ಬೆಳ್ತಂಗಡಿ ಧರ್ಮ ಪ್ರಾಂತ್ಯದಿಂದ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

 

 

ಬೆಳ್ತಂಗಡಿ : ಧರ್ಮ ಪ್ರಾಂತ್ಯ ಬೆಳ್ತಂಗಡಿ  ಧರ್ಮಾಧ್ಯಕ್ಷರಾದ ಅತೀ.ವಂ.ಲಾರೆನ್ಸ್ ಮುಕ್ಕುಯಿ ಇವರ ಮಾರ್ಗದರ್ಶನದಲ್ಲಿ ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ ಇದರ ನೇತೃತ್ವದಲ್ಲಿ ಧರ್ಮ ಪ್ರಾಂತ್ಯದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಕಾರಿತಾಸ್ ಇಂಡಿಯಾ ನವದೆಹಲಿಯ ಹಾಗೂ ಸೈಂಟ್ ಕತ್ರಿನಾ ಚರ್ಚ್ ಜರ್ಮನಿ ಇವುಗಳ ಆರ್ಥಿಕ ನೆರವಿನೊಂದಿಗೆ ಆಹಾರದ ಕಿಟ್ ವಿತರಣಾ ಕಾರ್ಯಕ್ರಮ ಅಗಸ್ಟ್ 25 ರಂದು ಸೈಂಟ್ ಜೂಡ್ ಚರ್ಚ್ ಹೆಗ್ಗಳ ಇದರ ವ್ಯಾಪ್ತಿಯಲ್ಲಿ ಬರುವ ಹೆಗ್ಗಳ, ರಾಮನಗರ ಮತ್ತು ಪೆರುಂಪಾಡಿಯಲ್ಲಿ ಹಮ್ಮಿಕೊಳ್ಳಲಾಯಿತು.

ಕೋವಿಡ್ ನಿಂದ ಎಲ್ಲೆಡೆ ಸಮಸ್ಯೆಗಳೇ ತುಂಬಿದೆ, ಇಂತಹ ಸಂದರ್ಭದಲ್ಲಿ ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ಆಹಾರದ ಕಿಟ್ ನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಧನ ಸಹಾಯ ಮಾಡಿದ ದಾನಿಗಳನ್ನು ನೆನೆಸುತ್ತಾ, ಫಲಾನುಭವಿಗಳು ಕೂಡ ತಮ್ಮಿಂದಾದ ಸಹಾಯವನ್ನು ಇತರರಿಗೆ ಮಾಡುವಂತಾಗಬೇಕು ಎಂದು ವಂ.ಫಾ. ಜೋಸೆಫ್ ಚೀರನ್ ಇವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವಂ.ಸಿ.ರೆಸಿ ಎಸ್.ಹೆಚ್ ಕಾನ್ವೆಂಟ್, ಶ್ರೀ.ಶಿನೋಜ್, ಶ್ರೀ.ಸಾಬು, ವಂ.ಸಿ.ಬ್ಲೆಸ್ಸಿ ಇವರು ಉಪಸ್ಥಿತರಿದ್ದರು ಹಾಗೂ ಆಡಳಿತ ಮಂಡಳಿ ಸದಸ್ಯರು ಸಹಕರಿಸಿದರು.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂ.ಫಾ.ಬಿನೋಯಿ ಎ.ಜೆ ಇವರು ಈ ದಿನದ ಕಾರ್ಯಕ್ರಮದ ನೇತೃತ್ವ ವಹಿಸಿದರು.

ವಂ.ಫಾ. ರೋಶನ್ ಪುದುಶೇರಿ, ಧರ್ಮ ಗುರುಗಳು ಸೈಂಟ್ ಜೂಡ್ ಚರ್ಚ್ ಹೆಗ್ಗಳ ಇವರು ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು.

ಕೊಡಗು ಜಿಲ್ಲೆಯ ಹೆಗ್ಗಳ ಧರ್ಮ ಕೇಂದ್ರದ ವ್ಯಾಪ್ತಿಯಲ್ಲಿ 100 ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಯಿತು.

error: Content is protected !!