮ ಸ್ನೇಹಿ ವಾತಾವರಣ ಕಲ್ಪಿಸುವುದು, ಉದ್ಯಮಿಗಳಿಗೆ ಅಗತ್ಯ ಮಾಹಿತಿ ಮತ್ತು ಸಹಕಾರದ ವ್ತವಸ್ಥೆ, ವೃತ್ತಿ ಕೌಶಲ್ಯ ಹೆಚ್ಚಿಸಲು ಕಾರ್ಯಾಗಾರ ಆಯೋಜನೆ, ಬದಲಾದ ವ್ಯಾಪಾರ ಸನ್ನಿವೇಶ ಎದುರಿಸಲು ತರಬೇತಿ ಮತ್ತು ಬಂಡವಾಳ ಹೂಡಿಕೆಗೆ ಮಾರ್ಗದರ್ಶನ ಸದಸ್ಯರಿಗೆ ಮತ್ತು ಕುಟುಂಬಕ್ಕೆ ಅಪತ್ಕಾಲದಲ್ಲಿ ಸಹಾಯ, ಸದಸ್ಯರಿಗೆ ಕಾಲ ಕಾಲಕ್ಕೆ ಹೊಸ ಹೊಸ ತಂತ್ರಜ್ಞಾನದ ತಿಳುವಳಿಕೆ, ವ್ಯಾಪಾರೋಧ್ಯಮಗಳಲ್ಲಿ ಮುಂಬರುವ ಸವಾಲುಗಳನ್ನು ಎದುರಿಸಲು ಸಹಕಾರ, ಸಮಾಜಕ್ಕೆ ಕಾಲ ಕಾಲಕ್ಕೆ ಬೇಕಾದ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಯುವ ಜನತೆಗೆ ವೃತ್ತಿ ಶಿಕ್ಷಣ ಮತ್ತು ಉದ್ಯಮ ಶೀಲತೆಗೆ ಅಗತ್ಯ ಮಾರ್ಗದರ್ಶನ, ಉದ್ಯಮಿ/ ವ್ಯಾಪಾರಿ ಬಂಧುಗಳ ಸಂಕಷ್ಟಕ್ಕೆ ಸ್ಪಂದಿಸುವುದಾಗಿದೆ.

error: Content is protected !!