ಸ್ನಾನಗೃಹದಲ್ಲಿ‌‌‌ ಅಡಗಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪ: ಕಾರ್ಯಾಚರಣೆ ವೇಳೆ‌ ದಾಳಿಗೆ ಯತ್ನಿಸಿದ ಕಾಳಿಂಗ: ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್‌

 

 

 

ಬೆಳ್ತಂಗಡಿ: ಸ್ನಾನಗೃಹದ ಒಳಗೆ ಅವಿತಿದ್ದ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿ, ಕಾಡಿಗೆ ಬಿಟ್ಟ ಘಟನೆ ಅಳದಂಗಡಿಯ ಕೆದ್ದುವಿ‌ನಲ್ಲಿ ನಡೆದಿದೆ.
ಗುರುವಾರ ಬೆಳಗ್ಗೆ ಅಳದಂಗಡಿ, ಕೆದ್ದು ನಿವಾಸಿ ಗೋಪಾಲಕೃಷ್ಣ ಭಟ್ ಅವರ ಜಿ.ಕೆ.ಫಾರ್ಮ್ಸ್ ಮನೆಯ ಸ್ನಾನ ಗೃಹದಲ್ಲಿ‌ ಕಾಳಿಂಗ ಸರ್ಪ ಅವಿತು ಕುಳಿತಿತ್ತುಮ. ಇಂದು ಬೆಳಗ್ಗೆ ಮನೆಯವರು ಮುಖ ತೊಳೆಯಲು ಒಳಗಡೆ ಹೋಗಿದ್ದಾರೆ, ಈ ವೇಳೆ ಒಳಗಡೆಯಿಂದ ಶಬ್ದ ಕೇಳಿಸಿದ್ದು ಕೂಡಲೇ ಅಂತಕದಿಂದ ಹೊರಗಡೆ ಓಡಿಬಂದಿದ್ದಾರೆ. ನಂತರ ಪರಿಶೀಲನೆ ನಡೆಸಿದಾಗ ಕಾಳಿಂಗ ಸರ್ಪ‌ ಅವಿತು ಕುಳಿತಿತ್ತು. ತಕ್ಷಣ ಲಾಯಿಲಾದ ಉರಗ ಪ್ರೇಮಿ, ಸ್ನೇಕ್ ಅಶೋಕ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿ ಮನೆಗೆ ಕರೆಸಿದ್ದಾರೆ.

 

ಸ್ನೇಕ್ ಅಶೋಕ್ ಕಾಳಿಂಗ ಸರ್ಪದ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಸ್ನಾನಗೃಹದ ಬಳಿ ಬಾಗಿಲಿನಲ್ಲಿ ನಿಂತು ಕಾಳಿಂಗದ ಬಾಲವನ್ನು ಹಿಡಿದು ಹೊರಗೆಳೆಯುವ ಸಂದರ್ಭದಲ್ಲಿ ಹಾವು ಕೂಡಲೇ ಹೊರಗೆ ಬಂದು 3.5 ಅಡಿ ಎತ್ತರಕ್ಕೆ ಎದ್ದು ನಿಂತು ದಾಳಿಗೆ ಮುಂದಾಗಿದೆ. ಸ್ಥಳದಲ್ಲಿದ್ದವರು ಒಂದು ಕ್ಷಣ ತಬ್ಬಿಬ್ಬಾದರು, ಸ್ನೇಕ್ ಅಶೋಕ್ ಅವರೂ ಕೆಲ ಕ್ಷಣಗಳ ಕಾಲ ಗಾಬರಿಗೊಂಡಿದ್ದು, ಕೂಡಲೇ ಹಿಂದೆ ಸರಿದು ತಮ್ಮನ್ನು ‌ತಾವು ರಕ್ಷಿಸಿಕೊಂಡಿದ್ದಾರೆ. ನಂತರ ಕಾರ್ಯಾಚರಣೆ ನಡೆಸಿ ಕಾಳಿಂಗ ಸರ್ಪವನ್ನು ರಕ್ಷಿಸಿ, ಸುರಕ್ಷಿತವಾಗಿ ಕಾಡಿಗೆ ಬಿಡುವಲ್ಲಿ‌ ಯಶಸ್ವಿಯಾಗಿದ್ದಾರೆ.

error: Content is protected !!