ಪಾರೆಂಕಿ ಅಂಗನವಾಡಿ ಕೇಂದ್ರದಲ್ಲಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

 

 

ಮಡಂತ್ಯಾರ್: 75 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ವನ್ನು ಸರಕಾರದ ಕೋವಿಡ್ ನಿಯಮಾವಳಿಯಂತೆ ಪಾರೆಂಕಿ ಅಂಗನವಾಡಿ ಕೇಂದ್ರದಲ್ಲಿ ಪಾರೆಂಕಿ ದೇವಸ್ಥಾನದ ಪ್ರದಾನ ಅರ್ಚಕರಾದ ಶ್ರೀಧರ್ ರಾವ್ ಇವರು ಧ್ವಜಾರೋಹಣ ಗೈಯುವ ಮೂಲಕ ಚಾಲನೆ ನೀಡಲಾಯಿತು.ಮುಖ್ಯ ಅತಿಥಿ ಯಾಗಿ ಮಡಂತ್ಯಾರ್ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಶೆಟ್ಟಿ ಪದೆಂಜಿಲ ಮಾತನಾಡಿ ಪಂಚಾಯತ್ ನೆಲೆಯಿಂದ ಅಂಗನವಾಡಿ ಕೇಂದ್ರಕ್ಕೆ 25000 ರೂಪಾಯಿ ಅನುದಾನ ನೀಡುವುದಾಗಿ ಘೋಷಿಸಿದರು. ಇನ್ನೊರ್ವ ಸದಸ್ಯ ಉಮೇಶ್ ಸುವರ್ಣ ಹಲೆಕ್ಕಿ ಅಂಗನವಾಡಿ ಹಳೆ ವಿದ್ಯಾರ್ಥಿ ಪ್ರಸ್ತುತ ಮೆಸ್ಕಾಂ ಅಧಿಕಾರಿಯಾಗಿರುವ ನಿತಿನ್ ಕುಮಾರ್ ಕೋಟೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಯೋಗೀಶ್ ಹೆಗ್ಡೆ ಮಾತನಾಡಿ ಶುಭ ಹಾರೈಸಿದರು. ಜೆಸಿಐ ಮಡಂತ್ಯಾರಿನ ಅಧ್ಯಕ್ಷ ಪ್ರಸನ್ನ ಶೆಟ್ಟಿ ಮಾತನಾಡಿ ಸ್ವಾತಂತ್ರಕ್ಕಾಗಿ ಹೋರಾಡಿದ ಎಲ್ಲಾ ರಾಷ್ಟ್ರೀಯ ಹಾಗೂ ಸ್ಥಳೀಯ ನಾಯಕರನ್ನು ನೆನೆಯುತ್ತಾ ಸ್ಮರಿಸಿ 75 ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಕಾರ್ಯಕ್ರಮ ಕೊರೊನಾ ಮಹಾಮಾರಿಯಿಂದಾಗಿ ವಿಶೇಷ ರೀತಿಯಲ್ಲಿ ಆಚರಿಸಲು ತೊಡಕ್ಕಾಗಿದೆ ಎಂದರು   .ಅಂಗನವಾಡಿ ನಿವೃತ್ತ ಕಾರ್ಯಕರ್ತೆ ಸುಶೀಲ ಟೀಚರ್, ವೇದಾವತಿ ಎಸ್ ಆಚಾರ್ಯ, ಸೂರ್ಯಕಲಾ ರಾವ್, ಜೆಸಿಐ ಉಪಾಧ್ಯಕ್ಷರಾದ ಭರತ್ ಶೆಟ್ಟಿ, ಆಶಾ ಕಾರ್ಯಕರ್ತೆ ಸುನಂದಾ, ಆದಿತ್ಯ ಎಸ್ ರಾವ್ ಸ್ಥಳೀಯರು ಉಪಸ್ಥಿತರಿದ್ದರು.ವಿದ್ಯಾ ಸರಸ್ವತಿ ಭಜನಾ ಮಂಡಳಿಯ ಎಲ್ಲಾ ಸದಸ್ಯರು ಸಹಕರಿಸಿದರು.ರಾಷ್ಟ್ರಗೀತೆ ಯೊಂದಿಗೆ ಧ್ವಜ ನಮನ ಮಾಡಲಾಯಿತು.ಅಂಗನವಾಡಿ ಮುಖ್ಯ ಕಾರ್ಯಕರ್ತೆಯರಾದ ಸುಮಿತ್ರ ಟೀಚರ್ ಧನ್ಯವಾದವಿತ್ತರು.

error: Content is protected !!