ಮಾಜಿ ಸೈನಿಕರ ಸಂಘ ಜಿಲ್ಲಾ ಘಟಕ ಉದ್ಘಾಟನೆ:ಉಜಿರೆಯಲ್ಲಿ ಪೂರ್ವಭಾವಿ ಸಭೆ

 

 

ಉಜಿರೆ:ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಬೆಳ್ತಂಗಡಿ ರೋಟರಿ ಕ್ಲಬ್ ನ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಘಟಕ ಉದ್ಘಾಟನೆ ಕುರಿತು ಪೂರ್ವಭಾವಿ ಸಭೆ
ಉಜಿರೆ ರಾಮಕೃಷ್ಣ ಸಭಾಭವನದಲ್ಲಿ ನಡೆಯಿತು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಜ್ಯದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಡಾ. ಶಿವಣ್ಣ ಮಾತನಾಡಿ ಈಗ ದೇಶದಲ್ಲಿ ಸೈನಿಕರಿಗೆ ಸಿಗುವ ಗೌರವ ಕಡಿಮೆಯಾಗುತ್ತಿದೆ. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಮಾತ್ರ ಅವರನ್ನು ಗೊಂಬೆಗಳಂತೆ ಕೂರಿಸಿ ಗೌರವಿಸಲಾಗುತ್ತದೆ. ಆದರೆ ಅವರ ಕಷ್ಟಗಳಿಗೆ ಯಾವ ರಾಜಕಾರಣಿಗಳು ಸ್ಪಂದಿಸುತ್ತಿಲ್ಲ,ಕಚೇರಿ ಕೆಲಸಗಳಿಗೆ ಹೋದಾಗಲೂ ಅಲ್ಲಿ ಅಧಿಕಾರಿಗಳ ಜಾಸ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಘಟನೆಯನ್ನು ಬಲಪಡಿಸಬೇಕಾಗಿದೆ ಎಂದು ಹೇಳಿದರು.
ತಾಲೂಕು ಮಾಜಿ ಸೈನಿಕರ ಸಂಘ ಸಂಘಟನಾ ಕಾರ್ಯದರ್ಶಿ ಕಾಂಚೋಡು ಗೋಪಾಲಕೃಷ್ಣ ಅವರು ಮಾತನಾಡಿ ದೇಶ ಕಾಯುವ ಸೈನಿಕರು, ಇಂದು ಪರಸ್ಪರ ಒಗ್ಗೂಡಿ ತಮ್ಮ ರಕ್ಷಣೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿರುವುದು ವಿಷಾದನೀಯ ಎಂದು ಹೇಳಿದರು.

ಹಿರಿಯ ಸೈನಿಕ ಡಿ.ಎಂ. ಗೌಡ ಉಜಿರೆ ಅಧ್ಯಕ್ಷತೆ ವಹಿಸಿದ್ದರು

ಮೈಸೂರು ಘಟಕದ ಅಧ್ಯಕ್ಷ ದಿವಾಕರ್, ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಶ್ರೀಕಾಂತ್, ಶಿವಮೊಗ್ಗ ಘಟಕದ ಅಧ್ಯಕ್ಷ ಸುಭಾಷ್ ಚಂದ್ರ ತೇಜಸ್ವಿ,ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶಗೌಡ, ಸಂಚಾಲಕ ಗಂಗಾಧರ್, ಪ್ರಧಾನ ಕಾರ್ಯದರ್ಶಿ ನಂಜುಂಡಸ್ವಾಮಿ, ರಮೇಶ್ ಕೆ, ಶಿವ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು ಘಟಕದ ಅಧ್ಯಕ್ಷ ವೇಣು ಚಿನ್ನಪ್ಪ ಕಾರ್ಯಕ್ರಮ ಸಂಯೋಜಿಸಿದರು.

error: Content is protected !!